ಕ್ರಿಕೆಟ್ ಅಭಿಮಾನಿಗಳು “ಕ್ಯಾಪ್ಟನ್ ಕೂಲ್” ಎಂದು ಪ್ರೀತಿಯಿಂದ ಕರೆಯುವ ಮಹೇಂದ್ರ ಸಿಂಗ್ ಧೋನಿ, ಇದೀಗ ತಮ್ಮ ಈ ಪ್ರಸಿದ್ಧ ಅಡ್ಡಹೆಸರನ್ನು ಕಾನೂನು ಬದ್ಧವಾಗಿ ತನ್ನದಾಗಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಮೈದಾನದಲ್ಲಿ ತಾಳ್ಮೆ, ಶಾಂತಿ ಹಾಗೂ ಷಾಟ್ ತೀರ್ಮಾನಗಳಿಂದ ದಿಟ್ಟ ನಾಯಕತ್ವ ತೋರಿಸಿದ್ದ ಧೋನಿಗೆ ಈ ಬಿರುದು ತಮ್ಮದೇ ಆದ ವೈಯಕ್ತಿಕ ಗುರುತಾಗಿ ಪರಿಣಮಿಸಿದ್ದು, ಇದೀಗ ಅದನ್ನು ಅಧಿಕೃತವಾಗಿ ಟ್ರೇಡ್‌ಮಾರ್ಕ್ ಆಗಿ ನೋಂದಾಯಿಸಲು ಮೊದಲ ಹೆಜ್ಜೆ ಇಟ್ಟಿದ್ದಾರೆ.
ಜೂನ್ 16, 2025ರಂದು ಟ್ರೇಡ್‌ಮಾರ್ಕ್ ಜರ್ನಲ್‌ನಲ್ಲಿ ಧೋನಿಯ “ಕ್ಯಾಪ್ಟನ್ ಕೂಲ್” ಅರ್ಜಿಯ ಪ್ರಕಟಣೆ ನಡೆಯಿತು. ಟ್ರೇಡ್‌ಮಾರ್ಕ್ ಪೋರ್ಟಲ್ ಈ ಅರ್ಜಿಯನ್ನು ಮಂಜೂರಾಗಿಸಿದ್ದು, ಈ ಹೆಸರನ್ನು ಇನ್ನು ಮುಂದೆ ಧೋನಿ ಹೊರತುಪಡಿಸಿ ಯಾರು ಬಳಸಲು ಸಾಧ್ಯವಿಲ್ಲ.
ಆದರೆ ಈ ಅರ್ಜಿ ಮೊದಲ ಬಾರಿಗೆ ಸಲ್ಲಿಸಿದಾಗಲೇ, ಇದಕ್ಕೆ ವಿರೋಧದ ಧ್ವನಿ ಕೇಳಿಬಂದಿತ್ತು. ಟ್ರೇಡ್‌ಮಾರ್ಕ್ಸ್ ಕಾಯ್ದೆಯ ಸೆಕ್ಷನ್ 11(1) ಅಡಿಯಲ್ಲಿ ಈ ಹೆಸರಿನಂತೆ ಇದ್ದ ಗುರುತುಗಳು ಜನರಲ್ಲಿ ಗೊಂದಲ ಉಂಟುಮಾಡಬಹುದು ಎಂಬ ಆಕ್ಷೇಪಣೆ ವ್ಯಕ್ತವಾಗಿತ್ತು. ಆದರೆ ಧೋನಿ ಪರ ವಕೀಲರು ಮಂಡಿಸಿದ ಅರ್ಥಪೂರ್ಣ ವಾದಗಳು ನಿರ್ಣಾಯಕವಾದವು.
ವಕೀಲರ ಪ್ರಕಾರ, “ಕ್ಯಾಪ್ಟನ್ ಕೂಲ್” ಎಂಬ ಪದ ಧೋನಿಯ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದ ಅವಿಭಾಜ್ಯ ಭಾಗವಾಗಿದೆ. ಕ್ರಿಕೆಟ್ ಅಭಿಮಾನಿಗಳು, ಮಾಧ್ಯಮಗಳು ಈ ಪದವನ್ನು ವರ್ಷಗಳಿನಿಂದ ಧೋನಿಗೆ ಸಾಂಕೇತಿಕವಾಗಿ ಬಳಸುತ್ತಿದ್ದು, ಇದು ಇತರರಿಗಿಂತ ಧೋನಿಗೆ ವಿಶಿಷ್ಟವಾದ ಸಂಬಂಧವನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದರು.
ಈ ವಾದಗಳನ್ನು ಪರಿಗಣಿಸಿದ ಟ್ರೇಡ್‌ಮಾರ್ಕ್ ಅಧಿಕಾರಿಗಳು ಧೋನಿಗೆ ಈ ಹೆಸರನ್ನು ಟ್ರೇಡ್‌ಮಾರ್ಕ್ ರೂಪದಲ್ಲಿ ಮಂಜೂರು ಮಾಡಿದ್ದಾರೆ. ಇದೀಗ ಧೋನಿಗೆ ಮಾತ್ರ ಈ ಬಿರುದನ್ನು ಬಳಸುವ ಕಾನೂನು ಹಕ್ಕು ಲಭಿಸಿದೆ.
ಇದಾದ ಮೇಲೆ, ಧೋನಿಯ ಈ ಹೆಸರನ್ನು ಕಮರ್ಶಿಯಲ್ ಗಾಗಿ ಬಳಸಲು ಇತರರು ಮುಂದೆ ಬರುವುದು ಕಠಿಣ. ಅವರು ಅನಧಿಕೃತವಾಗಿ ಈ ಹೆಸರನ್ನು ಉಪಯೋಗಿಸಿದರೆ, ಕಾನೂನು ಕ್ರಮ ಎದುರಿಸಲು ಸಿದ್ಧರಾಗಬೇಕಾಗುತ್ತದೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…