Latest

ಡಿಜಿಟಲ್ ಅರೆಸ್ಟ್” ಹೆಸರಿನಲ್ಲಿ ಕೋಟಿ ಕೋಟಿ ಎಗರಿಸಿದ್ದ ಆರೋಪಿಯನ್ನು ಹೆಡಿಮುರಿ ಕಟ್ಟಿದ ಕಾರವಾರ ಪೊಲೀಸರು.

ಕಾರವಾರ: ‘ಡಿಜಿಟಲ್ ಅರೆಸ್ಟ್ ‘ ಎಂಬ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಸಿ.ಇ.ಎನ್ ಅಪರಾಧ ಪೊಲೀಸರು ಕಾರ್ಯಾಚರಣೆ ನಡೆಸಿ ನಕಲಿ ಪೊಲೀಸನನ್ನು ಬಂಧಿಸಿದ್ದಾರೆ.

ದಿನಾಂಕ 23-10-2024 ರಂದು ಕಾರವಾರದ ವಿಲ್ಸನ್ ಫರ್ನಾಂಡಿಸ್ ಎಂಬುವರಿಗೆ ಒಬ್ಬ ವ್ಯಕ್ತಿ ಕರೆ ಮಾಡಿ ನಾನು ಡಿ ಎಚ್ ಎಲ್ ಕೋರಿಯರ್ ಸರ್ವಿಸ್ ಮುಂಬೈನಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿ ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್ ನಲ್ಲಿ MDMA ಮಾದಕ ವಸ್ತು ಇದೆ ಹಾಗಾಗಿ ಆನ್ಲೈನ್ ಮೂಲಕ ಕಂಪ್ಲೇಂಟ್ ರಿಜಿಸ್ಟರ್ ಮಾಡಬೇಕಾಗುತ್ತದೆ ಎಂದು ತಿಳಿಸಿದ ನಂತರ ಮತ್ತೊಬ್ಬ ನಕಲಿ ಪೊಲೀಸ್ ಅಧಿಕಾರಿಯ ವೇಷದಲ್ಲಿ ವ್ಯಾಟ್ಸಾಪ್ ವಿಡಿಯೋ ಕಾಲ್ ಕರೆ ಮಾಡಿ ನಿಮ್ಮ ಹೆಸರಿನಲ್ಲಿರುವ ಪಾರ್ಸೆಲ್ ನಲ್ಲಿ ಮಾದಕ ವಸ್ತು ಸೇರಿದಂತೆ ಬೇರೆ ಬೇರೆ ಹೆಸರಿನಲ್ಲಿರುವ ಪಾಸ್ಪೋರ್ಟ್ ಗಳು, ಕ್ರೆಡಿಟ್ ಕಾರ್ಡ್ ಗಳು, ಬಟ್ಟೆ ಇರುವುದಾಗಿ ತಿಳಿಸಿ ವೆರಿಫಿಕೇಶನ್ ಮುಗಿಯುವವರೆಗೂ ಯಾರಿಗೂ ವಿಷಯವನ್ನು ತಿಳಿಸದೆ, ಯಾರ ಸಂಪರ್ಕಕ್ಕೂ ಸಿಗದೆ ವಾಟ್ಸಾಪ್ ವಿಡಿಯೋ ಕಾಲ್ ಅನ್ನು ಕಟ್ಟು ಮಾಡಬಾರದೆಂದು ಹೆದರಿಸಿ ರೂಪಾಯಿ 3 ಲಕ್ಷ 80,000 ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದ ಬಿಹಾರ ರಾಜ್ಯದ ಹರ್ದೀಪ್ ಸಿಂಗ್ ಎಂಬಾತನನ್ನು ಕಾರವಾರದ ಸಿ.ಇ.ಎನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲ್ಸನ್ ಫರ್ನಾಂಡಿಸ್ ಅವರ ಅಣ್ಣನಾದ ರಾಫೆಲ್ ಫರ್ನಾಂಡಿಸ್ ಕಾರವಾರ ರವರು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ತಮ್ಮನಿಗೆ ಆದ ಮೋಸದ ಬಗ್ಗೆ ಲಿಖಿತವಾಗಿ ದೂರನ್ನು ನೀಡಿದ್ದು ,
ಸದರಿ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಹೆಡೆಮುರಿ ಕಟ್ಟಲು ಮಾನ್ಯ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಉಪಾಧಿಕ್ಷಕರಾದ ಬಿ ಅಶ್ವಿನಿ ಅವರ ನೇತೃತ್ವದಲ್ಲಿ ಅನುಕೂಲ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಾಮದೇವ್ ನಾಂದ್ರೆ ಇವರನ್ನು ಒಳಗೊಂಡ ತಂಡವು ಬಿಹಾರ ರಾಜ್ಯಕ್ಕೆ ತೆರಳಿ ಆರೋಪಿತನಾದ ಹರ್ದೀಪ್ ಸಿಂಗ್ ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿರುತ್ತಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ನಂತರ ಆರೋಪಿಯು ದೇಶದ ಹಲವು ಭಾಗಗಳಲ್ಲಿ 29 ಸೈಬರ್ ಹಾಗೂ ಡಿಜಿಟಲ್ ಅರೆಸ್ಟ್ ಮತ್ತು ಹೂಡಿಕೆ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಇರುತ್ತದೆ. ಪ್ರಮುಖವಾಗಿ ತಮಿಳುನಾಡು ರಾಜ್ಯದಲ್ಲಿ 9 ಕೋಟಿ, ಆಂಧ್ರಪ್ರದೇಶದಲ್ಲಿ 2 ಕೋಟಿ 47 ಲಕ್ಷ, ಬೆಂಗಳೂರಿನ ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1ಕೋಟಿ 54 ಲಕ್ಷ ಸೇರಿದಂತೆ ರೂಪಾಯಿ 40 ಕೋಟಿ 95 ಲಕ್ಷ ವಂಚಿಸಿದ ಬಗ್ಗೆ ಪತ್ತೆಯಾಗಿದೆ.
ಈ ಕಾರ್ಯಾಚರಣೆಯನ್ನು ಶ್ರೀ ಎಂ. ನಾರಾಯಣ ಪೊಲೀಸ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಶ್ರೀ ಜಗದೀಶ ಎಂ, ಹೆಚ್ಚುವರಿ ಪೊಲೀಸ ಅಧೀಕ್ಷಕರು -02, ಇವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ ಠಾಣೆಯ ಪೊಲೀಸ ಉಪಾಧೀಕ್ಷಕರಾದ ಬಿ. ಅಶ್ವಿನಿ ಇವರ ನೇತ್ರತ್ವದಲ್ಲಿ ಅಂಕೋಲಾ ಪೊಲೀಸ ಠಾಣೆಯ ಪಿ.ಎಸ್.ಐ ಶ್ರೀ ಉದ್ದಪ್ಪ ಧರೆಪ್ಪನವರ ಹಾಗೂ ಸಿ.ಇ.ಎನ್ ಅಪರಾಧ ಪೊಲೀಸ ಠಾಣೆಯ ಸಿಬ್ಬಂದಿಯಾದ ಶ್ರೀ ನಾಮದೇವ ನಾಂದ್ರೆ ಕಾರವಾರ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿಯವರಾದ ಉದಯ ಗುನಗಾ ಮತ್ತು ಬಬನ್ ಕದಂ ಇವರು ಈ ಕಾರಾಚರಣೆಯಲ್ಲಿ ಪಾಲ್ಗೊಂಡಿರತ್ತಾರೆ. ವರದಿ: ಮಂಜುನಾಥ್ ಎಫ್ ಎಚ್

nazeer ahamad

Recent Posts

ದರ್ಭಂಗಾದಲ್ಲಿ ಯುವತಿ ಅಪಹರಣ: ಕ್ರಮಕೈಗೊಳ್ಳದೆ ನಿರ್ಲಕ್ಷಿಸಿದ ಪೊಲೀಸರ ವಿರುದ್ಧ ಆಕ್ರೋಶ

ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ದಿನದ ಬೆಳಗಿನ ಜಾವ ನಡೆದ ಯುವತಿಯ ಅಪಹರಣ ಪ್ರಕರಣ ಇದೀಗ ಪೊಲೀಸರ ನಿರ್ಲಕ್ಷ್ಯ ಆರೋಪದಿಂದ ಚರ್ಚೆಗೆ…

10 minutes ago

ಮಂಗಳೂರು: ನೇತ್ರಾವತಿ ನದಿಯಿಂದ ಮರಳು ಕಳ್ಳ ಸಾಗಾಟ – ಪಿಕಪ್ ಹಾಗೂ ಸ್ಕೂಟರ್ ವಶಕ್ಕೆ

ಮಂಗಳೂರು ನಗರದಲ್ಲಿ ಮರಳು ಕಳ್ಳ ಸಾಗಾಟದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಂಕನಾಡಿ ನಗರ ಠಾಣೆ ಪೊಲೀಸರು ನಡೆಸಿದ ತಪಾಸಣೆಯ ವೇಳೆ…

13 hours ago

ಭಟ್ಕಳ ಸಮುದ್ರ ದುರಂತ: ದೋಣಿ ಮುಗುಚಿ ನಾಲ್ವರು ಮೀನುಗಾರರು ನಾಪತ್ತೆ, ಇಬ್ಬರು ರಕ್ಷಣೆ

ಭಟ್ಕಳ, ಜುಲೈ 30 – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಸಮೀಪದ ಸಮುದ್ರದಲ್ಲಿ ಭೀಕರ ದುರಂತ ಸಂಭವಿಸಿದ್ದು,…

13 hours ago

ಪತ್ನಿಯ ಅಕ್ರಮ ಸಂಬಂಧ ಪತ್ತೆಹಚ್ಚಿದ ಪತಿ ಮೇಲೆ ಪ್ರಿಯಕರನಿಂದ ಹಲ್ಲೆ!

ಸಕಲೇಶಪುರ (ಹಾಸನ ಜಿಲ್ಲೆ), ಜುಲೈ 30 – ಬೆಳಗೋಡು ಹೋಬಳಿಯ ಲಕ್ಮೀಪುರ ಗ್ರಾಮದಲ್ಲಿ ಪತ್ನಿಯ ಅಕ್ರಮ ಸಂಬಂಧ ಪತ್ತೆಹಚ್ಚಿದ ಪತಿಯ…

13 hours ago

ಅಪ್ರಾಪ್ತ ವಿದ್ಯಾರ್ಥಿಗೆ ಅರೆನಗ್ನ ವಿಡಿಯೋ ಕಾಲ್! ಶಿಕ್ಷಕಿ ವಿರುದ್ ಪೋಕ್ಸೋ

ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಶಾಲಾ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ವಿದ್ಯಾರ್ಥಿಗೆ ಅರೆನಗ್ನವಾಗಿ ವಿಡಿಯೋ ಕಾಲ್ ಮಾಡಿರುವ ತೀವ್ರ ಆರೋಪದ ಮೇಲೆ…

14 hours ago

ಮಾಕನೂರಿನಲ್ಲಿ ಜೂಜಾಟ ದಾಳಿ: ₹1.74 ಲಕ್ಷ ನಗದು ವಶ, 18 ಮಂದಿ ವಿರುದ್ಧ ಕೇಸ್

ರಾಣೆಬೆನ್ನೂರು ತಾಲೂಕು ಮಾಕನೂರು ಗ್ರಾಮದ ಸಮೀಪದ ಲಾಟೇರ್‌ ಜಮೀನಿನ ಬಳಿ ನಿರ್ಮಾಣದಲ್ಲಿರುವ ಮನೆಯೊಂದರಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ಸೋಮವಾರ ರಾತ್ರಿ…

14 hours ago