Latest

ಮೂರು ಮಕ್ಕಳ ತಾಯಿಯ ಇನ್ಸ್ಟಾಗ್ರಾಂ ಲವ್ ಸ್ಟೋರಿ: ನವನೀತ್‌ ಗೆ ಮದುವೆಯ ಭರವಸೆ, ಬಳಿಕ ಮೋಸ!

ಚಿಕ್ಕಮಗಳೂರು: ಸಾಮಾಜಿಕ ಮಾಧ್ಯಮದ ಮೂಲಕ ಪ್ರಾರಂಭವಾದ ಪ್ರೀತಿಯ ಕಥೆ, ಕೊನೆಗೆ ಯುವಕನೊಬ್ಬನಿಗೆ ಕಹಿಯಾದ ಪಾಠವನ್ನೇ ಕಲಿಸಿದ ಘಟನೆ ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಕೋಲಾರದ ಶ್ರೀನಿವಾಸಪುರ ತಾಲೂಕಿನ ದ್ವಾರಸಂದ್ರ ಗ್ರಾಮದ ನಿವಾಸಿ 25 ವರ್ಷದ ನವನೀತ್ ಎಂಬ ಯುವಕ, ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಮಹಿಳೆಯನ್ನು ಹುಡುಕಿಕೊಂಡು ನೂರಾರು ಕಿಲೋಮೀಟರ್ ದೂರದ ಚಿಕ್ಕಮಗಳೂರಿಗೆ ಬಂದಿದ್ದ. ಇನ್ಸ್ಟಾಗ್ರಾಂನಲ್ಲಿ ಪ್ರೀತಿಯ ಮಾತುಗಳಿಂದ ಹತ್ತಿರವಾದ ಈ ಸಂಬಂಧ ಒಂದು ವರ್ಷದವರೆಗೆ ಚಾಟ್ ಮೂಲಕ ಮುಂದುವರಿದಿತ್ತು. ಬಳಿಕ ಮಹಿಳೆ ನವನೀತ್‌ ಮನೆಯವರೆಗೂ ಬಂದು ಮೂರು ದಿನಗಳ ಕಾಲ ಉಳಿದು ಹೋಗಿದ್ದಳು.

ಅನ್ನಪೂರ್ಣ ಎಂಬ 35 ವರ್ಷದ ಈ ಮಹಿಳೆ, ತಾನು ಮದುವೆಯಾಗಿಲ್ಲ ಎಂದು ನವನೀತ್‌ಗೆ ಭರವಸೆ ನೀಡಿದ್ದಳು. ನಾನಿನ್ನೂ ಮದುವೆಯಾಗಿಲ್ಲ, ನೀನು ನನ್ನ ಜೀವನಸಂಗಾತಿಯಾಗು ಎಂದು ಹೇಳಿದಳು. ನವನೀತ್ ಕೂಡ ಈ ಭರವಸೆಯ ಮೇಲೆ ತಮ್ಮ ಸಂಬಂಧವನ್ನು ಮುಂದುವರಿಸಿದ್ದ. ಮದುವೆಗೆ ಮೊದಲಿಗೆ ಒಪ್ಪಿಗೆ ಸೂಚಿಸಿದ ಮಹಿಳೆ, ನಂತರ ಆರು ತಿಂಗಳ ನಂತರ ಮದುವೆಯಾಗೋಣ ಎಂದು ಕಾಲ ತೆಗೆದಿದ್ದಳು.

ಆಕೆ ನವನೀತ್‌ ಮನೆಗೆ ಬಂದು ಇರುತ್ತಿದ್ದ ಸಂದರ್ಭದಲ್ಲೂ ಅವರ ಅಕ್ಕ-ಭಾವ ಮಾದರಿ ಪ್ರೀತಿಯನ್ನು ಕಂಡು ಮದುವೆಯಾಗಿ ಕೊಳ್ಳೋಣ ಎಂದು ಸಲಹೆ ನೀಡಿದ್ದರು. ಆದರೆ ಅಪ್ಪಣೆಯಾಗಲಿಲ್ಲ. ಕೆಲ ದಿನಗಳ ನಂತರ ಊರಿಗೆ ಹಿಂದಿರುಗಿದ್ದ ಮಹಿಳೆ, ತನ್ನ ಅಣ್ಣನ ಮಗನಿಗೆ ಆರೋಗ್ಯ ಸಮಸ್ಯೆ ಎಂದು ಹೇಳಿ ಹಣ ಕೇಳಿದ್ದಳು. ನವನೀತ್ ಹಣ ಕಳುಹಿಸಿದ ಕೂಡಲೇ, ಆಕೆ ಮೊಬೈಲ್‌ ನಂಬರ್‌ ಬ್ಲಾಕ್ ಮಾಡಿ ಸಂಪರ್ಕ ಕಡಿದಿದ್ದಳು.

ಯಾಕೆ ಹೀಗೆ ಮಾಡಿದೆ ಎಂಬ ಸ್ಪಷ್ಟತೆಯ ಉದ್ದೇಶದಿಂದ ನವನೀತ್ ತನ್ನ ಬೆನ್ನುಹತ್ತಿ ಹೊಸಕೆರೆ ಗ್ರಾಮದವರೆಗೂ ಹೋಗಿ ಆಕೆಯ ಮನೆಗೆ ತಲುಪಿದಾಗ ಸತ್ಯ ಬಹಿರಂಗವಾಯಿತು. ಯಾಕೆಂದರೆ ಆಕೆಯಿಗೂ ಪತಿಯೂ ಇದ್ದರು. ಮದುವೆಯಾಗಿ ಮೂರು ಮಕ್ಕಳನ್ನು ಹೆತ್ತಿದ್ದಳು ಅನ್ನಪೂರ್ಣ. ಈ ಸತ್ಯ ತಿಳಿದಾಗ ನವನೀತ್ ಆತಂಕದಿಂದ ಶಾಕ್‌ನಲ್ಲೇ ಬಿದ್ದಿದ್ದ.

ತಾನೊಬ್ಬ ಪ್ರೀತಿಗೋಸ್ಕರ ನಂಬಿಕೆಯಿಂದ ಎಲ್ಲವನ್ನೂ ಕೊಟ್ಟು ಬಿಟ್ಟಿದ್ದೆ, ಹಣವೂ ಹೋದ್‌, ಭರವಸೆಗೂ ದರೋಡೆ ಆಯಿತು ಎಂದು ನವನೀತ್ ಅಕ್ರೋಶದಿಂದ ಹೇಳಿಕೊಂಡಿದ್ದಾನೆ. ಇನ್ಸ್ಟಾಗ್ರಾಂ ಚಾಟ್‌ನ ಪ್ರೇಮ ಸಂಬಂಧವೇ ಅವನ ಬದುಕಿನಲ್ಲಿ ಗಂಭೀರ ತೊಂದರೆಯಾಗಿ ಪರಿಣಮಿಸಿದೆ.

nazeer ahamad

Recent Posts

52ರಲ್ಲೂ ಮಲೈಕಾ ಅರೋರಾ ಲವ್ ಲೈಫ್‌ ಸದ್ದು: ನಬೀಲ್ ನದ್ಲವಿ ಜೊತೆ ಫೋಟೋ ವೈರಲ್, ಹೊಸ ಸಂಬಂಧದ ಗುಸುಗುಸು!

ಮುಂಬೈ: ಬಾಲಿವುಡ್‌ನ ಫಿಟ್ನೆಸ್ ಹಾಗೂ ಫ್ಯಾಷನ್ ಐಕಾನ್ ಮಲೈಕಾ ಅರೋರಾ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಆಗಾಗ್ಗೆ ಸುದ್ದಿಯಾಗುತ್ತಾರೆ. ಇದೀಗ…

14 minutes ago

ಬೈಕ್‌ಗೆ ಬೆಂಕಿ ಹಾಕಿದ್ದು ರಾಜಕೀಯ ದ್ವೇಷಕ್ಕಲ್ಲ; ಪತಿಯನ್ನೇ ಕೊಲ್ಲಲು ಪತ್ನಿಯ ಸಂಚು! 6 ಮಂದಿ ಬಂಧನ

ಚಂದ್ರಗಿರಿ (ತಿರುಪತಿ): ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಬೈಕ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ಭಾವಿಸಲಾಗಿದ್ದ ಪ್ರಕರಣವೊಂದು ತನಿಖೆಯ ಬಳಿಕ ಬೇರೆಯದೇ ತಿರುವು…

16 minutes ago

ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಪಾಲಿಗೆ ಯಮನಾದ: 6 ದಿನದ ಹಸುಗೂಸಿನೊಂದಿಗೆ ಪರಾರಿ!

ದಾವಣಗೆರೆ: ಪ್ರೀತಿಸಿ ಮದುವೆಯಾದ ಪತಿಯೇ ಪತ್ನಿಯ ಸಾವಿಗೆ ಕಾರಣನಾದ ಆರೋಪ ಕೇಳಿಬಂದಿದ್ದು, ಮೃತದೇಹವನ್ನು ಪೊಲೀಸ್ ಠಾಣೆ ಬಳಿಯ ರಸ್ತೆಯಲ್ಲಿ ಬಿಟ್ಟು…

17 minutes ago

ಹಾಡಹಗಲೇ ಪಡಿತರ ಅಕ್ಕಿ ಸಾಗಾಟ: ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ..!

ಬಾಗಲಕೋಟೆ: ಬಡ ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು…

21 hours ago

₹5 ಸಾವಿರಕ್ಕೆ ರೂಮ್‌ಗೆ ಬಂದ ಯುವತಿ; ಬಿಯರ್‌ನಲ್ಲಿ ಅಮಲು ಬೆರೆಸಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್!

ಪ್ರವಾಸಕ್ಕೆಂದು ಹೋಗಿದ್ದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೋಟೆಲ್‌ನಲ್ಲಿ ಯುವತಿಯೊಬ್ಬಳ ಮೋಸದ ಜಾಲಕ್ಕೆ ಸಿಲುಕಿ ಹಣ ಹಾಗೂ ಚಿನ್ನ ಕಳೆದುಕೊಂಡಿರುವ ಘಟನೆ…

1 day ago

₹20 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ!

ಹಾವೇರಿ: ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಅಧಿಕಾರಿಯೊಬ್ಬರು ಲೋಕಾಯುಕ್ತ…

1 day ago