ಬೆಂಗಳೂರು: ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿತನದ ಶೈಲಿಯಲ್ಲಿ ನಡೆದ ದಾಂಧಲೆ ಮತ್ತು ಅಪಹರಣದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮೇ 29ರಂದು ನಡೆದ ಈ ಪ್ರಕರಣದಲ್ಲಿ ಕಾವ್ಯಾ ಎಂಬ ಮಹಿಳೆ ತನ್ನ ಸಹಚರರ ಜೊತೆ ಸೇರಿ, ಯುವಕನಿಗೆ ಹಲ್ಲೆ ನಡೆಸಿದ ನಂತರ ಅಪಹರಣ ಮಾಡಿದ್ದಾರೆ.
ಸಲೂನ್‌ಗೆ ನುಗ್ಗಿದ ಕಾವ್ಯಾ ತನ್ನ ಇಬ್ಬರು ಸ್ನೇಹಿತರಾದ ಮಹ್ಮದ್ ಮತ್ತು ಸ್ಮಿತಾ ಜೊತೆ ಸೇರಿ, ‘ಸಂಜು’ ಎಂಬ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕಾವ್ಯಾ ಸಿಗರೇಟು ಸೇದುತ್ತಾ, ಸಂಜು ಹಾಗೂ ಅಲ್ಲಿ ಇದ್ದ ಯುವತಿಗೆ ದೌರ್ಜನ್ಯ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ತೀವ್ರವಾಗಿ ಕೋಪಗೊಂಡ ಕಾವ್ಯಾ, ಸಂಜು ಅವರ ವಿರುದ್ಧ ಅಮಾನುಷವಾಗಿ ವರ್ತಿಸಿದ್ದು, ಕಾಲಿನಿಂದ ತಳ್ಳಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೂಲಗಳ ಪ್ರಕಾರ, ಸಂಜು ಹಿಂದೆ ಕಾವ್ಯಾಳ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದರೂ, ಬಳಿಕ ಮತ್ತೊಂದು ಸ್ಪಾದಲ್ಲಿ ಕೆಲಸಕ್ಕೆ ಸೇರಿದ್ದನ್ನು ಖಂಡಿಸಿ ಈ ದಾಂಧಲೆ ನಡೆಸಲಾಗಿದೆ.
ಘಟನೆಯ ನಂತರ, ಕಾವ್ಯಾ ಮತ್ತು ತಂಡ ಸಂಜುವನ್ನು ಕಾರಿನಲ್ಲಿ ಕೊಂಡೊಯ್ದು ಅಪಹರಿಸಿ, ಬಳಿಕ ಪೊಲೀಸರು ಸಂಪರ್ಕಿಸಿದಾಗ ಅವರನ್ನು ಠಾಣೆಯ ಬಳಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಅಪಹರಣ ಮತ್ತು ಹಲ್ಲೆ ಆರೋಪದ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾವ್ಯಾ, ಮಹ್ಮದ್ ಮತ್ತು ಸ್ಮಿತಾ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಈಗ ಈ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ. ತದ್ಗತಿವಿಚಾರಣೆಯಲ್ಲಿ ಇನ್ನು ಹೆಚ್ಚಿನ ಮಾಹಿತಿಗಳು ಹೊರಬೀಳುವ ನಿರೀಕ್ಷೆಯಿದ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…