Latest

“ಐಟಿಐ ಕಾಲೇಜಿನಲ್ಲಿ ನಿರ್ಲಕ್ಷ್ಯದ ಛಾಯೆ: ವಿದ್ಯಾರ್ಥಿಗಳಿಗೆ ತಲುಪದೆ ಗೋದಾಮಿನಲ್ಲಿ ಹಾಳಾಗುತ್ತಿರುವ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು”

ಗೌರಿಬಿದನೂರು: ಸರ್ಕಾರ ಎಸ್‌ಸಿ, ಎಸ್‌ಟಿ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ, ಶೂ, ಬ್ಯಾಗ್, ಪುಸ್ತಕಗಳು ಮತ್ತು ತರಬೇತಿ ಪರಿಕರಗಳನ್ನು ಒದಗಿಸುತ್ತಿದೆ. ಆದರೆ ಈ ಉಪಕರಣಗಳು ವಿದ್ಯಾರ್ಥಿಗಳಿಗೆ ತಲುಪುವುದಕ್ಕೆ ಮುನ್ನವೇ ಗೋದಾಮಿನಲ್ಲಿ ಹಾಳಾಗಿ ಬಿದ್ದಿದ್ದರಿಂದ ತುಕ್ಕು ಹಿಡಿದು ನಾಶವಾಗುತ್ತಿವೆ. ಈ ಶೋಚನೀಯ ದೃಶ್ಯವು ಗೌರಿಬಿದನೂರು ನಗರದ ಸರ್ಕಾರಿ ಕೈಗಾರಿಕೆ ಮತ್ತು ತರಬೇತಿ ಸಂಸ್ಥೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

ಕೋಟೆ ಪ್ರದೇಶದಲ್ಲಿರುವ ಈ ಐಟಿಐ ಕಾಲೇಜಿನಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಕಟಿಂಗ್ & ಸೊಯಿಂಗ್ ಕೋರ್ಸ್‌ಗಳಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅವರ ಕಲಿಕೆಗೆ ಬೇಕಾದ ಮೂಲಭೂತವಾದ ಸಾಮಗ್ರಿಗಳೇ ಹಾಗೆ ಬಿದ್ದಿರುವುದು ಈ ಶಿಕ್ಷಣ ವ್ಯವಸ್ಥೆಯ ಅಡಚಣೆಗೇನು ಎಂಬ ಪ್ರಶ್ನೆ ಮೂಡಿಸುತ್ತಿದೆ.

ಕಾಲೇಜಿಗೆ ಕೆಲವು ವರ್ಷಗಳ ಹಿಂದೆ ನಿರ್ಮಿಸಲಾದ ನೂತನ ಕಟ್ಟಡದಲ್ಲಿ ತರಬೇತಿ ನಡೆಯುತ್ತಿದ್ದರೂ, ಹಳೆಯ ಕಟ್ಟಡವನ್ನು ಕಚೇರಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಇದೇ ಕಟ್ಟಡದ ಕೊಠಡಿಗಳಲ್ಲಿ ಸರ್ಕಾರದಿಂದ ಬಂದ ಸಮವಸ್ತ್ರಗಳು, ಶೂಗಳು, ಬ್ಯಾಗ್‌ಗಳು, ತರಬೇತಿ ಉಪಕರಣಗಳು, ಬುಕ್ಸ್ ಹಾಗೂ ಸಿಬ್ಬಂದಿಗೆ ಬೇಕಾದ ಮೇಜು-ಕುರ್ಚಿಗಳು ವರ್ಷಗಳಿಂದ ಬೀಗ ಹಾಕಿದ ಕೊಠಡಿಗಳಲ್ಲೇ ಧೂಳು ಹಿಡಿದು ಬಿದ್ದಿವೆ.

ಸ್ಥಳೀಯರ ಆಕ್ರೋಶವನ್ನೂ ಇದರತ್ತ ಸೆಳೆಯುತ್ತಿದೆ. “ಇವೆಲ್ಲವನ್ನೂ ವಿದ್ಯಾರ್ಥಿಗಳಿಗೆ ನೀಡಬೇಕಾದ್ದಾಗಿತ್ತು. ಆದರೆ ಇವು ದೊರೆಯದೆ ವಿದ್ಯಾರ್ಥಿಗಳು ಹಳೆಯವನ್ನೇ ಬಳಕೆ ಮಾಡುತ್ತಿದ್ದಾರೆ. ಹೀಗಿರುವಾಗ ರೂಪಾಯಿಗಳ ಸರಕಸರು ಗೋದಾಮಿನಲ್ಲಿ ಹಾಳಾಗುತ್ತಿರುವುದು ದುಃಖಕರ.

ಹಳೆಯ ಕಟ್ಟಡದ ಇತರ ಭಾಗಗಳ ಸ್ಥಿತಿಯೂ ನೋವಿಗೆ ಕಾರಣವಾಗಿದ್ದು, ಕೊಠಡಿಗಳು ಪಾಳು ಬಿದ್ದಂತಾಗಿವೆ, ಶೌಚಾಲಯಗಳು ನಿರ್ಲಕ್ಷ್ಯದಿಂದ ಕೆಸರುವಣಿಯಾಗಿ ಮಾರ್ಪಟ್ಟಿವೆ. ಗೋಡೆಗಳಲ್ಲಿ ಗುಟ್ಕಾ ಕಲೆಗಳು ಕಣ್ಣಿಗೆ ಬೀಳುತ್ತವೆ. ಕಿಟಕಿಗಳಿಗೆ ಕೋತಿಗಳಿಂದ ರಕ್ಷಣೆಗಾಗಿ ಮುಳ್ಳಿನ ಕಡ್ಡಿಗಳು ಅಳವಡಿಸಲಾಗಿದೆ. ಕೆಲವರು ಈ ಕಟ್ಟಡ ಅಕ್ರಮ ಚಟುವಟಿಕೆಗಳಿಗೆ ಸ್ಥಳವಾಗಿರಬಹುದೆಂಬ ಅನುಮಾನವೂ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲ ಚಂದ್ರು ಅವರು, “ಇತ್ತೀಚೆಗೆ ಸರ್ಕಾರದಿಂದ ವಿತರಣೆಗೆ ಅನುಮತಿ ಲಭ್ಯವಾಗಿದೆ. ತಾಲ್ಲೂಕಿನ ಇತರ ಐಟಿಐಗಳಿಗೆ ಸಹ ಇವು ವಿತರಿಸಲಾಗಬೇಕು. ಶೀಘ್ರದಲ್ಲೇ ಈ ಸಾಮಗ್ರಿಗಳ ವಿತರಣೆಯನ್ನು ಆರಂಭಿಸುತ್ತೇವೆ,” ಎಂದು ಹೇಳಿದ್ದಾರೆ.

ಆದರೆ ಇಲ್ಲಿ ಎತ್ತಲಾಗುತ್ತಿರುವ ಪ್ರಶ್ನೆ ಏನಂದರೆ — ಈ ಸಾಮಗ್ರಿಗಳು ವರ್ಷಗಳ ಕಾಲ ವಿದ್ಯಾರ್ಥಿಗಳಿಂದ ದೂರವಿದ್ದೇನು? ಅದನ್ನು ನೋಡಿಕೊಳ್ಳಬೇಕಾದ ಅಧಿಕಾರಿಗಳ ಜವಾಬ್ದಾರಿಯೇನು? ಸರಕಾರದ ಯೋಜನೆಗಳು ಜಾರಿಗೆ ಬರದೆ ಕಾಗದದಲ್ಲೇ ಉಳಿದರೆ, ವಿದ್ಯಾರ್ಥಿಗಳ ಗುರಿ ಹೇಗೆ ಸಾದ್ಯ?

ಸಮಯಕ್ಕೆ ಮುನ್ನ ನೆರವಿನ ವಸ್ತುಗಳು ತಲುಪದಿದ್ದರೆ, ಸಹಾಯವೀಗ ಸಾಧ್ಯವಲ್ಲ. ಈ ಪ್ರಕರಣ ಸಂಬಂಧಿತ ಇಲಾಖೆಯು ತಕ್ಷಣವೇ ಸೂಕ್ತ ಕ್ರಮ ಕೈಗೊಂಡು, ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಎಲ್ಲರ ಆಶಯ. ವರದಿ:ಅವಿನಾಶ್

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

12 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

24 hours ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

1 day ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

1 day ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

1 day ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

2 days ago