ಗದಗ: ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಶೃಂಗೇರಿ ಮಠಕ್ಕೆ ಸೇರಿದ್ದ ಮೌಲ್ಯಮತ್ತಾದ ಜಮೀನನ್ನು ಕಾನೂನು ಬಾಹಿರವಾಗಿ ತನ್ನ ಹೆಸರಿಗೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣವು ಬೆಳಕಿಗೆ ಬಂದಿದೆ. ಈ ಹಗರಣದಲ್ಲಿ ಮಹಿಳಾ ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿ ಮತ್ತು ಅವರ ಪತಿ ನಿಂಗಪ್ಪ ದೊಡ್ಡಮನಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ತೆಗ್ಗಿನಭಾನೂರ ಗ್ರಾಮದಲ್ಲಿ ಸರ್ವೇ ನಂ. 63 ಮತ್ತು 54ರಲ್ಲಿ ಮಠದ ಒಟ್ಟು 21 ಎಕರೆ ಜಮೀನಿದೆ. ಈ ಜಮೀನನ್ನು ಕೇವಲ ಕಾಗದದ ಲೆಕ್ಕದಲ್ಲಿ ಕಬಳಿಸಿ ಸುಜಾತಾ ದೊಡ್ಡಮನಿ ಅವರ ಹೆಸರಿಗೆ ಬದಲಾಯಿಸಲು ಪತಿ-ಪತ್ನಿ ಸಂಚು ರೂಪಿಸಿದ್ದಾರೆಯೆಂದು ಸ್ಥಳೀಯ ಪೋಕಳಾ ವಾರಸುದಾರರು ಆರೋಪಿಸಿದ್ದಾರೆ.
ನಿಂಗಪ್ಪ ದೊಡ್ಡಮನಿ ಶಿರಹಟ್ಟಿ ಉಪ ತಹಶೀಲ್ದಾರ್ ಆಗಿ ಸೇವೆ ನಿರ್ವಹಿಸುತ್ತಿದ್ದ ವೇಳೆ ಈ ಜಮೀನಿನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರೆಂದು ತಿಳಿದು ಬಂದಿದೆ. ನಂತರ ರಾಜಕೀಯ ಪ್ರಭಾವ ಮತ್ತು ಆಡಳಿತಾತ್ಮಕ ಸಂಪರ್ಕಗಳನ್ನು ಬಳಸಿಕೊಂಡು ಜಮೀನನ್ನು ಕಾನೂನು ವಿರುದ್ಧವಾಗಿ ತಮ್ಮ ಹೆಸರಿಗೆ ಬದಲಾಯಿಸಲು ಹೆಣಗೊಂಡಿದ್ದಾರೆ ಎಂಬುದು ದೂರುದಾರರ ವಾದ.
ಈ ಜಮೀನಿಗೆ ಪೋಕಳಾ ಹಕ್ಕುದಾರರು ಇರುವುದರಿಂದ, ಅವರ ಅನುಮತಿಯಿಲ್ಲದೇ ಜಮೀನು ಮಾರಾಟ ಅಥವಾ ಹಕ್ಕು ಬದಲಾವಣೆ ಸಾಧ್ಯವಿಲ್ಲ. ಆದರೆ ಶಿರಹಟ್ಟಿ ತಹಶೀಲ್ದಾರ ಶರಣಪ್ಪ ಪವಾರ್ ಮತ್ತು ಸಬ್‌ರಿಜಿಸ್ಟ್ರಾರ್ ಅಧಿಕಾರಿಗಳು ಲಂಚದ ಆಸೆಗೆ ಮಣಿದು, ಸೂಕ್ತ ದಾಖಲೆಗಳಿಲ್ಲದೇ ಹಕ್ಕು ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವೂ ಹೊರಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೋಕಳಾ ಕುಟುಂಬಗಳು ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದು, ಭೂಹಗರಣದ ತನಿಖೆ ನಡೆಸಿ ಜವಾಬ್ದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಮಠದ ಆಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳಲು ನಡೆಯುವ ಇಂತಹ ಸಂಚುಗಳು ಧಾರ್ಮಿಕ ಸಂಸ್ಥೆಗಳ ಭದ್ರತೆಗೆ ಧಕ್ಕೆಯುಂಟು ಮಾಡುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಘಟನೆ ಸಂಬಂಧ ಮುಂದಿನ ದಿನಗಳಲ್ಲಿ ತನಿಖಾ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬುದರತ್ತ ಸಾರ್ವಜನಿಕರು ಹಾಗೂ ಮಠದ ನಂಬಿಕಸ್ಥರು ಕಣ್ಣಿಟ್ಟಿದ್ದಾರೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…