Latest

ವಂಚಕ ಪ್ರೇಮಿಯ ಲವ್ ಡ್ರಾಮಾ ಕೊನೆಗೆ ದಾರುಣ ಅಂತ್ಯ: ನದಿಗೆ ಹಾರಿ ವಿವಾಹಿತೆ ಮಹಿಳೆ ಆತ್ಮಹತ್ಯೆ!

ವಿಜಯನಗರ: ಇನ್‌ಸ್ಟಾಗ್ರಾಂನಲ್ಲಿ ಶುರುವಾಯಿಸಿದ ಪರಿಚಯ ಪ್ರೀತಿಯಾಗಿ ಬೆಳೆದಿದ್ದು, ಕೊನೆಗೆ ಸಾವು ಎಂಬ ಕರಾಳ ಅಂತ್ಯಕ್ಕೆ ಕಾರಣ ಆಗಿದೆ. ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎಂಬ ವಿವಾಹಿತ ಮಹಿಳೆ, ಪ್ರೇಮಿ ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದ್ದು, ಇದನ್ನು ದೃಢಪಡಿಸುವ ಡೆತ್ ನೋಟ್ ಕೂಡ ಸಿಕ್ಕಿದೆ.

ಪ್ರೇಮದ ಆರಂಭ ಇನ್‌ಸ್ಟಾಗ್ರಾಂನಲ್ಲಿ:

ಅಕ್ಟೋಬರ್ 2024ರಲ್ಲಿ ಜ್ಯೋತಿ ಮತ್ತು ಶಿವಮೊಗ್ಗ ಜಿಲ್ಲೆಯ ಸುಗೂರು ಮೂಲದ ಬಸವರಾಜ್ ಎಂಬ ಯುವಕನಿಗೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದದ್ದು, ನಂತರ ಪ್ರೀತಿಯಾಗಿ ರೂಪಾಂತರಗೊಂಡಿತ್ತು. ಮೊದಲಿಗೆ ಬಸವರಾಜ್ ಸ್ವತಃ ಮೆಸೇಜ್ ಮೂಲಕ ಸಂಪರ್ಕ ಸಾಧಿಸಿದ್ದ. ಪ್ರಾರಂಭದಲ್ಲಿ ಜ್ಯೋತಿ ಆಸಕ್ತಿಯಿಲ್ಲದಿದ್ದರೂ, ಆಸಕ್ತಿಯಿಂದ ಮೆಸೇಜ್ ಮಾಡುವ ಮೂಲಕ ತನ್ನ ಹೃದಯ ಗೆದ್ದಿದ್ದ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ.

ವಿಶ್ವಾಸಘಾತ ಮತ್ತು ನೋವಿನ ನಿಜಕಥೆ:

ಬಸವರಾಜ್, ಜ್ಯೋತಿಯೊಂದಿಗೆ ಒಡನಾಟ ಮುಂದುವರೆಸಿದ್ದರೂ, ಇತರ ಯುವತಿಯರ ಜೊತೆಗೂ ಸಂಪರ್ಕದಲ್ಲಿದ್ದ ಎಂಬ ವಿಚಾರ ತಿಳಿದ ಜ್ಯೋತಿ, ಆತನ ವಾಟ್ಸಾಪ್, ಇನ್‌ಸ್ಟಾಗ್ರಾಂ, ಜಿಮೇಲ್ ಖಾತೆಗಳನ್ನು ಹ್ಯಾಕ್ ಮಾಡಿದ್ದಳು. ಈತನಿಗೆ ನಂಬಿ, ಲಾಡ್ಜ್‌ಗಳಿಗೆ ಹೋಗಿ ಪೋಟೋಸ್, ಸೆಕ್ಸ್ ಮಾಡಿದ್ದು ಕೂಡ ನನ್ನ ಪೋನ್ ನಲ್ಲಿ, ರೆಕಾರ್ಡಿಂಗ್‌ಗಳು ತನ್ನ ಮೊಬೈಲ್‌ನಲ್ಲಿ ಇವೆ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ.

ಮದುವೆ ವಾಗ್ದಾನ ವಿಫಲ – ಆತ್ಮಹತ್ಯೆ:

ಬಸವರಾಜ್ ಮದುವೆಯಾಗುವುದಾಗಿ ಮಾತುಕತೆ ನಡೆಸಿದ್ದರೂ, ನಂತರ ಅವಳನ್ನು ದೂರ ಮಾಡುತ್ತಾ ಶುರುವಿಟ್ಟಿದ್ದ. ಇದರಿಂದ ತೀವ್ರ ಮನೋನೊಂದಿಗೊಳಗಾದ ಜ್ಯೋತಿ, ತನ್ನ ಬದುಕಿಗೆ ಅಂತ್ಯ ಹಾಕಿಕೊಳ್ಳಲು ನಿರ್ಧರಿಸಿದ್ದಳು. ಜುಲೈ 26ರಂದು ತುಂಗಭದ್ರಾ ನದಿಯ ಸೇತುವೆಯಿಂದ ಜಂಪ್ ಮಾಡಿದ ಘಟನೆಯನ್ನು ದೃಷ್ಟಿಪಥದಲ್ಲಿ ಕಂಡ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಶವವನ್ನೇ ದೋರಿ ಹೊರತೆಗೆಯಲಾಗಿದೆ.

ಡೆತ್ ನೋಟ್‌ನಲ್ಲಿರುವ ಭಾರಿ ಆರೋಪ:

ಡೆತ್ ನೋಟ್‌ನಲ್ಲಿ ಜ್ಯೋತಿ, “ನನ್ನ ಸಾವಿಗೆ ಸುಗೂರು ಶಿವಮೂರ್ತಿ ಗಾಣಿಗನ ಮಗ ಬಸವರಾಜ್ ಕಾರಣ. ಈತ ನನಗೆ ಮದುವೆ ಆಗ್ತೀನಿ ಅಂತ ಸುಳ್ಳು ಹೇಳಿ, ನನ್ನೊಂದಿಗೆ ಶಾರೀರಿಕ ಸಂಬಂಧ ಬೆಳೆಸಿದ. ನನ್ನ ಗಂಡನನ್ನೂ ಸಾಯಿಸಿ ನಿನ್ನ ಹೆಸರಿಗೆ ಆಸ್ತಿ ಮಾಡಿಸಿಕೊಳ್ಳೋಕೆ ತಯಾರಿ ತೋರಿಸಿದ್ದ. ಇವನಿಗೂ ಮರಣದಂಡನೆ ಆಗಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ:

ಪೊಲೀಸರು ಈಗಾಗಲೇ ಡೆತ್ ನೋಟ್‌ ಮತ್ತು ಮೊಬೈಲ್‌ ಡೇಟಾವನ್ನು ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಸವರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ತಯಾರಿ ನಡೆಯುತ್ತಿದೆ.

nazeer ahamad

Recent Posts

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

17 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

21 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago