ತೆಲಂಗಾಣ, ಆಗಸ್ಟ್ 1: ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು ತೆಲಂಗಾಣದ ರೈತ ದಂಪತಿಯೊಬ್ಬರು ವಿಶೇಷ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಜಗ್ಗಾಯಪೇಟೆ ಸಮೀಪದ ಭೂಪಾಲಪಲ್ಲಿ ಜಿಲ್ಲೆಯ ವೇಶಲ್ಲಪಳ್ಳಿ ಗ್ರಾಮದ ರೈತ ದಂಪತಿ ಗಂಡಕುಲು ಮತ್ತು ಲಲಿತಾ ಅವರು ತಮ್ಮ ಎಮ್ಮೆಗಳನ್ನು ಸ್ಥಳೀಯ ಕಾಂಗ್ರೆಸ್ ಶಾಸಕ ಗಂದ್ರ ಸತ್ಯನಾರಾಯಣ ಅವರ ಕಚೇರಿ ಆವರಣದಲ್ಲಿ ಕಟ್ಟಿದ್ದಾರೆ.
ಈ ಪ್ರತಿಭಟನೆಯ ಹಿಂದಿನ ಕಾರಣವೇನೆಂದರೆ, ಇವರ ಎಮ್ಮೆಗಳ ಶೆಡ್ ಅನ್ನು ಅಧಿಕಾರಿಗಳು ಮುನ್ನೆಚ್ಚರಿಕೆ ಇಲ್ಲದೆ ತೆರವುಗೊಳಿಸಿದ್ದಾರಂತೆ. “ನಮ್ಮ ಗೊತ್ತಿಲ್ಲದೆ ಶೆಡ್ ಕೆಡವಲಾಯಿತು. ಇದಕ್ಕೆ ಕಾರಣ ಶಾಸಕರಾದ ಗಂದ್ರ ಸತ್ಯನಾರಾಯಣ. ಅವರ ಸೂಚನೆಯ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ,” ಎಂದು ರೈತ ದಂಪತಿ ಆಕ್ರೋಶ ವ್ಯಕ್ತಪಡಿಸಿದರು.
“ಎಮ್ಮೆಗಳಿಗೆ ಈಗ ಆಶ್ರಯವಿಲ್ಲ. ಹೆಣ್ಮಕ್ಕಳಂತೆ ನಾವು ಈ ಎಮ್ಮೆಗಳನ್ನು ನೋಡಿಕೊಳ್ಳುತ್ತೇವೆ. ಅವುಗಳನ್ನು ಬಿಡಲು ಆಗುತ್ತಿಲ್ಲ. ಆದ್ದರಿಂದ ತಾತ್ಕಾಲಿಕವಾಗಿ ಶಾಸಕರ ಕಚೇರಿ ಆವರಣವನ್ನೇ ಆಶ್ರಯವನ್ನಾಗಿಸಿಕೊಂಡಿದ್ದೇವೆ,” ಎಂದು ಲಲಿತಾ ಹೇಳಿದರು.
ತಾವು ಹೊಸ ಶೆಡ್ ನಿರ್ಮಿಸಲು ಸಮಯ ಬೇಕು ಎಂದು ದಂಪತಿ ತಿಳಿಸಿದ್ದಾರೆ. ಆವರೆಗೆ ಎಮ್ಮೆಗಳನ್ನು ಇದೇ ಸ್ಥಳದಲ್ಲಿ ಇಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಸ್ಥಳೀಯರ ಮಧ್ಯೆ ಚರ್ಚೆಗೆ ಕಾರಣವಾಗಿದ್ದು, ಶಾಸಕರ ಕಚೇರಿಯ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿರುವುದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಅಧಿಕಾರಿಗಳ ಕ್ರಮದ ವೈಧತೆಯ ಬಗ್ಗೆ ಈಗ ಪ್ರಶ್ನೆಗಳು ಮೂಡಿದ್ದು, ಸಂಬಂಧಿತ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯದ್ಯಂತ ವರದಿಗಾರರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8088070392
ಮಂಚೇನಹಳ್ಳಿ : ತಾಲ್ಲೂಕಿನ ಕಚೇರಿಯಲ್ಲಿ ಗ್ರಾಮ ಲೆಕ್ಕಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೂಗಲ್ ಪೇ ಮೂಲಕ ಹಣ ವರ್ಗಾವಣೆ…
ಸರ್ಕಾರಿ ಖರಾಬು ಗೋಮಾಳದಲ್ಲಿ ಹೈಟೆಕ್ ಪೌಲ್ಟ್ರಿ ಫಾರಂ ನಿರ್ಮಿಸಿಕೊಂಡಿದ್ದರೂ ಅದನ್ನು ತೆರವುಗೊಳಿಸಿ ಸರ್ಕಾರದ ಆಸ್ತಿ ರಕ್ಷಣೆ ಮಾಡಿಕೊಳ್ಳಲು ತಾಲೂಕು ಆಡಳಿತ…
ನಂಜನಗೂಡು : ಸುಮಾರು 60 ಹಳ್ಳಿಗಳಿಗೂ ಹೆಚ್ಚು ಗ್ರಾಮೀಣ ಜನರ ಆರೋಗ್ಯಕ್ಕೆ ಆಧಾರವಾಗಿದ್ದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಲ್ಪ ಜ್ವರ…
ಗೌರಿಬಿದನೂರು ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮು ಮೇಲೆ…
ಗೌರಿಬಿದನೂರು: ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು…
ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್…