ರಾಮ್‌ಪುರ: ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯ ತಾಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಟುಂಬ ಕಲಹಕ್ಕೆ ಸಂಬಂಧಿಸಿದ ಅಪರೂಪದ ತೀರ್ಪೊಂದು ಬೆಳಕಿಗೆ ಬಂದಿದೆ. ಇಬ್ಬರು ಪತ್ನಿಯರನ್ನು ಹೊಂದಿದ್ದ ವ್ಯಕ್ತಿಯ ಕುಟುಂಬ ವಿವಾದವನ್ನು ಬಗೆಹರಿಸಲು ಪಂಚಾಯಿತಿ ಸಭೆ ನಡೆಸಿ, ವಾರದ ಮೂರು ದಿನ ಮೊದಲ ಪತ್ನಿಯೊಂದಿಗೆ ಹಾಗೂ ಮೂರು ದಿನ ಎರಡನೇ ಪತ್ನಿಯೊಂದಿಗೆ ವಾಸಿಸುವಂತೆ ಪತಿಗೆ ಸೂಚನೆ ನೀಡಿದೆ.
ದಢಿಯಾಲ್ ನಗರ ಪಂಚಾಯಿತಿ ನಿವಾಸಿ ನಜಾಖತ್ ಸುಮಾರು 14 ವರ್ಷಗಳ ಹಿಂದೆ ಉತ್ತರಾಖಂಡ ಮೂಲದ ಆಶ್ರಾ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕುಟುಂಬದಲ್ಲಿ ಗಂಡು ಮಗು ಬೇಕೆಂಬ ಆಸೆಯಿಂದ ನಜಾಖತ್ ನಾಲ್ಕು ವರ್ಷಗಳ ಹಿಂದೆ ನೇಹಾ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದನು. ಆದರೆ, ಎರಡನೇ ಪತ್ನಿಗೂ ಇಬ್ಬರು ಹೆಣ್ಣುಮಕ್ಕಳೇ ಜನಿಸಿದ್ದರು.
ಎರಡನೇ ಮದುವೆಯ ಬಳಿಕ ನಜಾಖತ್ ಮೊದಲ ಪತ್ನಿ ಆಶ್ರಾ ಮತ್ತು ಆಕೆಯ ಮಕ್ಕಳನ್ನು ನಿರ್ಲಕ್ಷಿಸಲು ಆರಂಭಿಸಿದ್ದಾನೆ ಎನ್ನಲಾಗಿದೆ. ಆತ ಸಂಪೂರ್ಣವಾಗಿ ಎರಡನೇ ಪತ್ನಿಯೊಂದಿಗೆ ವಾಸಿಸುತ್ತಿದ್ದು, ಮೊದಲ ಪತ್ನಿಯ ಕುಟುಂಬದ ನಿರ್ವಹಣೆಗೆ ಯಾವುದೇ ಹಣಕಾಸಿನ ನೆರವು ನೀಡುತ್ತಿರಲಿಲ್ಲ. ಇದರಿಂದ ಸಂಕಷ್ಟಕ್ಕೀಡಾದ ಆಶ್ರಾ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಜೀವನಾಂಶಕ್ಕಾಗಿ ಮನವಿ ಮಾಡಿದ್ದರು.
ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದ ವೇಳೆ ಗ್ರಾಮಸ್ಥರು ಹಾಗೂ ಪಂಚಾಯಿತಿ ಹಿರಿಯರು ಮಧ್ಯಪ್ರವೇಶಿಸಿ ಸಭೆ ಕರೆದರು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚರ್ಚೆಯ ಬಳಿಕ ಪಂಚಾಯಿತಿ ಎಲ್ಲರ ಒಪ್ಪಿಗೆಯೊಂದಿಗೆ ವಿಶೇಷ ತೀರ್ಮಾನವನ್ನು ಪ್ರಕಟಿಸಿತು.
ಪಂಚಾಯಿತಿಯ ತೀರ್ಪಿನಂತೆ, ನಜಾಖತ್ ವಾರದಲ್ಲಿ ಮೂರು ದಿನ ಮೊದಲ ಪತ್ನಿ ಆಶ್ರಾ ಅವರೊಂದಿಗೆ ಮತ್ತು ಮೂರು ದಿನ ಎರಡನೇ ಪತ್ನಿ ನೇಹಾ ಅವರೊಂದಿಗೆ ಕಡ್ಡಾಯವಾಗಿ ವಾಸಿಸಬೇಕು. ಉಳಿದ ಒಂದು ದಿನವನ್ನು ಪತಿಯ ವೈಯಕ್ತಿಕ ಆಯ್ಕೆಗೆ ಬಿಡಲಾಗಿದೆ. ಜೊತೆಗೆ ಮೊದಲ ಪತ್ನಿಯ ಕುಟುಂಬದ ನಿರ್ವಹಣೆಗಾಗಿ ಪ್ರತಿ ತಿಂಗಳು ಅಗತ್ಯ ದಿನಸಿ ಸಾಮಗ್ರಿಗಳೊಂದಿಗೆ ₹2,000 ನಗದು ಹಣವನ್ನು ನೀಡುವಂತೆ ಸೂಚಿಸಲಾಗಿದೆ.
ಪಂಚಾಯಿತಿ ನೀಡಿದ ಈ ತೀರ್ಪಿಗೆ ನಜಾಖತ್ ಹಾಗೂ ಆತನ ಇಬ್ಬರೂ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ. ಸಮಸ್ಯೆ ಗ್ರಾಮ ಮಟ್ಟದಲ್ಲೇ ಬಗೆಹರಿದ ಹಿನ್ನೆಲೆಯಲ್ಲಿ ಆಶ್ರಾ ಅವರು ಪೊಲೀಸರಿಗೆ ನೀಡಿದ್ದ ದೂರನ್ನು ವಾಪಸ್ ಪಡೆದಿದ್ದು, ಎರಡೂ ಕುಟುಂಬಗಳು ಪರಸ್ಪರ ಸಮ್ಮತಿಯಿಂದ ರಾಜಿಯಾಗಿವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸೂರ್ಯಾಪೇಟೆ: ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತಿಯನ್ನೇ ಕೊಲೆ ಮಾಡಲು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಸಂಚು…
ಸೋನ್‌ಭದ್ರ: ಗಂಡ ನೈಟ್ ಡ್ಯೂಟಿಗೆ ಹೋದ ಬಳಿಕ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ, ಪ್ರಿಯಕರನನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ ಪತ್ನಿ, ಕೊನೆಗೆ…
ಗೌರಿಬಿದನೂರು: ರೈಲ್ವೆ ಇಲಾಖೆಯ ಕಾಮಗಾರಿ ಕೆಲಸಕ್ಕೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ…
ಹುಬ್ಬಳ್ಳಿ–ಧಾರವಾಡ: ಅವಳಿ ನಗರದಲ್ಲಿ ಮಾದಕ ವಸ್ತುಗಳ ಜಾಲವನ್ನು ಬೇರುಸಹಿತ ಕಿತ್ತುಹಾಕಲು ಹುಬ್ಬಳ್ಳಿ–ಧಾರವಾಡ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ ಮೂರು…
ಸಾಗರ: ಜಮೀನಿಗೆ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಎರಡು ಗಂಡು ಜಿಂಕೆಗಳನ್ನು ವಿದ್ಯುತ್ ಸ್ಪರ್ಶದಿಂದ ಸಾಯಿಸಿ, ಅವುಗಳ ಮಾಂಸವನ್ನು ಜಮೀನಿನಲ್ಲೇ…
ಕುಮಟಾ: ನಗರದ ಪ್ರಸಿದ್ಧ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಜಿಲ್ಲಾ ಮತ್ತು…