ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಶ್ರೀಕಾಂತ್ ಕುಮಾರ್ ದತ್ತಾ ಇದೀಗ ಅಧಿಕಾರಿಗಳ ಎದುರು ಪ್ರತಿಭಟನೆ ಮಾಡಿದ್ದಾರೆ. ಶ್ರೀಕಾಂತ್ ದತ್ತಾ ಅವರ ಪಡಿತರ ಚೀಟಿಯಲ್ಲಿನ ತಪ್ಪು ಅವರ ಈ ಸಿಟ್ಟಿಗೆ ಕಾರಣವಾಗಿದೆ.
ಶ್ರೀಕಾಂತ್ ಅವರ ಪಡಿತರ ಚೀಟಿಯಲ್ಲಿ ದತ್ತಾ ಬದಲಿಗೆ ಕುತ್ತಾ ಎಂದು ಬರೆಯಲಾಗಿದೆ. ಪಡಿತರ ಚೀಟಿಯಲ್ಲಿನ ಈ ತಪ್ಪಿನಿಂದಾಗಿ ಶ್ರೀಕಾಂತ್ ತೀವ್ರ ಕೋಪಗೊಂಡರು. ಈ ವೇಳೆ ಬಿಡಿಒ ಅವರ ಮುಂದೆ ಬೊಗಳಿ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ಇದೆಲ್ಲ ಕ್ಯಾಮರಾದಲ್ಲಿ ಸೆರೆಯಾಗುತ್ತಿತ್ತು. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆಯ ನಂತರ, ಪಡಿತರ ಚೀಟಿಯಲ್ಲಿ ನನ್ನ ಉಪನಾಮವನ್ನು ಮೂರು ಬಾರಿ ತಪ್ಪಾಗಿ ಬರೆಯಲಾಗಿದೆ ಎಂದು ಶ್ರೀಕಾಂತ್ ದತ್ತಾ ಹೇಳಿದ್ದಾರೆ. ಮೊದಲ ಎರಡು ಬಾರಿ ಶ್ರೀಕಾಂತ್ ಮಂಡಲ್ ಮತ್ತು ಶ್ರೀಕಾಂತಿ ಎಂದು ಬರೆದಿದ್ದರೆ ಈ ಬಾರಿ ಶ್ರೀಕಾಂತ್ ದತ್ತಾ ಎಂಬ ನನ್ನ ಹೆಸರನ್ನು ಶ್ರೀಕಾಂತ್ ಕುತ್ತಾ ಎಂದು ಬರೆಯಲಾಗಿದೆ. ನಾನು ಮತ್ತೆ ಅರ್ಜಿ ಹಾಕಿದೆ, ಅಲ್ಲಿ ನಾನು ಜಂಟಿ BDO ಅವರನ್ನು ನೋಡಿದೆ, ಆಗ ನನ್ನ ಸಿಟ್ಟನ್ನು ಹೊರಹಾಕಿದೆ ಎಂದಿದ್ದಾರೆ. ಆದರೆ ಅವರು ನನ್ನ ಪ್ರಶ್ನೆಗೆ ಉತ್ತರಿಸದೆ ಅಲ್ಲಿಂದ ಹೊರಟು ಹೋದರು. ನಮ್ಮಂತಹ ಜನಸಾಮಾನ್ಯರು ಎಷ್ಟು ಬಾರಿ ಕೆಲಸ ಬಿಟ್ಟು ಈ ರೀತಿಯ ತಪ್ಪುಗಳನ್ನು ತಿದ್ದಲು ಅರ್ಜಿ ಸಲ್ಲಿಸಲು ಹೋಗುತ್ತಾರೆ ಹೇಳಿ! ಎಂದು ಹೇಳಿದರು. ಈ ಸಂಪೂರ್ಣ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

Related News

error: Content is protected !!