ಕಲಬುರಗಿ: ಪಂಚಾಯತಿ ಅಭಿವೃದ್ದಿ ಅಧಿಕಾರಿ ಮೇಲೆ ಗ್ರಾಪಂ ಅಧ್ಯಕ್ಷೆ ಮತ್ತವರ ಕುಟುಂಬದಿಂದ ದಬ್ಬಾಳಿಕೆ ಆರೋಪ ಕೇಳಿಬರುತ್ತಿದೆ. ಅಫಜಲಪೂರ ತಾಲೂಕಿನ ಅತನೂರ ಗ್ರಾಪಂ ಪಿಡಿಒ ಅನಸೂಯಾ ಅಷ್ಟಗಿ ಮೇಲೆ ಅತನೂರ ಗ್ರಾಪಂ ಅಧ್ಯಕ್ಷೆ ಸಂಗೀತಾ ಕಾಂಬಳೆ, ಇವರ ಪತಿ ನಾಗೇಶ ಕಾಂಬಳೆ, ಸಂಬಂಧಿ ಸುಧಾಕರ ಕಾಂಬಳೆಯಿಂದ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅದಲ್ಲದೆ ನಕಲಿ ಬಿಲ್ ಸೃಷ್ಟಿಗೆ ಸಹಕರಿಸಲು ಪಿಡಿಒ ಅನಸೂಯಾ ಅಷ್ಟಗಿ ಮೇಲೆ ಒತ್ತಡ ಹಾಕುತ್ತಿದ್ದಾರೆ.ಒತ್ತಡಕ್ಕೆ ಮಣಿಯದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂಧಿಸಿ , ಹಲ್ಲೆಗೆ ಯತ್ನಿಸಿ ಗ್ರಾಪಂ ಕಚೇರಿಯಲ್ಲಿನ ಪಿಡಿಒ ಟೇಬಲ್ ಕುಟ್ಟಿ ಬೆದರಿಕೆವೊಡ್ಡಿ ಗುಂಡಾವರ್ತನೆ ತೋರಿಸುತ್ತಿದಾರೆ. ಅವರು ಹೇಳಿದಂತೆ ಕೇಳದಿದ್ರೆ ಸುಮ್ಮನೆ ಬಿಡುವದಿಲ್ಲ ಎಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಹೀಗಾಗಿ ಪಿಡಿಯೋ ಅನಸೂಯಾ ರೇವೂರ ಠಾಣೆಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದಾರೆ.

ವರದಿ : ಸಂಗಮೇಶ್ ಸರಡಗಿ

Related News

error: Content is protected !!