Latest

ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್ ಈಗ ಕಾಮಸಮುದ್ರಂ ಪೊಲೀಸರ ಅತಿಥಿ.

ಕೋಲಾರ ಮತ್ತು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ಸಮಯ ಮಂಕಿ ಕ್ಯಾಪ್‌ ಧರಿಸಿ ಮನೆ ಕಳ್ಳತನದ ಹಲವು ಪ್ರಕರಣಗಳಲ್ಲಿ ಅಂತರ್ ರಾಜ್ಯ ಖತರ್ನಾಕ್ ಮಂಕಿ ಕ್ಯಾಪ್ ಗ್ಯಾಂಗ್ ಭಾಗಿಯಾಗಿದ್ದು ಕೋಲಾರ ಮತ್ತು ಕೆಜಿಎಫ್ ಜಿಲ್ಲಾ ಪೊಲಿಸ್ ಹಲವು ಠಾಣೆಗಳಲ್ಲಿ ಬಿ.ಎನ್.ಎಸ್ (ಭಾರತೀಯ ನ್ಯಾಯ ಸಂಹಿತಾ,2023) ರೀತ್ಯಾ ಪ್ರಕರಣ ದಾಖಲಾಗಿದ್ದು, ನಂತರ ಕೆ.ಜಿ.ಎಪ್ ಪೊಲೀಸ್ ಅಧೀಕ್ಷಕರಾದ ಕೆ.ಎಂ. ಶಾಂತರಾಜು ಐ.ಪಿ.ಎಸ್, ರವರು ಸದರಿ ಮಂಕಿ ಕ್ಯಾಪ್ ಗ್ಯಾಂಗ್ ಪತ್ತೆಗೆ ವಿಶೇಷ ಅಫರಾದ ಪತ್ತೆ ದಳ ರಚನೆ ರಚಿಸಿ ಆ ತಂಡದಲ್ಲಿ ಕಿರಣ್ ಕುಮಾರ್ ಬಿ.ವಿ. ಪಿ.ಎಸ್.ಐ ಕಾಮಸಮುದ್ರಂ ಪೊಲೀಸ್ ಠಾಣೆ ಹಾಗೂ ಹೆಡ್ ಕಾನ್ಸ್‌ಟೇಬಲ್‌ ಮಂಜುನಾಥ್ ರೆಡ್ಡಿ, ಅನಿಲ್ ಕುಮಾರ್, ಮಿನವ್ವರ್ ಪಾಷ, ರಾಮಕೃಷ್ಣಾರೆಡ್ಡಿ, ರಾಮರಾವ್, ಮತ್ತು ಕಾನ್ಸ್‌ಟೇಬಲ್ ಮಂಜುನಾಥ್, ಲಕ್ಷ್ಮಣ್ ತೇಲಿ, ಮುನೇಂದ್ರ, ಚಾಲಕ ಗುರುಮೂರ್ತಿ, ತಾಂತ್ರಿಕ ಸಹಾಯಕ ಚಂದ್ರಶೇಖರ್ ಒಳಗೊಂಡ ತಂಡ, ಪೊಲೀಸ್ ಉಪಾಧೀಕ್ಷಕರಾದ ಪಾಂಡುರಂಗ ರವರ ಮಾರ್ಗದರ್ಶನದಲ್ಲಿ. ಊರಿಗಾಂ ವೃತ್ತ ನೀರಿಕ್ಷಕ ಮಾರ್ಕೊಂಡಯ್ಯ ನೇತೃತ್ವದಲ್ಲಿ ಮಂಕಿ ಕ್ಯಾಪ್ ಗ್ಯಾಂಗ್ ಆರೋಪಿಗಳಾದ ಖಾದರ್ ಬಾಷ ಅಲಿಯಾಸ್ ತೋಟ ಕನಮ ಬಾಬು ಅಲಿಯಾಸ್ ಬಾಬು ಕರ್ನಾಟಕ ರಾಜ್ಯ, ಆರೀಫ್ ಹರಿಯಾಣ ರಾಜ್ಯ, ಮುಷ್ಠಾಖ್ ಖಾನ್ ಹರಿಯಾಣ ರಾಜ್ಯ, ರವರನ್ನು ವಿಶೇಷ ಅಫರಾದ ಪತ್ತೆ ದಳ ಪತ್ತೆ ಮಾಡಿ ವಿಚಾರಣೆ ಮಾಡಿದಾಗ ಹರಿಯಾಣ ಮೂಲದ ಮೇವತ್ ಜಿಲ್ಲೆ (ನುಹ್ ಜಿಲ್ಲೆ) ಯವರಾಗಿದ್ದಾರೆ.

ಈ ಮಂಕಿ ಕ್ಯಾಪ್ ಗ್ಯಾಂಗ್ ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ, ಕೆಜಿಎಫ್, ರಾಬರ್ಟಸನ್ ಪೇಟೆ, ಬಂಗಾರಪೇಟೆ , ಕಾಮಸಮುದ್ರಂ, ಬೇತಮಂಗಲ ಠಾಣೆಗಳಲ್ಲಿ ಮತ್ತು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು 10 ಪ್ರಕರಣಗಳು ಹಾಗು ಆಂದ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯಲ್ಲಿ 02 ಪ್ರಕರಣ ಅತ್ತೆಯಾಗಿದೆ. ಆರೋಪಿಗಳ ಕಡೆಯಿಂದ 67 ಗ್ರಾಂ ಚಿನ್ನಾಭರಣಗಳು, 03 ಜೊತೆ ಬೆಳ್ಳಿ ಕಾಲು ಚೈನುಗಳು, 01 ಪಲ್ಸರ್ ಬೈಕ್ ಮತ್ತು 01 ಹೀರೋ ಪ್ಯಾಷನ್ ಪ್ಲಸ್ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ 7,60,000/- ರೂಗಳು, ಮತ್ತು ಆರೋಪಿಗಳಾದ 03 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ವರದಿ: ರೋಶನ್ ಜಮೀರ್

nazeer ahamad

Recent Posts

ಬಾಗಲಕೋಟೆಯಲ್ಲಿ ರಾತ್ರಿ 11 ಗಂಟೆಯ ಬಳಿಕ ನಿಯಮ ಉಲ್ಲಂಘಿಸಿ ಮರಳು ಸಾಗಾಟ: ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್‌ಗಳ ಸಂಚಾರ, ಅಧಿಕಾರಿಗಳು ಮೌನ!?

ಬಾಗಲಕೋಟೆ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ…

2 days ago

ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮಕ್ಕಳ ಮಾನ್ಯತಾ ಅವಧಿಯಲ್ಲೂ ಬದಲಾವಣೆ, ಹೊಸ ನಿಯಮ ಜಾರಿ

ನವದೆಹಲಿ: ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಹೆಚ್ಚಿಸುವುದರ ಜೊತೆಗೆ ಮಕ್ಕಳ ಪಾಸ್‌ಪೋರ್ಟ್‌ನ ಮಾನ್ಯತಾ ಅವಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು…

2 days ago

ಗೌರಿಬಿದನೂರಿನಲ್ಲಿ ಅಪಘಾತಕ್ಕೆ ನಾಲ್ಕು ವರ್ಷದ ಬಾಲಕಿ ಬಲಿ

ತಾಯಿ-ತಂದೆಯಿಲ್ಲದ ವೇದಳನ್ನು ಕಳೆದುಕೊಂಡ ಅಜ್ಜಿ-ತಾತನ ಆಕ್ರಂದನ ಗೌರಿಬಿದನೂರು: ನಗರದಲ್ಲಿ ಅಪಘಾತಗಳ ಸರಣಿ ಮುಂದುವರಿದಿರುವ ನಡುವೆಯೇ ಮತ್ತೊಂದು ಮನಕಲಕುವ ರಸ್ತೆ ದುರಂತ…

5 days ago

ಸರ್ಕಾರಿ ಶಾಲಾ ಮಕ್ಕಳಿಗೆ ಅನ್ಯಾಯ: ನೂರು ರೂಪಾಯಿಗೂ ಬೆಲೆಬಾಳದ ಶೂಗಳನ್ನು ವಿತರಿಸಿರುವ ಸರ್ಕಾರ, ಒಂದೇ ತಿಂಗಳಿಗೆ ಹಾಳದ ಶೂಗಳು..!

ಕಳೆದ ವರ್ಷದ 265 ರೂ. ಬೆಲೆಯ ಶೂಗಳು ಇನ್ನೂ ಬಾಳಿಕೆ; ಪ್ರಸಕ್ತ ಸಾಲಿನಲ್ಲಿ ವಿತರಿಸಿದ ಶೂಗಳ ಗುಣಮಟ್ಟದ ಬಗ್ಗೆ ಅಸಮಾಧಾನ…

6 days ago

50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ: ಖರಾಬು ಜಮೀನು ದಾಖಲೆ ತಿದ್ದುಪಡಿಗೆ ಬೇಡಿಕೆ..!

ಧಾರವಾಡ: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ…

6 days ago

ಪಂಚಾಯಿತಿ ಕಚೇರಿಯಲ್ಲೇ ಆಸ್ತಿ ವಿವಾದಕ್ಕೆ ರಕ್ತದೊಕುಳಿ: ಅಣ್ಣ–ತಮ್ಮಂದಿರ ಜಗಳದಲ್ಲಿ ತಂದೆ–ಮಗಳು ಕೊಲೆ, ಮತ್ತೊಬ್ಬನಿಗೆ ಗಂಭೀರ ಗಾಯ

ಕಿತ್ತೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ–ತಮ್ಮಂದಿರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ–ಮಗಳನ್ನು ಕೊಚ್ಚಿ…

6 days ago