Latest

ಮಹಿಳಾ ಪೊಲೀಸ್ ಪೇದೆ ಗೆ ತಾಳಿ ಕಟ್ಟಿ ದೈಹಿಕ ಶೋಷಣೆ.!: ಅಮೃತ್‌ತೂರಿನ ಇಬ್ಬರು ಪೊಲೀಸ್‌ ಪೇದೆಗಳ ಮೇಲೆ ಪ್ರಕರಣ ದಾಖಲು.

ಕುಣಿಗಲ್: ಮದುವೆಯಾಗುವುದಾಗಿ ನಂಬಿಸಿ ದೇವರ ಫೋಟೋ ಮುಂದೆ ತಾಳಿ ಕಟ್ಟಿದ ಬಳಿಕ ದೈಹಿಕ ಸಂಬಂಧ ಬೆಳೆಸಿ, ಬಳಿಕ ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಘಟನೆಯೊಂದರ ಹಿನ್ನೆಲೆಯಲ್ಲಿ ಅಮೃತ್‌ತೂರು ಠಾಣೆಯ ಇಬ್ಬರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಘಟನೆ ತಲುಪಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮನಾಪುರ ಗ್ರಾಮದ ಭಗವಂತರಾಯ ಬಿರಾದಾರ (34) ಹಾಗೂ ಡಿ. ನಾಗಭೂಷಣ ಎಂಬುವರ ವಿರುದ್ಧ ಅಮೃತ್‌ತೂರು ಠಾಣೆಯ ಮಹಿಳಾ ಕಾನ್ಸ್‌ಟೇಬಲ್‌ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೂರುದಾರ ಮಹಿಳಾ ಪೇದೆ ಮತ್ತು ಭಗವಂತರಾಯ ಬಿರಾದಾರ ಇಬ್ಬರೂ ಅಮೃತ್‌ತೂರು ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಬ್ಬರ ನಡುವೆ ಪ್ರೇಮ ಸಂಬಂಧವಿತ್ತು. ಈ ಸಂಬಂಧದಲ್ಲಿ 2023ರ ಫೆಬ್ರವರಿ 14ರಂದು ಭಗವಂತರಾಯ, ಮಹಿಳಾ ಪೇದೆಯ ನಿವಾಸದಲ್ಲಿರುವ ಸಾಯಿಬಾಬಾ ದೇವರ ಫೋಟೋ ಮುಂದೆ ತಾಳಿ ಕಟ್ಟಿದ್ದು, ಅದನ್ನು ಮದುವೆಯಂತೆ ಗಮನಿಸಿದ್ದೆನೆಂದು ಮಹಿಳಾ ಪೇದೆ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆ ಕುರಿತು ಕುಟುಂಬದಿಂದ ವಿರೋಧವಿದ್ದರೂ ಬಿರಾದಾರ ನಿರಂತರವಾಗಿ ಸಾನ್ನಿಧ್ಯ ಹೊಂದಿದ್ದು, ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡುವ ಕಾರಣದಿಂದ ಮದುವೆ ವಿಷಯವನ್ನು ಗುಪ್ತವಾಗಿ ಇಡುವಂತೆ ಹೇಳಿ ದೈಹಿಕ ಸಂಪರ್ಕ ಹೊಂದಿದ ಆರೋಪವಿದೆ.

ಆದರೆ ಒಂದು ದಿನ ಮಹಿಳಾ ಪೇದೆ ತಾಳಿ ಧರಿಸಿ ಠಾಣೆಗೆ ಹೋದಾಗ, ಅದನ್ನು ನೋಡಿ ಬಿರಾದಾರ ಕೋಪಗೊಂಡು, ಇಬ್ಬರ ನಡುವೆ ಜಗಳ ನಡೆದಿದೆ. ಮಹಿಳಾ ಪೇದೆ ಈ ಸಂದರ್ಭದಲ್ಲಿ “ನಾವು ಕಾನೂನುಬದ್ಧವಾಗಿ ಮದುವೆಯಾಗೋಣ” ಎಂದು ಪ್ರಸ್ತಾಪಿಸಿದರೂ, ಬಿರಾದಾರ ತಿರಸ್ಕರಿಸಿದ್ದಾನೆ. ಬಳಿಕ, ತನ್ನ ಸಮುದಾಯದ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಮಹಿಳಾ ಪೇದೆ ತಿಳಿದಿದ್ದಾರೆ.

ಈ ವಿಷಯ ತಿಳಿದ ಮಹಿಳಾ ಪೇದೆ, ಮತ್ತೊಬ್ಬ ಪೊಲೀಸ್‌ ಸಿಬ್ಬಂದಿ ನಾಗಭೂಷಣ.ಡಿ.ಆರ್‌ಗೆ ಮಾಹಿತಿ ನೀಡಿದಾಗ, ಇಬ್ಬರೂ ಪೇದೆಯ ಕೋಣೆಗೆ ಭೇಟಿ ನೀಡಿ ಮದುವೆ ಬಗ್ಗೆ ದಾಖಲಾತಿ ಕೇಳಿದ್ದಾರೆ. ತಾನು ಸಾಕ್ಷ್ಯಗಳು ಮೊಬೈಲ್‌ನಲ್ಲಿ ಇವೆ ಎಂದು ಮಹಿಳಾ ಪೇದೆ ಹೇಳಿದಾಗ, ಬಿರಾದಾರ ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದೂ ದೂರಿನಲ್ಲಿ ಉಲ್ಲೇಖವಾಗಿದೆ.

ಅಲ್ಲದೆ, ಎಸ್ಪಿಗೆ ದೂರು ನೀಡಿದರೆ ಮಾನ ಹಾನಿಯಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಮಹಿಳಾ ಪೇದೆ ಆರೋಪ ಮಾಡಿದ್ದಾರೆ. ಈ ಸಂಬಂಧ ತನಿಖೆ ಪ್ರಾರಂಭಿಸಲಾಗಿದ್ದು, ಸೂಕ್ತ ಕ್ರಮ ಕೈಗೊಂಡಿದ್ದಾರೆ.

 

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

15 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

1 day ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

1 day ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

2 days ago