Categories: CrimeLatest

ಸುಜಾತಾಳಿಗೆ ಅಕ್ರಮ ಸಂಬಂಧವೇ ಮುಳ್ಳಾಯಿತು: ಆಸ್ತಿಗಾಗಿ ಕೊಂದೆ ಬಿಟ್ಟ ಕ್ರೂರಿ..!

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿಚ್ಛೇದಿತ ಮಹಿಳೆಯೊಬ್ಬಳನ್ನು ಆಸ್ತಿ ಲಪಟಾಯಿಸುವ ಉದ್ದೇಶದಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಘಟನೆಯ ಹಿನ್ನಲೆಯನ್ನು ಬಯಲಿಗೆಳೆದಿದ್ದಾರೆ.

ಕಳೆದ ಮಾರ್ಚ್ 12ರಂದು ಅಥಣಿ ಪಟ್ಟಣದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೃತಳನ್ನು ಸುಜಾತಾ ಪವಾರ್ (35) ಎಂದು ಗುರುತಿಸಿದ್ದು, ಆಕೆಯೊಂದಿಗೆ ಸಂಬಂಧ ಹೊಂದಿದ್ದ ಕುಮಾರ್ ಹವಾಲ್ದಾರ್ ಎಂಬಾತನನ್ನು ಬಂಧಿಸಿದ್ದಾರೆ.

ನಂಬಿಕೆ ಪಡೆದು ದ್ರೋಹ

ಸುಜಾತಾ ಪವಾರ್ 16 ವರ್ಷಗಳ ಹಿಂದೆ ಹಾರೂಗೇರಿ ಮೂಲದ ಯುವಕನೊಂದಿಗೆ ವಿವಾಹವಾಗಿದ್ದು, ದಂಪತಿಗೆ ಮಗನಿದ್ದಾನೆ. ಆದರೆ ಪತಿಯ ಕಿರುಕುಳದಿಂದ ಬೇಸತ್ತು, 13 ವರ್ಷಗಳ ನಂತರ ವಿಚ್ಛೇದನ ಪಡೆದು ತವರು ಮನೆ ಸೇರಿದ್ದಳು. ಬಳಿಕ ಪತಿಯರಿಂದ ದೊರೆತ ಮನೆ ಮಾರಾಟ ಮಾಡಿ, ಆ ಹಣದಿಂದ ಅಥಣಿ ಹೊರವಲಯದಲ್ಲಿ ಜಾಗ ಖರೀದಿಸಿ, ಹೊಸ ಮನೆ ನಿರ್ಮಾಣ ಮಾಡಲು ಮುಂದಾಗಿದ್ದಳು.

ಈ ಸಂದರ್ಭದಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಕುಮಾರ್ ಹವಾಲ್ದಾರ್ ಪರಿಚಯವಾಗಿದ್ದನು. ಮನೆ ಕಟ್ಟಿಕೊಡುವ ನೆಪದಲ್ಲಿ ಸುಜಾತಾಳ ವಿಶ್ವಾಸ ಗಳಿಸಿದ ಆತ, ಮದುವೆಯ ಮಾತು ನೀಡಿ ಆಕೆಯೊಂದಿಗೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದನು. ಆದರೆ ಕಳೆದ ಎರಡು ವರ್ಷಗಳಿಂದ ಇವರ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು ಎಂದು ತಿಳಿದುಬಂದಿದೆ.

ಆಸ್ತಿ ಮೇಲೆ ಕಣ್ಣು

ಮದುವೆಯಾಗಲು ಮನೆ ತನ್ನ ಹೆಸರಿಗೆ ಮಾಡಿಕೊಡಬೇಕು ಎಂದು ಕುಮಾರ್ ಸುಜಾತಾಳ ಮೇಲೆ ಒತ್ತಡ ಹಾಕಲು ಪ್ರಾರಂಭಿಸಿದ್ದನು. ಆದರೆ ತನ್ನ ಮಗನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸುಜಾತಾ ಇದಕ್ಕೆ ನಿರಾಕರಿಸಿದ್ದಳು. ಇದರಿಂದ ಕೋಪಗೊಂಡ ಆರೋಪಿ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.

ಮಾರ್ಚ್ 5ರಂದು ಮಧ್ಯಾಹ್ನ ಮದ್ಯಪಾನ ಮಾಡಿ ಬಂದ ಕುಮಾರ್, ಸುಜಾತಾಳೊಂದಿಗೆ ಜಗಳವಾಡಿ, “ಮಾತನಾಡಬೇಕು” ಎಂದು ಹೇಳಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಬಳಿಕ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಹತ್ಯೆ ಮಾಡಿ, ಮನೆಗೆ ವಾಪಸ್ಸು ಬಂದು ಆಕೆಯ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ.

ಸುಳ್ಳಿನಿಂದ ತಪ್ಪಿಸಿಕೊಳ್ಳಲು ಯತ್ನ

ಘಟನೆಯ ಬಳಿಕ ಸುಜಾತಾಳ 15 ವರ್ಷದ ಮಗ ಪ್ರಶ್ನಿಸಿದಾಗ, “ಅಮ್ಮ ಜಗಳ ಮಾಡಿಕೊಂಡು ಗೆಳತಿಯ ಮನೆಗೆ ಹೋಗಿದ್ದಾಳೆ” ಎಂದು ಸುಳ್ಳು ಹೇಳಿದ್ದಾನೆ. ಅಲ್ಲದೇ ತನ್ನನ್ನು ಬೈಯುತ್ತಾಳೆ ಎಂದು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ ಎಂದು ಹೇಳಿ, ತಾನೂ ಜಾತ್ರೆಗೆ ಹೋಗುತ್ತಿದ್ದೇನೆಂದು ನಾಟಕವಾಡಿ ಅಲ್ಲಿಂದ ತೆರಳಿದ್ದಾನೆ.

ಇನ್ನೊಂದೆಡೆ, ಸುಜಾತಾಳ ತಾಯಿ ಮಗಳು ಸ್ನೇಹಿತರೊಂದಿಗೆ ಹೊರಗಡೆ ಹೋಗಿದ್ದಾಳೆ ಎಂದು ಭಾವಿಸಿ ಶಂಕೆಪಡಲಿಲ್ಲ. ಆದರೆ ಪೊಲೀಸರು ಮನೆಗೆ ಬಂದು ಸುಜಾತಾಳ ಸಾವಿನ ಸುದ್ದಿ ನೀಡಿದ ಬಳಿಕ, ಪ್ರಕರಣದ ನಿಜ ಸ್ವರೂಪ ಬಹಿರಂಗವಾಯಿತು.

ಈ ಘಟನೆ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಆಸ್ತಿ ಮೇಲೆ ಕಣ್ಣಿಟ್ಟ ವ್ಯಕ್ತಿಯ ಕ್ರೂರ ಮನಸ್ಥಿತಿಯನ್ನು ಬಿಚ್ಚಿಡುವುದರೊಂದಿಗೆ, ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಚಿಂತನೆಗೆ ಕಾರಣವಾಗಿದೆ.

ಭ್ರಷ್ಟರ ಬೇಟೆ

Recent Posts

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

2 hours ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

5 hours ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

10 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

1 day ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

1 day ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago