Categories: CinemaLatestNational

‘ಧುರಂಧರ್’ ಸಿನಿಮಾ ಪ್ರಭಾವವೇ? ಪಾಕಿಸ್ತಾನದಲ್ಲಿ ಗುಪ್ತಚರ ಶೋಧದ ವಿಡಿಯೋ ವೈರಲ್

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರದ ಸದ್ದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಕೇಳಿಬರುತ್ತಿರುವಂತೆಯೇ, ಅದರ ಪ್ರಭಾವ ನೆರೆ ರಾಷ್ಟ್ರ ಪಾಕಿಸ್ತಾನದಲ್ಲೂ ಚರ್ಚೆಗೆ ಕಾರಣವಾಗಿದೆ. ವಿಶೇಷವಾಗಿ ಲಿಯಾರಿ ಪ್ರದೇಶದಲ್ಲಿ ನಡೆದಿದೆಯೆಂದು ಹೇಳಲಾಗುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಭಾರತೀಯ ಗುಪ್ತಚರನಾಗಿ ಪಾಕಿಸ್ತಾನದ ಲಿಯಾರಿಗೆ ನುಗ್ಗಿ ಕಾರ್ಯಾಚರಣೆ ನಡೆಸುವ ಕಥಾಹಂದರ ಹೊಂದಿದೆ. ಈ ಹಿನ್ನೆಲೆ, ಪಾಕಿಸ್ತಾನದಲ್ಲಿ ಕೆಲವರು ಸಿನಿಮಾವನ್ನು ನಿಜವೆಂದು ಭಾವಿಸಿ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುತ್ತಿರುವ ದೃಶ್ಯಗಳು ವೈರಲ್ ಆಗುತ್ತಿರುವುದು ಗಮನಸೆಳೆಯುತ್ತಿದೆ.

ಸಿನಿಮಾ ಅಧಿಕೃತವಾಗಿ ಪಾಕಿಸ್ತಾನದಲ್ಲಿ ನಿಷೇಧಗೊಂಡಿದ್ದರೂ, ಕೆಲವರು ಅದನ್ನು ನೋಡಿರುವ ಹಿನ್ನೆಲೆಯಲ್ಲಿ ಲಿಯಾರಿಯಲ್ಲಿ ಪೊಲೀಸರು ಎಚ್ಚರಿಕೆ ಕ್ರಮವಾಗಿ ಗಸ್ತು ಹೆಚ್ಚಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಇದುವರೆಗೆ ಯಾವುದೇ ಭಾರತೀಯ ಗುಪ್ತಚರರ ಪತ್ತೆಯಾದ ಮಾಹಿತಿ ಇಲ್ಲ.

ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನ ಪೊಲೀಸ್ ಅಧಿಕಾರಿಗಳು, ವೈರಲ್ ವಿಡಿಯೋದಲ್ಲಿ ಕಾಣಿಸುತ್ತಿರುವವರು ನಿಜವಾದ ಪೊಲೀಸರು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನರು ವದಂತಿಗಳಿಗೆ ಕಿವಿಗೊಡಬಾರದು, ಈ ವಿಡಿಯೋ ನಿಜಾಸತ್ಯತೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ.

ಇದಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು “ಸಿನಿಮಾ ಪ್ರಭಾವದಿಂದ ಇಂತಹ ಗೊಂದಲಗಳು ಉಂಟಾಗಿವೆ” ಎಂದು ಹೇಳಿದರೆ, ಇನ್ನೂ ಕೆಲವರು “ಸಿನಿಮಾವನ್ನೇ ನಿಜವೆಂದು ನಂಬುವುದು ಅತಿಶಯ” ಎಂದು ವ್ಯಂಗ್ಯ ಮಾಡಿದ್ದಾರೆ.

ಭ್ರಷ್ಟರ ಬೇಟೆ

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

23 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

2 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

2 days ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

3 days ago