ಬೆಂಗಳೂರು: ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಂಕ್ಷನ್‌ನಲ್ಲಿ ಬುಧವಾರ ರಾತ್ರಿ ಸಂಭವಿಸಿದ ಘಟನೆಯೊಂದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು. ರಸ್ತೆ ಬದಿಯಲ್ಲಿ ಬಿಟ್ಟಿದ್ದ ಸೂಟ್‌ಕೇಸ್‌ನಿಂದ ಅಪಾರ ಪ್ರಮಾಣದ ನಗದು ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿದ್ದ ಒಬ್ಬ ಪ್ರಯಾಣಿಕ ತನ್ನ ಮದುವೆ ಖರ್ಚಿಗಾಗಿ ಬ್ಯಾಂಕ್‌ನಿಂದ 30 ಲಕ್ಷ ರೂ. ತೆಗೆಯಲಾಗಿತ್ತು. ಬಸ್ ಮೆಜೆಸ್ಟಿಕ್ ತಲುಪಿದಾಗ ಅವರು ತಮ್ಮ ಸೂಟ್‌ಕೇಸ್ ಕಾಣೆಯಾಗಿರುವುದು ಗಮನಿಸಿದರು. ತಕ್ಷಣವೇ ಬಸ್ ಕ್ಲೀನರ್‌ಗೆ ಮಾಹಿತಿ ನೀಡಲಾಯಿತು.
ಇದರ ನಡುವೆ, ಅಮೃತಹಳ್ಳಿ ಜಂಕ್ಷನ್ ಬಳಿ ಕೆಲವರು ಬಸ್‌ನಿಂದ ಇಳಿಯುವಾಗ ತಪ್ಪಾಗಿ ಆ ನಗದು ತುಂಬಿದ ಸೂಟ್‌ಕೇಸ್ ಸಹ ಇಳಿಸಲ್ಪಟ್ಟಿತ್ತು. ತಮಗೆ ಸೇರಿದ ವಸ್ತು ಅಲ್ಲವೆಂದು ಭಾವಿಸಿದವರು ಅದನ್ನು ರಸ್ತೆ ಬದಿಯಲ್ಲಿ ಬಿಟ್ಟು ತೆರಳಿದ್ದರು.
ಸ್ಥಳೀಯರು ಅನುಮಾನಾಸ್ಪದವಾಗಿ ಬಿದ್ದಿದ್ದ ಸೂಟ್‌ಕೇಸ್ ನೋಡಿ ಹೊಯ್ಸಳ ಗಸ್ತು ಸಿಬ್ಬಂದಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, ಅದರೊಳಗೆ ದೊಡ್ಡ ಪ್ರಮಾಣದ ನಗದು ಇರುವುದನ್ನು ಪತ್ತೆಹಚ್ಚಿದರು.
ನಂತರ, ಬಸ್ ಕ್ಲೀನರ್ ಹಾಗೂ ಮಾಲೀಕರು ಅಮೃತಹಳ್ಳಿ ಠಾಣೆಗೆ ಬಂದು, ಬ್ಯಾಂಕ್‌ನಿಂದ ಹಣ ತೆಗೆಯಲಾದ ದಾಖಲೆಗಳನ್ನು ನೀಡಿದರು. ಎಲ್ಲಾ ಪರಿಶೀಲನೆಗಳ ಬಳಿಕ, ಪೊಲೀಸರು 30 ಲಕ್ಷ ರೂಪಾಯಿಗಳ ನಗದು ಮಾಲೀಕರಿಗೆ ಹಸ್ತಾಂತರಿಸಿದರು.
ಈ ಘಟನೆ ಸ್ಥಳೀಯರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರ ತ್ವರಿತ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತವಾಗಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
ದಿನಾಂಕ 18.10.2025 ರಂದು ಸೌಮ್ಯ ಎಂಬವರು ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಲಲಿತಾದ್ರಿಪುರದ ಕಡೆಯಿಂದ ಗಿರಿ ದರ್ಶನಿ…
ಗೌರಿಬಿದನೂರು: ನಿವೇಶನ ಅಳತೆ ಮಾಡಿಕೊಡಲು ₹ 20 ಸಾವಿರ ಲಂಚ ಪಡೆಯುತ್ತಿದ್ದ ಇಲ್ಲಿನ ಭೂಮಾಪನ ಇಲಾಖೆಯ ಸರ್ವೆಯರ್ ಹರೀಶ್ ರೆಡ್ಡಿ ಮತ್ತು ಅವರ…
ಅಲಿಗಢ, ಸೆಪ್ಟೆಂಬರ್ 04: ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವರದಕ್ಷಿಣೆ ಕಿರುಕುಳ ಮತ್ತೊಮ್ಮೆ ದಾರುಣ ಘಟನೆಯಲ್ಲಿ ಅಂತ್ಯಗೊಂಡಿದೆ. ದಮ್ಕೌಲಿ ಗ್ರಾಮದಲ್ಲಿ…
ಬೆಂಗಳೂರು: ಪತ್ನಿಗೆ 4 ಕೋಟಿ ವರದಕ್ಷಿಣೆ ಒತ್ತಾಯ – ಕೊಟ್ಟಿಲ್ಲವೆಂದು ಖಾಸಗಿ ಫೋಟೋ ವೈರಲ್ ಮಾಡಿದ ಪತಿ ವಿರುದ್ಧ ಎಫ್‌ಐಆರ್…
ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದೆ. ಹರೂರು ತಾಲೂಕಿನ ಮಾವೇರಿಪಟ್ಟಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ…
ಪ್ರೇಯಸಿ ಫೋನ್ ಕರೆ ಸ್ವೀಕರಿಸದೇ, ಆಕೆ ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದಾಳೆ ಎಂಬ ಅಸಹನೆಯಿಂದ ಯುವಕನೊಬ್ಬ ಅಚ್ಚರಿಯ ಕೆಲಸ ಮಾಡಿದ ಘಟನೆ ವೈರಲ್…