ಭಟ್ಕಳ, ಜೂನ್ 1 – ಭಟ್ಕಳ ತಾಲ್ಲೂಕಿನ ನೂಜ್ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ 12 ಮಂದಿ ಕಾಡಿನಲ್ಲಿ ಓಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮೇ 30ರ ರಾತ್ರಿ, ಸುಮಾರು 15 ಮಂದಿ ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಹಣ ಪಣವಿಟ್ಟು ಇಸ್ಪೀಟ್ ಆಟವಾಡುತ್ತಿದ್ದರು. ಈ ವಿಷಯದ ಬಗ್ಗೆ ಭಟ್ಕಳ ಡಿವೈಎಸ್‌ಪಿ ಮಹೇಶ್ ಎಂ.ಕೆ. ಅವರಿಗೆ ಖಚಿತ ಮಾಹಿತಿ ದೊರೆಯಿತು. ತಕ್ಷಣವೇ ಅವರು ಸಿಪಿಐ ಮಂಜುನಾಥ ಲಿಂಗರೆಡ್ಡಿ, ಪಿಎಸ್‌ಐ ಬರಮಪ್ಪ ಬೆಳಗಲಿ ಹಾಗೂ ಸಿಬ್ಬಂದಿಗಳಾದ ಶಿವಾನಂದ ವಡ್ಡರ್, ಶ್ರೀಪಾದ ನಾಯ್ಕ, ವೀರಣ್ಣ ಬಳ್ಳಾರಿ, ಮದಾರಸಾಬ ಚಕ್ಕೇರಿ, ಮಂಜುನಾಥ ನಾಯ್ಕ ಮತ್ತು ವಾಹನ ಚಾಲಕ ಸಂತೋಷ ನಾಯ್ಕ ಅವರೊಂದಿಗೆ ಕಾಡಿನ ಕಡೆಗೆ ದಾಳಿ ನಡೆಸಿದರು.
ಪೊಲೀಸರು ಸ್ಥಳಕ್ಕೆ ಧಾವಿಸಿ ಆಟವಾಡುತ್ತಿದ್ದವರನ್ನು ಚತುಷ್ಪಥದಿಂದ ಸುತ್ತಿಬಿದ್ದರು. ಈ ವೇಳೆ ಬೈಂದೂರಿನ ಬೋಟಿ ಕಾರ್ಮಿಕ ಗೋಪಾಲ ಖಾರ್ವಿ, ಭಟ್ಕಳದ ಉತ್ತರಕೊಪ್ಪದ ನಾರಾಯಣ ನಾಯ್ಕ ಮತ್ತು ಸಿದ್ದಾಪುರದ ಜಬ್ಬಾರ ಸಾಬ್ ಎಂಬವರನ್ನು ಬಂಧಿಸಲಾಗಿದೆ. ಇನ್ನುಳಿದವರು ಕಾಡಿನ ದಿಕ್ಕಿಗೆ ಓಡಿದ್ದು, ಪೊಲೀಸರ ಬೆನ್ನಟ್ಟಿದರೂ ಬಂಧನ ತಪ್ಪಿಸಿಕೊಂಡಿದ್ದಾರೆ.
ಪೋಲೀಸರು ಓಡಿಹೋದವರನ್ನು ಗುರುತಿಸಿದ್ದು, ಮುರುಡೇಶ್ವರದ ಜಯಂತ ನಾಯ್ಕ, ಶಿರಾಲಿಯ ಬಾಬು ನಾಯ್ಕ, ಕೋಟೆಬಾಗಿಲಿನ ದತ್ತಾ ನಾಯ್ಕ, ಮುರುಡೇಶ್ವರದ ಇರ್ಫಾನ್, ಉತ್ತರಕೊಪ್ಪದ ಕುಮಾರ ಗೌಡ ಹಾಗೂ ಬೈಂದೂರಿನ ರಾಜೇಶ್ ಸೇರಿ ಇನ್ನೂ ಆರು ಮಂದಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಂಧಿತರಿಂದ 9700 ರೂಪಾಯಿ ನಗದು ಹಾಗೂ 8075 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು, ಈ ಎಲ್ಲಾ ವಸ್ತುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣವನ್ನು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ವರದಿ: ಕುಮಾರ್ ನಾಯ್ಕ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…