ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಹಲವಾರು ಸತ್ಕಾರ್ಯಗಳು ನಡೆಯುತ್ತವೆ. ಎಂದರೇ ಯಾರಿಗೇ ಆಗಲೀ ಖುಷಿ ಆಗುತ್ತದೆ. ಹಾಗೆಯೇ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿರುವ ಕರ್ಕಿ ಬಸವೇಶ್ವರ ನಗರದಲ್ಲಿ ಕಳೆದ 2017 ರಲ್ಲಿ ಅಂದಾಜು 2 ಕೋಟಿ ರೂ ಗಳ ವೆಚ್ಚದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲಾಗಿತ್ತು ಆದರೇ ಅದೂ ಕೇವಲ 4-5 ವರ್ಷದಲ್ಲಿ ಅವ್ಯವಸ್ಥೆಯಿಂದ ಕೂಡಿದೆ ಹಾಗೂ ಸಂಪೂರ್ಣ ಕಳಪೆ ಕಾಮಗಾರಿಯಾಗಿರುವುದು ನಿಜಕ್ಕೂ ಬೇಸರವಾಗುತ್ತಿದೆ.
ಹೌದು ಈ ಸಮುದಾಯ ಭವನ ನಿರ್ಮಾಣವಾದ ಮೇಲೆ ತುಂಬಾ ಸುಂದರವಾಗಿ ಕಾಣುತ್ತಿತ್ತು. ಆದರೇ ಇತ್ತೀಚಿನ ದಿನಗಳಲ್ಲಿ ಅಲ್ಲಿ ಸಮುದಾಯ ಭವನದ ಕಡೆ ಸಂಬಂಧ ಪಟ್ಟ ಯಾವ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ. ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ. ಹಾಗೂ ಕಿಡಕಿಯ ಗಾಜೂ ಒಡೆದಿವೆ. ಇನ್ನೂ ಮಳೆ ಬಂದರೆ ಮುಗೀತು. ಮಳೆಯ ನೀರು ಸಮುದಾಯ ಭವನದ ಒಳಗೆ ಬರುತ್ತದೆ ಅದರಿಂದ ಕಟ್ಟಡದ ಒಳಗಡೆ ಮಳೆ ನೀರಿನಿಂದ ಹಾಗೂ ಕಿಡಕಿಯಿಂದ ಕಸ ಬಿದ್ದು ಸ್ವಚ್ಛತೆ ಇಲ್ಲದಂತಾಗಿದೆ ಕೆಲ ಕಿಡಿಗೇಡಿಗಳು ಕಟ್ಟಡದ ಗೋಡೆಗಳ ಮೇಲೆ ಎಲೆ ಅಡಿಕೆ, ಗುಟ್ಕಾ ತಿಂದು ಉಗುಳಿದ್ದಾರೆ ಈ ಕಟ್ಟಡದ ಒಳಗಡೆ ಹೋಗಬೇಕೆಂದರೆ ಒಂದು ಕಡೆ ಸರಿಯಾದ ಮೆಟ್ಟಿಲುಗಳೇ ಇಲ್ಲಾ ತುಂಬಾ ಮಣ್ಣಿನ ಧೂಳಿನಿಂದ ಕೂಡಿದೆ ಇನ್ನೂ ಸಮುದಾಯ ಭವನದ ಅಕ್ಕ ಪಕ್ಕದಲ್ಲಿ ಸ್ವಚ್ಛತೆಯೇ ಇಲ್ಲಾ ಕಟ್ಟಡದ ಎದುರು ಮಳೆ ಬಂದಾಗ ಕೆಸರಿನಿಂದ ತುಂಬಿರುತ್ತದೆ ಇಷ್ಟೆಲ್ಲಾ ಸಮಸ್ಯೆಗಳಿರುವ ಕಾರಣ ಸಂಬಂಧ ಪಟ್ಟ ಅಧಿಕಾರಿಗಳು ಇನ್ನು ಮೇಲಾದರೂ ಎಚ್ಚೆತ್ತುಕೊಂಡು ಅವ್ಯವಸ್ಥೆಯಿಂದ ಕೂಡಿದ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನವನ್ನು ವ್ಯೆವಸ್ಥಿತ ವಾಗಿ ಸರಿಪಡಿಸುತ್ತಾರಾ ಕಾದು ನೋಡಬೇಕಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಸಂದೇಶ್…
Iran-Israel ಸಂಘರ್ಷದ ಪರೋಕ್ಷ ಪರಿಣಾಮವಾಗಿ ರಾಜ್ಯದಲ್ಲಿ ಬಿಸ್ಕೆಟ್ ಅಭಾವದ ಭೀತಿ ಎದುರಾಗಿದೆ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಬಳಸುವ Parle-G ಬಿಸ್ಕೆಟ್‌ಗಳ…
ಧಾರವಾಡ ಜಿಲ್ಲೆಯ Navalgund ತಾಲೂಕಿನ ಒಂದು ಗ್ರಾಮದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯಶಿಕ್ಷಕನ ವಿರುದ್ಧ 10 ವರ್ಷದ…
ತುಮಕೂರು ಜಿಲ್ಲೆಯ Pavagada ಪಟ್ಟಣದಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮೇಲಾಧಿಕಾರಿಗಳ ಕಿರುಕುಳದಿಂದ ಮನನೊಂದು ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು…
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. X ನಲ್ಲಿ ವೈರಲ್ ಆಗಿರುವ ಈ ವಿಡಿಯೋ…
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ United States ಮತ್ತು Israel ಪಡೆಗಳು Iranನ ಅತ್ಯಂತ ಪ್ರಮುಖ ಪರಮಾಣು ಕೇಂದ್ರವಾದ Natanz…