Categories: CrimeLatest

ಸಾಲ ಮರುಪಾವತಿ ಪ್ರಕರಣ: ಶಿರಸಿಯ ರವೀಶ ಹೆಗಡೆ ಭಟ್ಕಳ ಪೊಲೀಸರ ವಶಕ್ಕೆ

ಭಟ್ಕಳ: ಸಾಲ ಪಡೆದ ಹಣವನ್ನು ಮರುಪಾವತಿಸದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿರಸಿ ಮೂಲದ ರವೀಶ ವೆಂಕಟ್ರಮಣ ಹೆಗಡೆ ಅವರನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಭಟ್ಕಳದ ಈಶ್ವರ ಹೊನ್ನಪ್ಪ ನಾಯ್ಕ ಅವರಿಂದ ರವೀಶ ಹೆಗಡೆ ಅವರು ಕೈಗಡ ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲದ ಹಣವನ್ನು ಹಿಂದಿರುಗಿಸುವ ಉದ್ದೇಶದಿಂದ ಚೆಕ್ ನೀಡಿದ್ದರು. ಆದರೆ ಚೆಕ್ ಅನ್ನು ಬ್ಯಾಂಕ್‌ಗೆ ಜಮಾ ಮಾಡಿದ ಸಂದರ್ಭದಲ್ಲಿ ಅದು ಅಮಾನ್ಯಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಚೆಕ್ ಅಮಾನ್ಯಗೊಂಡ ಬಳಿಕ ಸಾಲದ ಹಣವನ್ನು ಪಾವತಿಸುವಂತೆ ಈಶ್ವರ ನಾಯ್ಕ ಅವರು ರವೀಶ ಹೆಗಡೆ ಅವರಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಹಣ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದಿಂದ ರವೀಶ ಹೆಗಡೆ ಅವರ ವಿರುದ್ಧ ವಾರೆಂಟ್ ಜಾರಿಯಾಗಿತ್ತು.

ವಾರೆಂಟ್ ಜಾರಿಯಾದ ನಂತರವೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಭಟ್ಕಳ ಪೊಲೀಸರು ಶಿರಸಿಯಲ್ಲಿರುವ ರವೀಶ ಹೆಗಡೆ ಅವರ ನಿವಾಸಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಇನ್ನು ಆತ್ಮಹತ್ಯೆ ಪ್ರಕರಣ ಹಾಗೂ ಕೆಡಿಸಿಸಿ ಬ್ಯಾಂಕ್‌ಗೆ ಸಂಬಂಧಿಸಿದ ಕಾರು ಸಾಲ ಪ್ರಕರಣ ಸೇರಿದಂತೆ ಇನ್ನೂ ಕೆಲವು ಪ್ರಕರಣಗಳಲ್ಲಿ ರವೀಶ ಹೆಗಡೆ ಅವರ ಹೆಸರು ಆರೋಪಿಯಾಗಿ ಕೇಳಿಬಂದಿದೆ ಎಂದು ತಿಳಿದುಬಂದಿದೆ. ಆದರೆ ಈ ಪ್ರಕರಣಗಳಲ್ಲಿನ ಆರೋಪಗಳ ಕುರಿತು ಅಂತಿಮ ನಿರ್ಧಾರವಾಗಿಲ್ಲ. ಸಂಬಂಧಿಸಿದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಯ ನಂತರವೇ ಆರೋಪಗಳ ಸತ್ಯಾಸತ್ಯತೆ ಮತ್ತು ಕಾನೂನುಬದ್ಧ ಹೊಣೆಗಾರಿಕೆ ನಿರ್ಧಾರವಾಗಲಿದೆ.

ವರದಿ: ಕುಮಾರ್ ನಾಯ್ಕ್

ಭ್ರಷ್ಟರ ಬೇಟೆ

Recent Posts

52ರಲ್ಲೂ ಮಲೈಕಾ ಅರೋರಾ ಲವ್ ಲೈಫ್‌ ಸದ್ದು: ನಬೀಲ್ ನದ್ಲವಿ ಜೊತೆ ಫೋಟೋ ವೈರಲ್, ಹೊಸ ಸಂಬಂಧದ ಗುಸುಗುಸು!

ಮುಂಬೈ: ಬಾಲಿವುಡ್‌ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ…

2 hours ago

ಬೈಕ್‌ಗೆ ಬೆಂಕಿ ಹಾಕಿದ್ದು ರಾಜಕೀಯ ದ್ವೇಷಕ್ಕಲ್ಲ; ಪತಿಯನ್ನೇ ಕೊಲ್ಲಲು ಪತ್ನಿಯ ಸಂಚು! 6 ಮಂದಿ ಬಂಧನ

ಚಂದ್ರಗಿರಿ (ತಿರುಪತಿ): ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ತನಿಖೆಯ ಬಳಿಕ ಬೇರೆಯದೇ ತಿರುವು…

2 hours ago

ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಪಾಲಿಗೆ ಯಮನಾದ: 6 ದಿನದ ಹಸುಗೂಸಿನೊಂದಿಗೆ ಪರಾರಿ!

ದಾವಣಗೆರೆ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಸಾವಿಗೆ ಕಾರಣನಾದ ಆರೋಪ ಕೇಳಿಬಂದಿದ್ದು, ಮೃತದೇಹವನ್ನು ಪೊಲೀಸ್ ಠಾಣೆ ಬಳಿಯ ರಸ್ತೆಯಲ್ಲಿ ಬಿಟ್ಟು…

2 hours ago

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

22 hours ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

1 day ago

₹20 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ!

ಹಾವೇರಿ: ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಯೊಬ್ಬರು ಲೋಕಾಯುಕ್ತ…

1 day ago