
ಮುಂಡಗೋಡ: ತಾಲೂಕಿನ ಕಾತೂರ ವಲಯದ ಓರಲಗಿ ಗಸ್ತಿನ ಮಾಲತೇಶ ಗೊಂದಿ ಅವರ ಹೊಲದಲ್ಲಿ ಪೈಪ್ ನಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತಿದ್ದ ನಾಗರಹಾವನ್ನು ವಲಯ ಅರಣ್ಯಾಧಿಕಾರಿಗಳಾದ ಶ್ರೀ ವಿರೇಶ್ ಅವರ ಮಾರ್ಗದರ್ಶನದಲ್ಲಿ ಮುತ್ತುರಾಜ ಹಳ್ಳಿ, ಗಸ್ತು ವನಪಾಲಕರು ಹುಡೇಲಕೊಪ್ಪ ಗಸ್ತು ರವರು ಹಾವನ್ನು ಪೈಪ್ ನಿಂದ ಹೊರ ತೆಗೆದು, ಗಾಯಕ್ಕೆ ನ್ಯಾಚುರಲ್ anti septic ಆದ ಅರಶಿಣ ಹಚ್ಚಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.ಗಸ್ತು ವನಪಾಲಕರಾದ ಮುತ್ತುರಾಜ ಹಳ್ಳಿಯವರ ಈ ಸಮಾಜಮುಖಿ ಕಾರ್ಯಕ್ಕೆ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಯಾದ ಶ್ರೀ ಸುನೀಲ್ ಹೊನ್ನಾವರ ಅವರ ತರಬೇತಿಯು ಕಾರಣವಾಗಿದೆ. ಕಾರ್ಯಾಚರಣೆಯಲ್ಲಿ ಮಳಗಿ ಗಸ್ತು ವನಪಾಲಕ ಮಂಜುನಾಥ್ ಕೆ ವಿ ಮಾನ್ಸೂರ್ ಮತ್ತು ಮುಂತಾದವರು ಇದ್ದರು. ವರದಿ: ಮಂಜುನಾಥ F H
***
“ಭ್ರಷ್ಟರ ಬೇಟೆ” ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8088070392