ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನಲ್ಲಿ ನಿನ್ನೆ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಹೌದು, ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಿನ್ನೆ ನೀರವ ಮೌನ ಆವರಿಸಿತ್ತು, ಪ್ರತಿಯೊಬ್ಬರ ಕಣ್ಣಾಲೆಗಳು ಒದ್ದೆಯಾಗಿದ್ದವು ಇದಕ್ಕೆ ಕಾರಣ ತಮ್ಮ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು..
ಮಗಳ ಮದುವೆಗೆಂದು ಮಾಡಿದ್ದ ಸಾಲವೇ ಇವರ ಪಾಲಿಗೆ ನೇಣು ಹಗ್ಗವಾಯ್ತಾ? ಹೌದು ಮಗಳ ಮದುವೆಯನ್ನು ಮಾಡಲು ಇತ್ತೀಚಿಗೆ ದಂಪತಿಗಳು ಸುಮಾರು 25 ಲಕ್ಷ ರೂಪಾಯಿಗಳಷ್ಟು ಸಾಲ ಮಾಡಿದ್ದರು ಎನ್ನಲಾಗಿದೆ ಇದನ್ನು ತೀರಿಸುವುದು ಹೇಗೆ ಎಂದು ದಂಪತಿಗಳು ಚಿಂತೆಗೀಡಾಗಿದ್ದರು ಹಾಗಾಗಿ ಗುರುವಾರ ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹನುಮಂತ ಗೌಡ ಪಾಟೀಲ್ (55) ಲಲಿತಾ ಪಾಟೀಲ್ (46) ನೇತ್ರಾ ಎಂ (23) ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಲಬಾಧೆ ತಾಳಲಾರದೆ ತಂದೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡ ಮಗಳು ಕೂಡ ನನ್ನಿಂದಲೇ ಇಷ್ಟೆಲ್ಲಾ ಆಗಿದ್ದು ಎಂದು ಮನನೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related News

error: Content is protected !!