Categories: CrimeLatest

ಸೋಶಿಯಲ್ ಮೀಡಿಯಾ ಪರಿಚಯ: ಬಾಲಕನನ್ನು ಹೋಟೆಲ್ ಗೆ ಕರೆಸಿ ಮಹಿಳೆಯಿಂದ ಅತ್ಯಾಚಾರ..!

ಸಾಮಾಜಿಕ ಮಾಧ್ಯಮದಲ್ಲಿ ಆರಂಭವಾದ ಪರಿಚಯವು ಭೀಕರ ಘಟನೆಗೆ ತಿರುಗಿದ ಪ್ರಕರಣ ಛತ್ತೀಸ್‌ಗಢದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕನೊಂದಿಗೆ ಸ್ನೇಹ ಬೆಳೆಸಿ, ಆತನನ್ನು ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಛತ್ತೀಸ್‌ಗಢದ ಕಬೀರಧಾಮ ಜಿಲ್ಲೆಯಲ್ಲಿ ನಡೆದಿದ್ದು, 26 ವರ್ಷದ ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, 16 ವರ್ಷದ ಬಾಲಕನನ್ನು ಭಾವನಾತ್ಮಕವಾಗಿ ಪ್ರಭಾವಿತಗೊಳಿಸಿ ಹಾಗೂ ಬೆದರಿಕೆ ಹಾಕಿ, ಹೋಟೆಲ್‌ಗೆ ಕರೆಸಿಕೊಂಡು ದೌರ್ಜನ್ಯ ಎಸಗಲಾಗಿದೆ.

ಆರೋಪಿ ಮಹಿಳೆ ಮತ್ತು ಬಾಲಕ ಮೊದಲಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡಿದ್ದರು. ಆ ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿ, ನಂತರ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಬಳಿಕ ಬಾಲಕ ತನ್ನ ಕುಟುಂಬದವರಿಗೆ ವಿಚಾರ ತಿಳಿಸಿದ್ದಾನೆ. ತಕ್ಷಣವೇ ಪೋಷಕರು ಕೊತ್ವಾಲಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಸ್ತುತ ಪ್ರಕರಣದ ತನಿಖೆ ಮುಂದುವರಿದಿದ್ದು, ಸಾಮಾಜಿಕ ಮಾಧ್ಯಮದ ದುರುಪಯೋಗ ಹಾಗೂ ಅಪ್ರಾಪ್ತರ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

ಭ್ರಷ್ಟರ ಬೇಟೆ

Recent Posts

ಅಕ್ರಮ ಸಂಬಂಧ ಆರೋಪ: ಬೆಂಗಳೂರಿನಲ್ಲಿ ಯುವತಿಯ ಮೇಲೆ ಗುಂಪು ಹಲ್ಲೆ – ಐವರು ಬಂಧನ

ಬೆಂಗಳೂರು ನಗರದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಆರೋಪದ ಹಿನ್ನೆಲೆ ಯುವತಿಯೊಬ್ಬಳ ಮೇಲೆ ಗುಂಪು…

1 hour ago

ಸ್ನ್ಯಾಪ್‌ಚಾಟ್ ಪರಿಚಯದಿಂದ ಬ್ಲ್ಯಾಕ್‌ಮೇಲ್ ದಂಧೆ: 40 ಲಕ್ಷ ಹಣ, ಚಿನ್ನ ಕಳೆದುಕೊಂಡ ಮಹಿಳೆ – ಇಬ್ಬರು ಬಂಧನ

ಸೋಶಿಯಲ್ ಮೀಡಿಯಾದ ಮೂಲಕ ಪರಿಚಯ ಬೆಳೆಸಿ ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣ ದೋಚಿದ ಪ್ರಕರಣ ಬೆಂಗಳೂರಿನಲ್ಲಿ…

1 hour ago

ವೇಶ್ಯಾವಾಟಿಕೆ ಅನುಮಾನ: ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ಯುವತಿಗೆ ಹಲ್ಲೆ– ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಪ್ರಕರಣ

ಬೆಂಗಳೂರು ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನಕ್ಕೆ ಉದ್ರಿಕ್ತಗೊಂಡ ಸ್ಥಳೀಯರ ಗುಂಪೊಂದು ಪಶ್ಚಿಮ ಬಂಗಾಳ ಮೂಲದ 20 ವರ್ಷದ…

1 hour ago

ಸುಜಾತಾಳಿಗೆ ಅಕ್ರಮ ಸಂಬಂಧವೇ ಮುಳ್ಳಾಯಿತು: ಆಸ್ತಿಗಾಗಿ ಕೊಂದೆ ಬಿಟ್ಟ ಕ್ರೂರಿ..!

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿಚ್ಛೇದಿತ ಮಹಿಳೆಯೊಬ್ಬಳನ್ನು ಆಸ್ತಿ ಲಪಟಾಯಿಸುವ ಉದ್ದೇಶದಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.…

1 hour ago

ಗೋವಾದಲ್ಲಿ ವೇಗದ ಕಾರಿನ ದುರಂತ: ಕರ್ನಾಟಕದ ಯುವತಿ ಸಾವು – ಉದ್ಯಮಿಯ ಪುತ್ರ ವಶಕ್ಕೆ

ಗೋವಾದ ಬಂಬೋಲಿಮ್–ದೋನಾ ಪೌಲಾ ರಸ್ತೆಯಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕ ಮೂಲದ 23 ವರ್ಷದ ಯುವತಿ…

1 hour ago

ಕಸ್ಟಡಿ ಸಾವು 9 ಪೊಲೀಸರಿಗೆ ಗಲ್ಲು ಶಿಕ್ಷೆ ಪ್ರಕರಣ – ಸತ್ಯಕ್ಕೆ ಸಾಕ್ಷಿಯಾದ ಕಾನ್ಸ್ಟೇಬಲ್ ರೇವತಿಗೆ ದೇಶದ ಸಲಾಂ

2020ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ತಮಿಳುನಾಡಿನ ಸಾತನ್ಕುಲಂನಲ್ಲಿ ನಡೆದ ಅಮಾನವೀಯ ಕಸ್ಟಡಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ ನ್ಯಾಯಾಲಯವು ಐತಿಹಾಸಿಕ…

1 hour ago