ಮುಂಬೈನ ಪ್ರತಿಷ್ಠಿತ ಮತ್ತು ಹೈಪ್ರೊಫೈಲ್ ಪ್ರದೇಶಗಳಲ್ಲಿ ಒಂದಾದ ಗಿರ್ಗಾಂವ್‌ನಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆ ಭಾರೀ ಸಂಚಲನ ಮೂಡಿಸಿದೆ. ಪ್ರಮುಖ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿದ ಮುಂಬೈ ಪೊಲೀಸರು, ಹೈಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದು, ಸ್ಥಳದಿಂದ ಇಬ್ಬರು ನಟಿಯರನ್ನು ರಕ್ಷಿಸಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ, ರಕ್ಷಿಸಲ್ಪಟ್ಟವರಲ್ಲಿ ಒಬ್ಬರು ಮರಾಠಿ ಚಿತ್ರರಂಗದ ಖ್ಯಾತ ನಟಿಯಾಗಿದ್ದು, ಮತ್ತೊಬ್ಬರು ಬಂಗಾಳಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಣ್ಣ ಮತ್ತು ಅತಿಥಿ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ನಟಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಚಿತ್ರರಂಗದ ಸೆಲೆಬ್ರಿಟಿಗಳೊಂದಿಗೆ ಕೆಲಸ ಮಾಡುತ್ತಿದ್ದ ಮೇಕಪ್ ಕಲಾವಿದನಾಗಿದ್ದು, ನಟಿಯರಿಗೆ ಆಮಿಷವೊಡ್ಡಿ ಅಕ್ರಮ ಜಾಲಕ್ಕೆ ಸೆಳೆಯುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಕಾರ್ಯಾಚರಣೆಯನ್ನು ಮುಂಬೈ ಪೊಲೀಸರು ಅಧಿಕೃತವಾಗಿ ದೃಢಪಡಿಸಿದ್ದಾರೆ.

ಪೊಲೀಸರಿಗೆ ಗಿರ್ಗಾಂವ್‌ನ ಹೋಟೆಲ್‌ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಅದರಂತೆ, ನಕಲಿ ಗ್ರಾಹಕನನ್ನು ಹೋಟೆಲ್‌ಗೆ ಕಳುಹಿಸಿ ಮಾಹಿತಿ ಪರಿಶೀಲಿಸಲಾಯಿತು. ಹಣದ ವ್ಯವಹಾರ ಅಂತಿಮಗೊಂಡ ತಕ್ಷಣವೇ ಪೊಲೀಸ್ ತಂಡ ಹೋಟೆಲ್ ಕೋಣೆಯ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಿತು.

ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸ್ ಅಪರಾಧ ಶಾಖೆ ಕೈಗೆತ್ತಿಕೊಂಡಿದ್ದು, ಈ ಜಾಲದ ಹಿಂದೆ ಇರುವ ಪ್ರಮುಖ ವ್ಯಕ್ತಿಗಳು, ಹಣದ ವಹಿವಾಟಿನ ಮೂಲ ಹಾಗೂ ಹೋಟೆಲ್ ಆಡಳಿತದ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

Related News

error: Content is protected !!