Categories: Latest

ಮುಂಡಗೋಡದಲ್ಲಿ ಯೂರಿಯಾ ಸಂಕಷ್ಟ ತಡೆಗೆ ಸಭೆ: ತಾಲೂಕು ರೈತರಿಗೆ ಮೊದಲ ಆದ್ಯತೆ ನೀಡಲು ಸೂಚನೆ

ಮುಂಡಗೋಡ: ಶಿರಸಿಯ ಕೃಷಿ ಉಪ ನಿರ್ದೇಶಕರಾದ ಪಾಂಡು ಅವರ ನೇತೃತ್ವದಲ್ಲಿ ಮುಂಡಗೋಡ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಬುಧವಾರ ರಸಗೊಬ್ಬರ ಮಾರಾಟಗಾರರ ಸಭೆ ನಡೆಯಿತು.

ಇದೇವೇಳೆ ರಸಗೊಬ್ಬರ ಮಾರಾಟಗಾರರನ್ನು ಉದ್ದೇಶಿಸಿ ಮಾತನಾಡಿದ ಉಪ ಕೃಷಿಷನಿರ್ದೇಶಕರಾದ ಪಾಂಡು ಅವರು
ತಾಲೂಕಿನಲ್ಲಿ ಯೂರಿಯ ರಸಗೊಬ್ಬರ , ಸಮಸ್ಯೆ ಉಲ್ಬಣವಾಗದಂತೆ ಎಚ್ಚೆತ್ತುಕೊಳ್ಳಬೇಕಿದೆ. ನಮ್ಮ ಮುಂಡಗೋಡ ತಾಲೂಕಿನ ರೈತರಿಗೆ ಮೊದಲು ಪ್ರಾತಿನಿಧ್ಯ ನೀಡಬೇಕು, ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಯ ರೈತರಿಗೆ ಯೂರಿಯಾ ನೀಡಬಾರದು ಎಂದು ಹೇಳಿದರು.

ಸಿಪಿಐ ರಂಗನಾಥ್ ನೀಲಮ್ಮನವರ
ಮಾತನಾಡಿ ಒಂದು ಎಕರೆಗೆ ಎರಡು ಪ್ಯಾಕೆಟ್ ಯೂರಿಯಾ ಮಾತ್ರ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳು
ಈಗಾಗಲೇ ಎಲ್ಲರಿಗೂ ನಿರ್ದೇಶನ ನೀಡಿದ್ದು, ಮೊದಲು ನಮ್ಮ ತಾಲೂಕಿನ ರೈತರಿಗೆ ತಪ್ಪದೆ ಪೂರೈಕೆ ಮಾಡಬೇಕು, ಸರ್ಕಾರ ನಿಗದಿಪಡಿಸಿದ ದರಕ್ಕೆ ಮಾತ್ರ ಮಾರಾಟ ಮಾಡಬೇಕು , ಶಿರಸಿ ಉಪವಿಭಾಗದ ಮಟ್ಟದಲ್ಲಿ ಮುಂಡಗೋಡ ತಾಲೂಕಿನಲ್ಲಿ ಯೂರಿಯಾಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ವಿಚಕ್ಷಣಾ ದಳದ ಅಧಿಕಾರಿಯಾದ ಶಿವಾನಂದ ಹಾವೇರಿ ಮಾತನಾಡಿ ಯೂರಿಯಾ ಪೂರೈಕೆ ಕುರಿತಂತೆ ಸಮಿತಿ ಅಸ್ತಿತ್ವದಲ್ಲಿದ್ದು, ವಿಚಕ್ಷಣಾ ದಳ ಪ್ರತಿಯೊಂದು ಚಟುವಟಿಕೆಯನ್ನು ಗಮನಿಸುತ್ತಿರುತ್ತದೆ, ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಯವರಿಗೆ ಪೂರೈಕೆ ಮಾಡುವುದು ಸೇರಿದಂತೆ ಅಕ್ರಮ ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಂಗಾರು ಹಂಗಾಮಿಗೆ ಸಾಕಾಗುವಷ್ಟು ದಾಸ್ತಾನು ಕೇಂದ್ರದ
ಮಟ್ಟದಲ್ಲಿದೆ.ಅಂಗಡಿಯವರು ದಾಸ್ತಾನುಗಳನ್ನು ಪೋರ್ಟಲ್ ನಲ್ಲಿ ನಿರಂತರವಾಗಿ ನಮೂದಿಸಬೇಕು, ಎಫ್ ಐ ಡಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ
ಯೂರಿಯಾ ಸಿಗುವುದಿಲ್ಲ.ಯೂರಿಯಾ ಮಾನಿಟರಿಂಗ್ ಪೋರ್ಟಲ್ ಇದ್ದು, ಎಫ್ ಐ ಡಿ ಮಾಡಿಸದ ರೈತರು ಕೂಡಲೇ ಎಫ್ ಐ ಡಿ ಮಾಡಿಸಬೇಕಿದೆ.
ಇದೇ ವೇಳೆ ಪತ್ರಕರ್ತರು ತಾಲೂಕಿನಲ್ಲಿ ಹಲವಾರು ರೈತರು ಅತಿಕ್ರಮಣದಾರರಿದ್ದು ಅವರಿಗೆ ಇದು ಸಮಸ್ಯೆ ಆಗಬಹುದು ಎಂದು ಕೇಳಿದಾಗ ಸಹಾಯಕ ಕೃಷಿ ನಿರ್ದೇಶಕರಾದ ಕೆ ಎನ್ ಮಹಾರೆಡ್ಡಿ ಅವರು ಈಗಾಗಲೇ ಈ ವಿಷಯದ ಕುರಿತು ಹಿರಿಯ ಅಧಿಕಾರಿಗಳ ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ ಎಂದರು.

ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಶಿರಸಿಯ ಉಪ ನಿರ್ದೇಶಕರು,ವಿಚಕ್ಷಣಾ ದಳದ ಅಧಿಕಾರಿ, ಮುಂಡಗೋಡ ಸಿಪಿಐ ರಂಗನಾಥ ನಿಲಮ್ಮನವರ್, ಸಹಾಯಕ ಕೃಷಿ ನಿರ್ದೇಶಕರಾದ ಕೆ ಎನ್ ಮಹಾರೆಡ್ಡಿ , ರಸಗೊಬ್ಬರ ಕಂಪನಿಯ ಪ್ರತಿನಿಧಿಗಳು ಹಾಗೂ ನಗರ ಹಾಗೂ ಗ್ರಾಮೀಣ ಭಾಗದ ರಸಗೊಬ್ಬರ ಮಾರಾಟಗಾರರು ಉಪಸ್ಥಿತರಿದ್ದರು.

ಭ್ರಷ್ಟರ ಬೇಟೆ

Recent Posts

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

12 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

16 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago

ಕಲಬುರಗಿಯಲ್ಲಿ ಜೆಸ್ಕಾಂ AEE ರಾಜೇಶ್ವರಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಕಲಬುರಗಿ: ನಿಗದಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ರಾಜೇಶ್ವರಿ ಅವರ…

2 days ago