Latest

ದಾವಣಗೆರೆಯಲ್ಲಿ ಅತ್ತೆ-ಅಳಿಯನ ಶಾಕ್ ಲವ್ ಸ್ಟೋರಿ: ಮದುವೆಯಾದ 2 ತಿಂಗಳಲ್ಲೇ ಪತ್ನಿಯನ್ನ ಬಿಟ್ಟು ಎಸ್ಕೇಪ್!

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಬಹುಚರ್ಚಿತ ಮತ್ತು ಅಸಾಮಾನ್ಯ ಘಟನೆ ನಡೆದಿದೆ. 25 ವರ್ಷದ ಯುವಕ ತನ್ನ 55 ವರ್ಷದ ಅತ್ತೆಯೊಂದಿಗೆ ಓಡಿಹೋಗಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮದುವೆಯಾದ ಕೇವಲ ಎರಡು ತಿಂಗಳೊಳಗೆ ನಡೆದಿದ್ದು, ಪತ್ನಿ ಆಘಾತಕ್ಕೊಳಗಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸರ ಪ್ರಕಾರ, 25 ವರ್ಷದ ಗಣೇಶ್ ಎಂಬ ಯುವಕ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ನಿವಾಸಿ. ಕೆಲವು ತಿಂಗಳ ಹಿಂದೆ, ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಅವರ ಮಗಳು ಹೇಮಾಳೊಂದಿಗೆ ಗಣೇಶ್‌ ವಿವಾಹವಾಗಿದ್ದ. ಈ ಮದುವೆ ನಾಗರಾಜ್ ಅವರ ಎರಡನೇ ಪತ್ನಿ ಶಾಂತಾ ಅವರ ತಯಾರಿಯಲ್ಲಿ ನಡೆದಿದ್ದಂತೆ. ಶಾಂತಾ, 13 ವರ್ಷಗಳ ಹಿಂದೆ ನಾಗರಾಜ್ ಅವರ 2ನೇ ಪತ್ನಿಯಾಗಿ ಮನೆಗೆ ಬಂದಿದ್ದರು.

ಮದುವೆಗೂ ಮುನ್ನ ಶಾಂತಾ, ಗಣೇಶನನ್ನು ಕುಟುಂಬದ ಮನೆಗೆ ತಂದಿದ್ದಲ್ಲದೆ, “ಈತನಿಗೆ ನನ್ನ ಮೊಮ್ಮಗತಿಯನ್ನು ಮದುವೆ ಮಾಡಿಸಿ ಮನೆ ಅಳಿಯನಾಗಿ ಇಲ್ಲಿಯೇ ಇಡುವೆ” ಎಂದು ಕುಟುಂಬಸ್ಥರ ವಿಶ್ವಾಸ ಗೆದ್ದಿದ್ದರು. ಈ ಮಾತಿನಂತೆ, ಎರಡು ತಿಂಗಳ ಹಿಂದಷ್ಟೇ ಹೇಮಾ ಮತ್ತು ಗಣೇಶ್‌ ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಿದ್ದರು.

ಆದರೆ ಮದುವೆಯಾದ ಕೇವಲ 15 ದಿನಗಳಲ್ಲೇ, ಹೇಮಾ ತನ್ನ ಪತಿ ಗಣೇಶ್ ಮತ್ತು ತಾಯಿ ಶಾಂತಾ ನಡುವೆ ಅಕ್ರಮ ಸಂಬಂಧವಿರುವ ಅನುಮಾನಕ್ಕೆ ಬಿದ್ದಿದ್ದಾಳೆ. ಗಣೇಶನ ಮೊಬೈಲ್‌ನಲ್ಲಿ ಶಾಂತಾ ಕಳಿಸಿದ್ದ ಅಶ್ಲೀಲ ಸಂದೇಶಗಳು ಪತ್ತೆಯಾಗಿದ್ದು, ಅವುಗಳನ್ನು ಹೇಮಾ ತನ್ನ ತಂದೆ ನಾಗರಾಜ್‌ ಅವರಿಗೆ ತೋರಿಸಿದ್ದಾಳೆ.

ಈ ಘಟನೆ ಇಡೀ ಕುಟುಂಬವನ್ನು ಬೆಚ್ಚಿ ಬೀಳಿಸಿದ ಬೆನ್ನಲ್ಲೇ, ಶಾಂತಾ ಹಾಗೂ ಗಣೇಶ್ ಹಣ, ಆಭರಣಗಳನ್ನು ತೆಗೆದುಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾರೆ. ಚನ್ನಗಿರಿ ಬಸ್ ನಿಲ್ದಾಣದಲ್ಲಿ ಹೇಮಾಳನ್ನ ಬಿಟ್ಟು ಇಬ್ಬರೂ ಎಸ್ಕೇಪ್ ಆಗಿರುವುದು ದೃಢಪಟ್ಟಿದೆ.

ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಾಂತಾ ಮತ್ತು ಗಣೇಶ್ ವಿರುದ್ಧ ಹುಡುಕಾಟ ಹಾಗೂ ತನಿಖೆ ಆರಂಭಿಸಿದ್ದಾರೆ.

ಈ ರೀತಿಯ ಘಟನೆಗಳು ಮೊದಲೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ವರದಿಯಾಗುತ್ತಿದ್ದರೆ, ಈಗ ಕರ್ನಾಟಕದಲ್ಲೂ ಇಂತಹ ದುರ್ಘಟನೆಗಳು ನಡೆಯುತ್ತಿರುವುದು ಸಾಮಾಜಿಕವಾಗಿ ಆತಂಕಕಾರಿ ಬೆಳವಣಿಗೆ ಎಂಬ ಮಾತುಗಳು ಕೇಳಿಬರುತ್ತಿವೆ.

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

23 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

2 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

2 days ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

3 days ago