ಕೋಲಾರ: ಪ್ರೇಮ, ನಂಬಿಕೆ ಮತ್ತು ವಿಷಾದದ ಮಿಶ್ರಣವಿರುವ ಘಟನೆ ಕೋಲಾರ ಜಿಲ್ಲೆಯ ಪ್ರಶಾಂತ್ ನಗರದಲ್ಲಿ ನಡೆದಿದೆ. ಪತ್ನಿಯ ಮೇಲಿದ್ದ ಶಂಕೆಯ ಭೂತಕ್ಕೆ ಬಲಿಯಾದವರು ಬೆಂಗಳೂರಿನ ಹೊಸಕೋಟೆ ಮೂಲದ ಯುವಕನೊಬ್ಬ.
ಕೊಲೆಯಾದ ವ್ಯಕ್ತಿಯನ್ನು ಅಮೀನ್ (30) ಎಂದು ಗುರುತಿಸಲಾಗಿದ್ದು, ಆರೋಪಿಯು ಇರ್ಫಾನ್ ಎಂಬಾತ. ಅಕ್ರಮ ಸಂಬಂಧದ ಶಂಕೆಯಿಂದಾಗಿ ಇರ್ಫಾನ್ ತನ್ನ ಪತ್ನಿ ಹುಸ್ನಾ ಮತ್ತು ಅಮೀನ್ ನಡುವೆ ಸಂಬಂಧವಿದೆ ಎಂಬ ಆಶಂಕೆಯಲ್ಲಿ ಈ ಭೀಕರ ಹತ್ಯೆ ಎಸಗಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ, ಇರ್ಫಾನ್ ಪತ್ನಿ ಹುಸ್ನಾ ಜೊತೆಗಿನ ಸಂಬಂಧವನ್ನು ಕುರಿತು ಅಮೀನ್ ಮೇಲೆ ಹಲವು ಬಾರಿ ಶಂಕೆ ವ್ಯಕ್ತಪಡಿಸಿದ್ದ. ಈ ಹಿನ್ನೆಲೆಯಲ್ಲಿ ಇಂದು ಕೋಲಾರದಲ್ಲಿ ಹುಸ್ನಾದ ಅಕ್ಕನ ಮನೆಯಲ್ಲಿ ನಡೆದ ರಾಜಿ ಪಂಚಾಯ್ತಿಯಲ್ಲಿ ಮಾತಿಗೆ ಮಾತು ಬೆಳೆದು ವಾಗ್ವಾದ ಗಲಾಟೆಗೆ ತಿರುಗಿತ್ತು. ಸಿಟ್ಟಿಗೆದ್ದ ಇರ್ಫಾನ್ ಮಚ್ಚು ಮೂಲಕ ಅಮೀನ್‌ನನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಪೊಲೀಸರು ಇರ್ಫಾನ್ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೋಲಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ: ಜಿಲ್ಲೆಯಲ್ಲಿ ಪಾರದರ್ಶಕ, ಜನಪರ ಹಾಗೂ ಪರಿಣಾಮಕಾರಿ ಆಡಳಿತ ನೀಡಲು ಎಲ್ಲಾ ಸರ್ಕಾರಿ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮುಖ್ಯಮಂತ್ರಿಗಳು…
ಮಾರುಕಟ್ಟೆಯಿಂದ ಮನೆಗೆ ತೆರಳಲು ಖಾಸಗಿ ಬಸ್ ಹತ್ತಿದ್ದ ಯುವತಿಗೆ ಮಾರ್ಗಮಧ್ಯೆ ಕಿರುಕುಳ ನೀಡಿದ ಘಟನೆ ನಡೆದಿದೆ. ಬಸ್ ಚಲಿಸಲು ಆರಂಭಿಸಿದ…
ಮಧ್ಯಪ್ರದೇಶ: ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಹ ಆಘಾತಕಾರಿ ಪ್ರಕರಣವೊಂದು ಮಧ್ಯಪ್ರದೇಶದ ಮುರೈನಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ತಿಂಗಳಿಗೆ ₹65…
ಸೋಷಿಯಲ್ ಮೀಡಿಯಾದಲ್ಲಿ ಸದಾ ನಗುನಗುತ್ತಾ ಕಾಣಿಸಿಕೊಳ್ಳುತ್ತಿದ್ದ ಕೇರಳದ ಜನಪ್ರಿಯ ಜೋಡಿ ಅಖಿಲ್ (Akhil NRD) ಮತ್ತು ಮೇಘಾ ಅವರ ದಾಂಪತ್ಯ…
ಟೊರೊಂಟೊ: ಕೆನಡಾದ ಟೊರೊಂಟೊದಲ್ಲಿ ಭಾರತೀಯ ಮೂಲದ 30 ವರ್ಷದ ಯುವತಿ ಹಿಮಾಂಶಿ ಖುರಾನಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು…
ಮೀರಾಟ್: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಪ್ರೇಮಿಗಾಗಿ ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸಿನ ಸಾವಿಗೆ ಕಾರಣಳಾದ ಆರೋಪ ಕೇಳಿಬಂದಿದ್ದು, ಉತ್ತರ…