Latest

ಅಟ್ಲಾಂಟಾ ವಿಮಾನ ನಿಲ್ದಾಣದಿಂದ ನಾಪತ್ತೆಯಾದ ಟಾಲಿವುಡ್ ನಟ ಶ್ರೀಧರ್ ರೆಡ್ಡಿಯ ಮಗ: ಪೋಷಕರಿಂದ ಸಹಾಯಕ್ಕೆ ಕೋರಿಕೆ

ಅಮೆರಿಕದ ಅಟ್ಲಾಂಟಾ ನಗರದ ವಿಮಾನ ನಿಲ್ದಾಣದಿಂದ ಟಾಲಿವುಡ್ ನಟ ಶ್ರೀಧರ್ ರೆಡ್ಡಿಯ ಪುತ್ರ ಮನೀಶ್ ರೆಡ್ಡಿ ನಾಪತ್ತೆಯಾಗಿರುವ ಘಟನೆ ಪೋಷಕರಿಗೆ ಭಾರೀ ಆತಂಕ ಉಂಟುಮಾಡಿದೆ. ಜೂನ್ 22ರಂದು ರಾತ್ರಿ 10 ಗಂಟೆಗೆ ಪುತ್ರನಿಂದ ವೀಡಿಯೊ ಕರೆ ಬಂದಿದ್ದಿದ್ದು, ಅದು ಅವರಿಬ್ಬರ ನಡುವಿನ ಕೊನೆಯ ಸಂಪರ್ಕವಾಗಿತ್ತು ಎಂದು ನಟ ಸ್ಪಷ್ಟಪಡಿಸಿದ್ದಾರೆ.

ಮನೀಶ್ ವಿಡಿಯೋ ಕಾಲ್ ಮಾಡಿದ ನಂತರ ಯಾವುದೇ ರೀತಿಯ ಕರೆ ಅಥವಾ ಸಂದೇಶ ಪೋಷಕರಿಗೆ ಬಂದಿಲ್ಲ. ಆತನ ಮೊಬೈಲ್ ಫೋನ್ ಅಟ್ಲಾಂಟಾ ವಿಮಾನ ನಿಲ್ದಾಣದಲ್ಲಿಯೇ ಪತ್ತೆಯಾಗಿದ್ದು, ಬಳಿಕ ಸಂಪರ್ಕ ಸಂಪೂರ್ಣವಾಗಿ ಕಡಿದಿದೆ. “ಅವನ ಫೋನ್ ಕಳೆದುಹೋಗಿದ್ರೆ, ಇತರ ಫೋನ್‌ ಮೂಲಕ ಕೈಚೆಲ್ಲಬಹುದು. ಆದರೆ ಅವನು ಹಾಗೆ ಮಾಡಿಲ್ಲ. ಇದರಿಂದ ನಮಗೆ ಆತಂಕ ಆಗುತ್ತಿದೆ,” ಎಂದು ಶ್ರೀಧರ್ ರೆಡ್ಡಿ ಕಣ್ಣೀರಿಟ್ಟಿದ್ದಾರೆ.

ಘಟನೆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಜೊತೆಗೆ, ಅಮೆರಿಕದಲ್ಲಿ ಇರುವ ತಮ್ಮ ಸ್ನೇಹಿತನನ್ನು ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದ ಶ್ರೀಧರ್ ರೆಡ್ಡಿ, “ಫೋನ್ ಅಲ್ಲಿಯೇ ಇದೆ ಎಂದು ಅಧಿಕೃತ ಮಾಹಿತಿ ಸಿಕ್ಕಿದೆ. ಆದರೆ ಮನೀಶ್ ಎಲ್ಲಿ ಎನ್ನುವುದು ಇನ್ನೂ ಗೊತ್ತಿಲ್ಲ,” ಎಂದು ಹೇಳಿದ್ದಾರೆ.

ಮನೀಶ್‌ ಅಪಹರಣಕ್ಕೆ ಒಳಗಾಗಿರಬಹುದೆಂಬ ಅನುಮಾನವೂ ಪೋಷಕರಲ್ಲಿ ಹುಟ್ಟಿದ್ದು, ಹಣಕ್ಕಾಗಿ ಯಾರಾದರೂ ಈ ಕೃತ್ಯವೆಸಗಿರಬಹುದೆಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ, ಅವರು ಭಾರತೀಯ ರಾಯಭಾರಿ ಕಚೇರಿ, ಎನ್.ಆರ್.ಐ ಸಮುದಾಯ ಹಾಗೂ ಸಾರ್ವಜನಿಕರ ಸಹಾಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

“ದಯವಿಟ್ಟು ನಮ್ಮ ಮಗನ ಪತ್ತೆಗೆ ಸಹಕರಿಸಿ. ಅವನ ಬದುಕು ಸಂಕಟದಲ್ಲಿದೆ. ನಾವು ಆಶಾಕಿರಣವೊಂದನ್ನು ಹಿಡಿದುಕೊಂಡಿದ್ದೇವೆ,” ಎಂದು ಅವರು ಭಾವನಾತ್ಮಕವಾಗಿ ಕೋರಿದ್ದಾರೆ.

 

nazeer ahamad

Recent Posts

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

11 hours ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

15 hours ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

18 hours ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

23 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

2 days ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

2 days ago