ಬಾಗಲಕೋಟೆ: ತಾಲೂಕಿನ ಸೀತಿಮನಿ ಆರ್.ಎಸ್.ಗ್ರಾಮದಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಕ್ಕೆ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಸಂತೋಷ ದಳವಾಯಿ ಯವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರತಿಯೊಂದು ಕೊಠಡಿಗೂ ಬೇಟಿ ನೀಡಿ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಪರೀಶೀಲನೆ ನಡೆಸಿದ್ದಾರೆ. ಶಾಲೆಯ ಸುತ್ತ ಮುತ್ತ 200 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ಪೊಲೀಸ್ ಸಿಬ್ಬಂದಿಗೆ ತಿಳಿಸಿದ್ದಾರೆ.
ಒಬ್ಬರು ಎ.ಎಸ್.ಐ ಸೇರಿದಂತೆ 4 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶಾಂತ ರೀತಿಯಿಂದ ಪರೀಕ್ಷೆ ನಡೆಯಬೇಕು ಯಾವುದೇ ರೀತಿಯ ನಕಲುಗಳಿಗೆ ಅವಕಾಶ ಮಾಡಿ ಕೊಡಬಾರದು ಎಂದು ಪಿ.ಎಸ್.ಐ ಸಂತೋಷ ದಳವಾಯಿ ತಿಳಿಸಿದರು. ಈ ಸಮಯದಲ್ಲಿ ಎಎಸ್ಐ ಎನ್.ಬಿ.ಮಹಾರಾಜನ್ನವರ, ಶಾಲೆಯ ಮುಖ್ಯ ಶಿಕ್ಷಕಿ ಎ.ಎಮ್.ಪತ್ತಾರ ಹಾಗೂ ಮುಖ್ಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

ವರದಿ: ವಿಶ್ವನಾಥ ಭಜಂತ್ರಿ

Related News

error: Content is protected !!