Categories: CrimeLatest

ಕರ್ತವ್ಯದಲ್ಲಿದ್ದ ಪಿಎಸ್‌ಐಗೆ ದಮ್ಕಿ, ಹಲ್ಲೆಗೆ ಯತ್ನ: ಚಿಂತಾಮಣಿಯಲ್ಲಿ ಪುಂಡರ ಅಟ್ಟಹಾಸ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಪಿಎಸ್‌ಐ) ಮೇಲೆಯೇ ಪುಂಡರ ಗುಂಪೊಂದು ದಮ್ಕಿ ಹಾಕಿ, ಹಲ್ಲೆಗೆ ಯತ್ನಿಸಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.

ಘಟನೆ ನಡೆದಿದ್ದು ಏಪ್ರಿಲ್ 3ರ ಮಧ್ಯರಾತ್ರಿ ಸುಮಾರಿಗೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಮ್ಮ ಹಾಗೂ ಜೀಪ್ ಚಾಲಕ ವೇಣುಗೋಪಾಲ್ ಅವರು ರಾತ್ರಿ ಗಸ್ತಿನಲ್ಲಿ ತೊಡಗಿದ್ದರು. ಈ ವೇಳೆ ಚಿನ್ನಸಂದ್ರ ಗ್ರಾಮದಲ್ಲಿ ನಿಯಮ ಮೀರಿ ತಡರಾತ್ರಿ ವರೆಗೆ ಹೋಟೆಲ್ ತೆರೆಯಲ್ಪಟ್ಟಿರುವುದನ್ನು ಗಮನಿಸಿದ ಪಿಎಸ್‌ಐ ನಾಗಮ್ಮ ಅವರು ವಿಚಾರಣೆ ನಡೆಸಿದ್ದಾರೆ.

ಈ ವಿಚಾರಕ್ಕೆ ಕೆರಳಿದ ಸ್ಥಳೀಯರಾದ ನಾಗೇಂದ್ರ, ನವೀನ್, ಪುನೀತ್ ಹಾಗೂ ನರೇಂದ್ರ ಎಂಬುವವರು ಪೊಲೀಸ್ ಅಧಿಕಾರಿ ಎಂಬ ಗೌರವವನ್ನೇ ಲೆಕ್ಕಿಸದೆ ಏಕವಚನದಲ್ಲಿ ನಿಂದಿಸಿ, ದಮ್ಕಿ ಹಾಕಿದ್ದಾರೆ. ಅಲ್ಲದೆ, ಪಿಎಸ್‌ಐ ಮತ್ತು ಚಾಲಕನ ಮೇಲೆ ಹಲ್ಲೆ ನಡೆಸಲು ಮುಂದಾಗಿರುವುದು ಘಟನೆಗೆ ಗಂಭೀರತೆ ತಂದಿದೆ.

ಈ ಹಲ್ಲೆ ಯತ್ನದ ದೃಶ್ಯಗಳು ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಘಟನೆ ನಡೆದು ಮೂರು ದಿನಗಳಾದರೂ ಆರೋಪಿಗಳ ಬಂಧನವಾಗದಿರುವುದು ಸಾರ್ವಜನಿಕರಲ್ಲಿ ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ಸಂಬಂಧ ಪೊಲೀಸರು ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದ್ದರೂ, ಆರೋಪಿಗಳ ಬಂಧನದ ಕುರಿತು ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ.

ಭ್ರಷ್ಟರ ಬೇಟೆ

Recent Posts

ಅಕ್ರಮ ಸಂಬಂಧ ಆರೋಪ: ಬೆಂಗಳೂರಿನಲ್ಲಿ ಯುವತಿಯ ಮೇಲೆ ಗುಂಪು ಹಲ್ಲೆ – ಐವರು ಬಂಧನ

ಬೆಂಗಳೂರು ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಹಿನ್ನೆಲೆ ಯುವತಿಯೊಬ್ಬಳ ಮೇಲೆ ಗುಂಪು…

1 hour ago

ಸ್ನ್ಯಾಪ್‌ಚಾಟ್ ಪರಿಚಯದಿಂದ ಬ್ಲ್ಯಾಕ್‌ಮೇಲ್ ದಂಧೆ: 40 ಲಕ್ಷ ಹಣ, ಚಿನ್ನ ಕಳೆದುಕೊಂಡ ಮಹಿಳೆ – ಇಬ್ಬರು ಬಂಧನ

ಸೋಶಿಯಲ್ ಮೀಡಿಯಾದ ಮೂಲಕ ಪರಿಚಯ ಬೆಳೆಸಿ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣ ದೋಚಿದ ಪ್ರಕರಣ ಬೆಂಗಳೂರಿನಲ್ಲಿ…

1 hour ago

ವೇಶ್ಯಾವಾಟಿಕೆ ಅನುಮಾನ: ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಯುವತಿಗೆ ಹಲ್ಲೆ– ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಪ್ರಕರಣ

ಬೆಂಗಳೂರು ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನಕ್ಕೆ ಉದ್ರಿಕ್ತಗೊಂಡ ಸ್ಥಳೀಯರ ಗುಂಪೊಂದು ಪಶ್ಚಿಮ ಬಂಗಾಳ ಮೂಲದ 20 ವರ್ಷದ…

1 hour ago

ಸುಜಾತಾಳಿಗೆ ಅಕ್ರಮ ಸಂಬಂಧವೇ ಮುಳ್ಳಾಯಿತು: ಆಸ್ತಿಗಾಗಿ ಕೊಂದೆ ಬಿಟ್ಟ ಕ್ರೂರಿ..!

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿಚ್ಛೇದಿತ ಮಹಿಳೆಯೊಬ್ಬಳನ್ನು ಆಸ್ತಿ ಲಪಟಾಯಿಸುವ ಉದ್ದೇಶದಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.…

1 hour ago

ಗೋವಾದಲ್ಲಿ ವೇಗದ ಕಾರಿನ ದುರಂತ: ಕರ್ನಾಟಕದ ಯುವತಿ ಸಾವು – ಉದ್ಯಮಿಯ ಪುತ್ರ ವಶಕ್ಕೆ

ಗೋವಾದ ಬಂಬೋಲಿಮ್–ದೋನಾ ಪೌಲಾ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕ ಮೂಲದ 23 ವರ್ಷದ ಯುವತಿ…

1 hour ago

ಸೋಶಿಯಲ್ ಮೀಡಿಯಾ ಪರಿಚಯ: ಬಾಲಕನನ್ನು ಹೋಟೆಲ್ ಗೆ ಕರೆಸಿ ಮಹಿಳೆಯಿಂದ ಅತ್ಯಾಚಾರ..!

ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾದ ಪರಿಚಯವು ಭೀಕರ ಘಟನೆಗೆ ತಿರುಗಿದ ಪ್ರಕರಣ ಛತ್ತೀಸ್‌ಗಢದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕನೊಂದಿಗೆ ಸ್ನೇಹ ಬೆಳೆಸಿ,…

1 hour ago