ಉತ್ತರ ಕನ್ನಡ/ ರಾಮನಗರ: ಸರಾಯಿ ಕೊಡಿಸದ ಕಾರಣ ಸ್ನೇಹಿತ ಬೈಕ್ ಜೊತೆ ಪರಾರಿಯಾಗಿದ್ದ ಜೊಯಿಡಾದ ಪ್ರವೀಣ ಸುಧೀರ್’ರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಬಂಧನದ ವೇಳೆಯೂ ಪ್ರವೀಣ ಸುಧೀರ್ ಸಾಕಷ್ಟು ರಂಪಾಟ ನಡೆಸಿದ್ದು, ಬಂಧನಕ್ಕೆ ತೆರಳಿದವರಿಗೆ ಬೆದರಿಕೆ ಒಡ್ಡಿದ ಬಗ್ಗೆಯೂ ಪ್ರಕರಣ ದಾಖಲಾಗಿದೆ.
ರಾಮನಗರದ ಪ್ರವೀಣ ಸುಧೀರ್ ಅವರು ಮಾರ್ಚ 9ರ ರಾತ್ರಿ ಶುಭಂ ಉತ್ತರೆ ಎಂಬಾತರ ಬಳಿ `ಸರಾಯಿ ಕುಡಿಸು’ ಎಂದು ಕಾಡಿಸಿದ್ದರು. ಸರಾಯಿ ಕೊಡಿಸದ ಕಾರಣ ಶುಭಂ ಅವರ ಮನೆಗೆ ನುಗ್ಗಿ ಕೂಗಾಡಿದ್ದರು. ಶುಭಂ ಅವರ ತಾಯಿ ಬಳಿ `ನಿನ್ನ ಮಗನಿಗಾಗಿ ನಾನು ಸಾಕಷ್ಟು ದುಡ್ಡು ಖರ್ಚು ಮಾಡಿದ್ದೇನೆ’ ಎಂದಿದ್ದರು. ಇದಕ್ಕೆ ವಿರೋಧವ್ಯಕ್ತಪಡಿಸಿದ ಶುಭಂ ಅವರ ಕೆನ್ನೆಗೆ ಬಾರಿಸಿದ್ದರು. ಹೊಡೆದಾಟ ತಡೆಯಲು ಆಗಮಿಸಿದ ಶುಭಂ ಅವರ ಸಹೋದರಿ ಸಾಕ್ಷಿ ಅವರ ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದರು. ಕೊನೆಗೆ ಮನೆ ಅಂಗಳದಲ್ಲಿದ್ದ ಬೈಕನ್ನು ಅಪಹರಿಸಿಕೊಂಡು ಹೋಗಿದ್ದರು.ಹೋಗವ ಮುನ್ನ `ನನ್ನ ವಿರುದ್ಧ ಸಾಕಷ್ಟು ದೂರುಗಳಿವೆ. ಪೊಲೀಸರಿಂದ ಸಹ ಏನೂ ಮಾಡಲಾಗುವುದಿಲ್ಲ’ ಎಂದು ಹೇಳಿ ಬೆದರಿಸಿದ್ದರು. ಶುಭಂ ಪತ್ತಾರ್ ಅವರು ರಾಮನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ ತನಿಖೆ ನಡೆಸಿದ ಪೊಲೀಸರು ಪ್ರವೀಣ ಸುಧೀರ್ ವಿಚಾರಣೆಗೆ ತೆರಳಿದ್ದರು. ಜೊಯಿಡಾ ರಾಮಲಿಂಗಗಲ್ಲಿಯಲ್ಲಿದ್ದ ಪ್ರವೀಣ ಸುಧೀರ್ ನೋಟಿಸ್ಸು ಸ್ವೀಕರಿಸಲು ಸಹ ಬಾಗಿಲು ತೆರೆದಿರಲಿಲ್ಲ. ಅಲ್ಲಿನ ಬೀಟ್ ಸಿಬ್ಬಂದಿ ರಾಜು ಚಲವಾದಿ ಅವರನ್ನು ಆ ವೇಳೆ ಪ್ರವೀಣ ಸುಧೀರ್ ನಿಂದಿಸಿದ್ದರು.
ಅದಾದ ನಂತರ ಮಾರ್ಚ 31ರಂದು ಪೊಲೀಸ್ ಸಿಬ್ಬಂದಿ ಸಿಬ್ಬಂದಿ ರಾಜು ಚಲವಾದಿ, ಸದಾಶಿವ ಮಠಪತಿ ಅವರ ಜೊತೆ ಪಿಎಸ್‌ಐ ಬಸವರಾಜ ಮಬನೂರು ಸಹ ಪ್ರವೀಣ ಅವರ ಬಂಧನಕ್ಕೆ ತೆರಳಿದ್ದರು. ಆಗಲೂ, ಪ್ರವೀಣ ಸುಧೀರ್ ಮನೆ ಬಾಗಿಲು ತೆರೆಯದೇ ಪ್ರತಿರೋಧವ್ಯಕ್ತಪಡಿಸಿದರು.
ಅದಾಗಿಯೂ, ಪೊಲೀಸರು ಪ್ರವೀಣ ಸುಧೀರರನ್ನು ವಶಕ್ಕೆ ಪಡೆದರು. ರಾಮಲಿಂಗೇಶ್ವರ ದೇವಸ್ಥಾನ ಎದುರು ನಡೆದುಬರುವಾಗ `ನಮ್ಮ ಏರಿಯಾ ಬೀಟಿಗೆ ಈ ಹೊಲೆಯರನ್ನು ನೇಮಿಸಿದ್ದಾರೆ. ನನ್ನನ್ನು ಮುಟ್ಟಬೇಡ’ ಎಂದು ಪ್ರವೀಣ ಸುಧೀರ್ ಕೂಗಾಡಿದರು. ರಾಜು ಚಲವಾದಿ ಅವರ ಜಾತಿಯನ್ನು ಹಿಯಾಳಿಸಿದರು. ರಾಜು ಚಲವಾದಿ ಅವರು ಕೈ ಹಿಡಿಯಲು ಯತ್ನಿಸಿದಾಗ ಬಲಗೈ ತಿರುಚಿದರು. ಸದಾಶಿವ ಮಠಪತಿ ಅವರ ಎದೆಗೆ ತಿವಿದು ನೋವುಂಟು ಮಾಡಿದರು
ಪೊಲೀಸ್ ಠಾಣೆಗೆ ಬಂದ ನಂತರವೂ ಅಲ್ಲಿ ಪ್ರವೀಣ ಸುಧೀರ್ ಕೂಗಾಡಿದರು. ರಾಮನಗರದಲ್ಲಿ ಹೇಗೆ ಡ್ಯೂಟಿ ಮಾಡುತ್ತೀರಿ? ನೋಡುತ್ತೇನೆ’ ಎನ್ನುತ್ತ ಬೆದರಿಸಿದ್ದಾನೆ.ಎಂತಹ ಬೆದರಿಕೆಗೂ ಬಗ್ಗದ ಪೋಲಿಸರು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…