ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಬೆಳಗುಲಿ ಗ್ರಾಮಕ್ಕೆ ಸೇರಿದ ವ್ಯಾಆರ್ ಧನಂಜಯ ಆನ್‌ಲೈನ್ ಲಾಭದ ಆಸೆಗೆ ₹5 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಧನಂಜಯಗೆ ವಾಟ್ಸಪ್ ಮೂಲಕ ಪರಿಚಯವಾದ ಸೈಬರ್ ಮೋಸಗಾರರು, ವೆಬ್‌ಸೈಟ್‌ಗಳಲ್ಲಿ ಮಾರಾಟವಾಗುವ ಉತ್ಪನ್ನಗಳಿಗೆ ರಿವ್ಯೂ ನೀಡಿ ಕಮಿಷನ್ ಸಂಪಾದಿಸಬಹುದು ಎಂದು ಭರವಸೆ ನೀಡಿದ್ದರು. ಪ್ರಾರಂಭದಲ್ಲಿ ಒಂದು ಉತ್ಪನ್ನಕ್ಕೆ ರಿವ್ಯೂ ನೀಡಿದ ನಂತರ ಅವರ ಖಾತೆಗೆ ₹839 ಜಮೆಯಾಗಿದ್ದು, ಇದು ಅವರ ನಂಬಿಕೆಯನ್ನು ಗೆದ್ದಿತು.
ಮುಂದೆ, ಹೆಚ್ಚಿನ ಲಾಭಾಂಶ ದೊರೆಯುತ್ತದೆ ಎಂಬ ವಾಗ್ದಾನದೊಂದಿಗೆ ಟೆಲಿಗ್ರಾಮ್ ಅ್ಯಪ್ ಮೂಲಕ ಸಂಪರ್ಕ ಸಾಧಿಸಿ ₹10 ಸಾವಿರ ಹೂಡಿಕೆ ಮಾಡುವಂತೆ ಕೇಳಲಾಗಿದೆ. ಇದರ ನಂತರ ಅವರ ಖಾತೆಗೆ ₹15,343 ಜಮೆಯಾಗಿತ್ತು. ಇದರಿಂದ ಮತ್ತಷ್ಟು ನಂಬಿಕೆ ಬಂದ ಧನಂಜಯ, ಹಂತ ಹಂತವಾಗಿ ಒಟ್ಟು ₹5,59,951 ಮೊತ್ತವನ್ನು ವರ್ಗಾಯಿಸಿದರು.
ಆದರೆ, ಈ ಎಲ್ಲಾ ಹೂಡಿಕೆಗಳ ವಿರುದ್ಧ ಅವರಿಗೆ ಕೇವಲ ₹55,182 ಮಾತ್ರ ವಾಪಸ್ ಬಂದಿದೆ. ಉಳಿದ ಮೊತ್ತ ವಾಪಸ್ ಪಡೆಯಲು ಮತ್ತಷ್ಟು ಹಣ ಪಾವತಿಸುವಂತೆ ನಿರಂತರ ಒತ್ತಡ ಬಂದಿದ್ದು, ಅನುಮಾನಗೊಂಡ ಧನಂಜಯ ಕೊನೆಗೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ಕುರಿತು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಈ ರೀತಿಯ ಆನ್ಲೈನ್ ಆಮಿಷಗಳಿಂದ ಎಚ್ಚರಿಕೆ ವಹಿಸಲು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…