Latest

ಮೂಲಸೌಕರ್ಯ ವಂಚಿತ ಮುಳ್ಳೊಳ್ಳಿ ಗ್ರಾಮ ಕಣ್ಮುಚ್ಚಿ ಕುಳಿತಿ ಅಧಿಕಾರಿಗಳು, ಜನಪ್ರತಿನಿಧಿಗಳು

ಕುಂದಗೋಳ: ಗ್ರಾಮ ಅಂದಮೇಲೆ ಮೂಲ ಸೌಕರ್ಯಗಳು ಇರಬೇಕು. ರಸ್ತೆ ಚರಂಡಿ. ಶುದ್ದ ಕುಡಿಯುವ ನೀರು ಇರಲೇಬೇಕು ಆದರೆ ಇಲ್ಲೊಂದು ಗ್ರಾಮದಲ್ಲಿ ಮೂಲಸೌಕರ್ಯಗಳಿಲ್ಲದೆ ಜನರು ಪರಿತಪ್ಪಿಸುತ್ತಿದ್ದಾರೆ.

ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳೊಳ್ಳಿ ಗ್ರಾಮದಲ್ಲಿ ಸಮರ್ಪಕ ರಸ್ತೆ, ಚರಂಡಿ ಇಲ್ಲದೆ ಜನ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯ ಸರಕಾರ ಹಳ್ಳಿಗಳ ಉದ್ಧಾರಕ್ಕಾಗಿ ಕೋಟ್ಯಾಂತರ ಹಣ ಖರ್ಚು ಮಾಡುತ್ತದೆ. ಆದರೆ ಆ ಹಣ ಈ ಗ್ರಾಮಕ್ಕೆ ತಲುಪಿತ್ತಿಲ್ಲ. ಇದಕ್ಕೆ ಉದಾಹರಣೆ ಮುಳ್ಳೊಳ್ಳಿ ಗ್ರಾಮ.

2009 -10ರ ಸಾಲಿನಲ್ಲಿ ಪುನರ್ವಸತಿ ಗ್ರಾಮವಾಗಿ ಮಾರ್ಪಾಡು ಹೊಂದಿ 15 ವರ್ಷ ಕಳೆದರೂ ಸಹ ಇಂದಿಗೂ ಬೆರಳೆಣಿಕೆಯಷ್ಟು ರಸ್ತೆ ಮಾತ್ರ ಇದೆ. ಮಳೆ ಬಂದ ಸಂದರ್ಭದಲ್ಲಿ ಅಂತು ಗ್ರಾಮಸ್ಥರು ತಮ್ಮ ವಾಹನಗಳನ್ನು ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಿ ತೆರಳುತ್ತಾರೆ. ಇಂದಿಗೂ ಈ ಕುಗ್ರಾಮದಲ್ಲಿ ಅಭಿವೃದ್ಧಿ ಭಾಗ್ಯ ಒಲಿದು ಬಂದಿಲ್ಲ. ಎರಡ್ಮೂರು ಕಾಲೋನಿಯಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ಇದೀಗ ಆ ರಸ್ತೆಗಳು ಬಿರುಕು ಬಿಟ್ಟು ಅವ್ಯವಸ್ಥೆ ಹಾದಿ ಹಿಡಿದಿದೆ. ಜನಪ್ರತಿನಿಧಿಗಳೇ ಈ ಭಾಗಕ್ಕೆ ಬೇಟೆ ನೀಡಿ ಅಭಿವೃದ್ಧಿಗೆ ಮುಂದಾಗಿ. ಎನ್ನುತ್ತಿದ್ದಾರೆ ಇಲ್ಲಿನ ಗ್ರಾಮಸ್ಥರು.

ಕುಡಿಯಲು ಶುದ್ದ ನೀರಿಲ್ಲ: ಲಕ್ಷಾಂತರ ವೆಚ್ಚ ಭರಸಿ ಶುದ್ದ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಇಂದಿಗೂ ಶುದ್ದ ನೀರು ಗ್ರಾಮಸ್ಥರಿಗೆ ಒದಗಿಸಿಲ್ಲ. ಮಲಪ್ರಭಾ ನೀರು ಮಾತ್ರ ಪೂರೈಸಿಲಾಗುತ್ತದೆ. ಶುದ್ದ ನೀರು ಒದಗಿಸಿ ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.

ರಸ್ತೆ ನಿರ್ಮಾಣ ಮಾಡಿ: ನವಗ್ರಾಮವಾಗಿ ಸುಮಾರು ಹದಿನೈದು ವರ್ಷಗಳೆ ಕಳಿದಿವೆ. ನಿತ್ಯ ನೂರಾರು ಕುಟುಂಬಗಳು ಜನಜೀವನ ನಡೆಸುತ್ತಾರೆ. ಮಳೆ ಬಂದ ಸಂದರ್ಭದಲ್ಲಿ ಅಂತು ಪರದಾಟಕ್ಕೀಡಾಗಿ ಹಪಹಪಿಸುತ್ತಾರೆ. ನಮ್ಮ ಕಷ್ಟ ದೇವರೇ ಬಲ್ಲ ಚುನಾವಣೆ ಮತ ಕೇಳಲು ದುಂಬಾಲು ಬಿಳ್ಳುತ್ತಾರೆ. ಆದರೆ ರಸ್ತೆ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಸುನೀಲ ನಾಯ್ಕರ ತಿಳಿಸಿದರು.

ಒಟ್ಟಾರೆ ಗ್ರಾಮದಲ್ಲಿ ರಸ್ತೆ, ಚರಂಡಿ, ಅಂಗನವಾಡಿ ಕೇಂದ್ರ, ಶುದ್ದ ನೀರಿನ ಘಟಕ, ಸಮಸ್ಯೆಗಳು ಇದ್ದರು ತಾಲೂಕ ಆಡಳಿತ ಅಭಿವೃದ್ಧಿಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಈಗಲಾದರೋ ಎಚ್ಚೆತ್ತು ಅಭಿವೃದ್ಧಿಗೆ ಮುಂದಾಗಬೇಕಾಗಿದೆ. ವರದಿ: ಶಾನು ಯಲಿಗಾರ

nazeer ahamad

Recent Posts

ಮನೆ ಬಳಕೆಗೆ ಸಿಗದ ಗೃಹಬಳಕೆಯ ಸಿಲಿಂಡರ್‌ಗಳು ಹೋಟೆಲ್‌ಗಳಲ್ಲಿ , ಅಧಿಕಾರಿಗಳ ನಿರ್ಲಕ್ಷ್ಯ

ಮುಂಡಗೋಡ: ಪ್ರಸ್ತುತ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಇರಾನ್–ಅಮೇರಿಕಾ ಉದ್ವಿಗ್ನತೆ (ಯುದ್ಧ) ಪರಿಣಾಮವಾಗಿ ಇಂಧನ ಕ್ಷೇತ್ರದಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ. ಈ ಪರಿಸ್ಥಿತಿಯ…

3 hours ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಹುದ್ದೆಗಳು: ಆಸಕ್ತರಿಗೆ ಉದ್ಯೋಗದ ಸುವರ್ಣಾವಕಾಶ

ಕರ್ನಾಟಕ ಹೈಕೋರ್ಟ್‌ನಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವವರಿಗೆ ಉತ್ತಮ ಅವಕಾಶ ಒದಗಿದೆ. ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಧಿಸೂಚನೆ…

8 hours ago

ಕೋರ್ಟ್ ಉದ್ಯೋಗದ ಹೆಸರಿನಲ್ಲಿ ಕೋಟಿ ಕೋಟಿ ಮೋಸ: ಬೆಂಗಳೂರಿನಲ್ಲಿ ಫ್ರಾಡ್ ದಂಪತಿ ಬಂಧನ

ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.…

8 hours ago

ಗಂಡ ಬಿಟ್ಟ ಮಹಿಳೆಯರೇ ಇವನ ಟಾರ್ಗೆಟ್; 5 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಬೆಳೆಸಿ ವಂಚನೆ..!

ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ…

8 hours ago

ಗಂಡನಿಲ್ಲದ ವೇಳೆ ಬಾಡಿಗೆಗೆ ಇದ್ದ ಯುವಕನ ಜೊತೆ ಸರಸ; ಅಡ್ಡಿಯಾದ ಅತ್ತೆಯನ್ನು ಕೊಂದ ಸೊಸೆ

ಅಕ್ರಮ ಸಂಬಂಧಗಳು ಅನೇಕ ಕುಟುಂಬಗಳನ್ನು ಹಾಳು ಮಾಡುತ್ತಿರುವ ಉದಾಹರಣೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲಿ ಮತ್ತೊಂದು ಭೀಕರ ಘಟನೆ ಉತ್ತರ…

9 hours ago

ಗೌರಿಬಿದನೂರಿನಲ್ಲಿ ಭೀಕರ ರಸ್ತೆ ಅಪಘಾತ – ಮಹಿಳೆ ಸಾವು, ಪುತ್ರನಿಗೆ ಗಾಯ

ಗೌರಿಬಿದನೂರು: ತಾಲೂಕಿನ ಹನುಮಂತಪುರ ಗ್ರಾಮದ ನಿವಾಸಿ ಉಮಾದೇವಿ (35) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ದುರ್ಘಟನೆ ಮಾರ್ಚ್ 20ರಂದು ಚಿಕ್ಕಕುರುಗೋಡು…

9 hours ago