Latest

ಮೂಢನಂಬಿಕೆಯ ಮಾಯಾಜಾಲ ಬಯಲು: ಭಕ್ತರಿಗೆ ಮೂತ್ರ ಕೂಡಿಸಿ ಹಲ್ಲೆ ನಡೆಸಿದ ನಕಲಿ ಬಾಬ.!

ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ), ಜುಲೈ 20: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವೈಜಾಪುರ ತಹಸೀಲ್‌ನ ಶಿಯುರ್ ಗ್ರಾಮದಲ್ಲಿರುವ ಒಂದು ದೇವಸ್ಥಾನದಲ್ಲಿ ‘ಅಧ್ಯಾತ್ಮಿಕ ಚಿಕಿತ್ಸೆ’ ಹಾಗೂ ‘ಅಘೋರಿ ತಂತ್ರ’ದ ಹೆಸರಿನಲ್ಲಿ ಭಕ್ತರ ಮೇಲೆ ಅಮಾನವೀಯ ಕಿರುಕುಳ ನೀಡಿ, ನಕಲಿ ಬಾಬಾ ಸಾರ್ವಜನಿಕರ ಭಾವನೆಗಳನ್ನು ದುರ್ಬಳಕೆ ಮಾಡಿದ್ದ ಘಟನೆ ಬಯಲಾಗಿದ್ದು, ಈ ಬೆಳವಣಿಗೆ ರಾಜ್ಯದೆಲ್ಲೆಡೆ ಆಕ್ರೋಶ ಹುಟ್ಟುಹಾಕಿದೆ.

ಪುತ್ತಲಿಯಂತೆ ಶಾಂತವಾಗಿ ಬಾಬಾಗೆ ಭಕ್ತಿಯಿಂದ ನಮನ ಸಲ್ಲಿಸುತ್ತಿದ್ದ ಜನರು, ಈಗ ಆ ಬಾಬಾದ ಅಸಲಿ ಮುಖ ನೋಡಿ ಬೆಚ್ಚಿಬಿದ್ದಿದ್ದಾರೆ. ‘ನನಗೆ ಅಲೌಕಿಕ ಶಕ್ತಿಗಳಿವೆ’ ಎಂದು ಜನರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದ ಸಂಜಯ್ ಪಗಾರೆ ಎಂಬ ಸ್ವಯಂ ಘೋಷಿತ ಬಾಬಾ, ಮಹಿಳೆಯರು ಹಾಗೂ ಪುರುಷರನ್ನು ‘ಪಾಪ ಶುದ್ಧಿ’ ಹೆಸರಿನಲ್ಲಿ ನಾನಾ ವಿಧದ ಹಿಂಸೆಗಳಿಗೆ ಒಳಪಡಿಸುತ್ತಿದ್ದ.

ಮೂತ್ರ ಕುಡಿಸುವ ವಿಕೃತಿ, ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಆರೋಪ

ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಪಗಾರೆ, ಕೆಲವರ ಮುಖದ ಮೇಲೆ ಬೂಟು ಹಾಕಿ ತುಳಿಯುತ್ತಿದ್ದ. ಮೂತ್ರ ಕುಡಿಸುತ್ತಿದ್ದ, ದೇವದೂತರ ಅಶರೀರ ಶಕ್ತಿ ಸೇರಬೇಕೆಂದು ಹೇಳಿ ಕೋಲಿನಿಂದ ಹೊಡೆತ ನೀಡುತ್ತಿದ್ದ. ಕೆಲವೊಮ್ಮೆ ತಮ್ಮ ಬಾಯಿಗೆ ಬೂಟು ತುರುಕಿಸುವಂತೆ ಕೂಡ ಸೂಚಿಸುತ್ತಿದ್ದ. ಆತನ ಈ ಪೈಶಾಚಿಕ ವರ್ತನೆಗೆ ಅನೇಕರು ದಿಗ್ಭ್ರಮೆಗೊಂಡು ಸಹನೆ ತೀರದ ಸ್ಥಿತಿಗೆ ಬಿದ್ದಿದ್ದರು.

ಭಕ್ತರಲ್ಲಿ ಕೆಲವರಿಗೆ ‘ಮಕ್ಕಳಾಗದ ಸಮಸ್ಯೆ’, ‘ದೆವ್ವ ಹಿಡಿದಿದೆ’, ‘ವಿವಾಹವಾಗುವುದಿಲ್ಲ’ ಎಂಬ ಭಯ ಹುಟ್ಟಿಸಿ, ಅಘೋರಿ ತಂತ್ರ ಹೇಳಿಕೊಂಡು ಅವರನ್ನು ದೆವ್ವವಾಡಿಸಿದಂತೆ ಕಾಣಿಸುತ್ತಿದ್ದ. ಈ ವೇಳೆ ಕೆಲವು ಮಹಿಳೆಯರಿಗೂ ಗಂಭೀರ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

ಗುಪ್ತ ಕ್ಯಾಮೆರಾದ ಸಹಾಯದಿಂದ ಕಳ್ಳಚಟಕೆ ಬಯಲು

ಈ ನಕಲಿ ಬಾಬಾದ ವರ್ತನೆಗಳ ಬಗ್ಗೆ ಅನುಮಾನಗೊಂಡ ಮುಕ್ತ ಚಿಂತಕರ ಹಾಗೂ ಮೂಢನಂಬಿಕೆ ವಿರೋಧಿ ಸಂಘಟನೆಯ ಕಾರ್ಯಕರ್ತರು ಗುಪ್ತ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಿದರು. ವಿಡಿಯೋಗಳಲ್ಲಿ, ಭಕ್ತನೊಬ್ಬನನ್ನು ನೆಲದ ಮೇಲೆ ಮಲಗಿಸಿ ಮುಖದ ಮೇಲೆ ಹೆಜ್ಜೆ ಹಾಕಿದ ದೃಶ್ಯ, ಬೂಟಿನ ವಾಸನೆ ಕೊಡಿಸುವ ನಾಟಕಗಳು, ಡ್ರಮ್ ಬಾರಿಸುವ ಡ್ರಾಮಾ ಎಲ್ಲವೂ ದಾಖಲಾಗಿವೆ. ಈ ದೃಶ್ಯಗಳು ಇದೀಗ  ವೈರಲ್ ಆಗಿವೆ.

ಪೊಲೀಸರು ಕ್ರಮ ಕೈಗೊಂಡು ಬಂಧನ

ಸಂಜಯ್ ಪಗಾರೆ ವಿರುದ್ಧ ಈಗ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಲ್ಲೆ, ವಂಚನೆ, ಮಾನಸಿಕ ಪೀಡನೆ ಹಾಗೂ ಮೂಢನಂಬಿಕೆಗೆ ಉತ್ತೇಜನ ನೀಡಿರುವ ಆರೋಪಗಳನ್ನು ಪೊಲೀಸರು ದಾಖಲಿಸಿದ್ದಾರೆ. ಬಂಧನಕ್ಕೊಳಗಾದ ಬಾಬಾ ಈಗ ಪೊಲೀಸ್ ವಶದಲ್ಲಿದ್ದಾರೆ.

nazeer ahamad

Recent Posts

ಸಾಲ ಮರುಪಾವತಿ ಪ್ರಕರಣ: ಶಿರಸಿಯ ರವೀಶ ಹೆಗಡೆ ಭಟ್ಕಳ ಪೊಲೀಸರ ವಶಕ್ಕೆ

ಭಟ್ಕಳ: ಸಾಲ ಪಡೆದ ಹಣವನ್ನು ಮರುಪಾವತಿಸದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿರಸಿ ಮೂಲದ ರವೀಶ ವೆಂಕಟ್ರಮಣ ಹೆಗಡೆ ಅವರನ್ನು ಭಟ್ಕಳ…

13 hours ago

52ರಲ್ಲೂ ಮಲೈಕಾ ಅರೋರಾ ಲವ್ ಲೈಫ್‌ ಸದ್ದು: ನಬೀಲ್ ನದ್ಲವಿ ಜೊತೆ ಫೋಟೋ ವೈರಲ್, ಹೊಸ ಸಂಬಂಧದ ಗುಸುಗುಸು!

ಮುಂಬೈ: ಬಾಲಿವುಡ್‌ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ…

14 hours ago

ಬೈಕ್‌ಗೆ ಬೆಂಕಿ ಹಾಕಿದ್ದು ರಾಜಕೀಯ ದ್ವೇಷಕ್ಕಲ್ಲ; ಪತಿಯನ್ನೇ ಕೊಲ್ಲಲು ಪತ್ನಿಯ ಸಂಚು! 6 ಮಂದಿ ಬಂಧನ

ಚಂದ್ರಗಿರಿ (ತಿರುಪತಿ): ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ತನಿಖೆಯ ಬಳಿಕ ಬೇರೆಯದೇ ತಿರುವು…

14 hours ago

ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಪಾಲಿಗೆ ಯಮನಾದ: 6 ದಿನದ ಹಸುಗೂಸಿನೊಂದಿಗೆ ಪರಾರಿ!

ದಾವಣಗೆರೆ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಸಾವಿಗೆ ಕಾರಣನಾದ ಆರೋಪ ಕೇಳಿಬಂದಿದ್ದು, ಮೃತದೇಹವನ್ನು ಪೊಲೀಸ್ ಠಾಣೆ ಬಳಿಯ ರಸ್ತೆಯಲ್ಲಿ ಬಿಟ್ಟು…

14 hours ago

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

1 day ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

2 days ago