ಮುಂಡಗೋಡ: ಪಟ್ಟಣದ ಜ್ಯುವೆಲರ್ಸ್ ಅಂಗಡಿಯೊಂದರಲ್ಲಿ ಇಬ್ಬರು ಕಳ್ಳರು ತಮ್ಮ ಕೈಚಳಕ ತೋರಿಸಿ ಬರೋಬ್ಬರಿ ₹1.30 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ಶ್ರೀ ರಾಜಲಕ್ಷ್ಮೀ ಜ್ಯುವೆಲರ್ಸ್‌ನಲ್ಲಿ ಅಕ್ಟೋಬರ್ 17ರಂದು ಮಧ್ಯಾಹ್ನ 3.45ರಿಂದ 4.15ರ ನಡುವೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ.
ಅಂಗಡಿಯಲ್ಲಿದ್ದ ಸುಮಾರು 700 ಗ್ರಾಂ ತೂಕದ ನಾಲ್ಕು ಜೊತೆ ಬೆಳ್ಳಿ ಕಾಲುಚೈನ್‌ಗಳನ್ನು ಇಬ್ಬರು ಅಪರಿಚಿತರು ಅಂಗಡಿಯ ಸಿಬ್ಬಂದಿಗೆ ತಿಳಿಯದಂತೆ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳವಾದ ಆಭರಣಗಳ ಒಟ್ಟು ಮೌಲ್ಯ ಸುಮಾರು ₹1.30 ಲಕ್ಷ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 229/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 305ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಸ್ನೇಹಿತನ ಮೇಲಿನ ನಂಬಿಕೆಯಿಂದ ಮನೆಯ ಕೀಲಿ ಕೈಯನ್ನು ಆತನಿಗೆ ನೀಡಿ ಹೋದ ವ್ಯಕ್ತಿಯೊಬ್ಬರಿಗೆ ಭಾರಿ ನಷ್ಟ ಉಂಟಾಗಿರುವ ಘಟನೆ ಬೆಂಗಳೂರಿನ…
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಹತ್ಯೆ ಮಾಡಲು ಪತ್ನಿ ಹಾಗೂ ಆಕೆಯ ಪ್ರಿಯಕರ ಸಂಚು ರೂಪಿಸಿರುವ…
ಸೀತಾಪುರ: 17 ವರ್ಷಗಳ ದಾಂಪತ್ಯ ಜೀವನ, ಇಬ್ಬರು ಮಕ್ಕಳು… ಇಷ್ಟೆಲ್ಲಾ ಇದ್ದರೂ ಪತ್ನಿ ಮತ್ತೊಬ್ಬನನ್ನು ಪ್ರೀತಿಸಿ ಆತನೊಂದಿಗೆ ಬದುಕಲು ನಿರ್ಧರಿಸಿದಾಗ,…
ಜೈಪುರ: ಪತಿಯ ಜ್ಯೂಸ್‌ಗೆ ವಿಷ ಬೆರೆಸಿ ಹತ್ಯೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ…
ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತಾತ್ಮಕ ಹಿತದೃಷ್ಟಿಯಿಂದ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ವೃಂದದ ಒಟ್ಟು 87 ಅಧಿಕಾರಿಗಳನ್ನು ವರ್ಗಾವಣೆ ಮಾಡಿ…
ಗೌರಿಬಿದನೂರು: ನಗರದ ಗಾಂಧಿ ವೃತ್ತದ ಸಮೀಪ ಮಂಗಳವಾರ ಬೆಳಿಗ್ಗೆ ಹಿರಿಯ ವಕೀಲರೊಬ್ಬರ ಮೇಲೆ ಅಪರಿಚಿತ ವ್ಯಕ್ತಿ ಚಾಕುವಿನಿಂದ ದಾಳಿ ನಡೆಸಿ…