Latest

ಮಹಿಳಾ ASI ಜೊತೆ IPS ಅಧಿಕಾರಿ ಅಕ್ರಮ ಸಂಬಂಧ ಆರೋಪ; ನೊಂದ ಪೊಲೀಸ್ ಹೋರಾಟ

ಕಲಬುರಗಿ: IPS ಅಧಿಕಾರಿ ಅರುಣ್ ರಂಗರಾಜನ್​ ಅವರು ಮಹಿಳಾ ASI ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ನನ್ನ ಹೆಂಡತಿ ಜೊತೆ IPS ಅಧಿಕಾರಿ ಅರುಣ್ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆಕೆಯ ಗಂಡ ಜಿಲ್ಲೆಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಗರದ ಐವಾನ್ ಶಾಹಿ ಬಡವಾಣೆಯಲ್ಲಿನ PWD ಕ್ವಾಟರ್ಸ್‌ನಲ್ಲಿ ಇಬ್ಬರು ಒಟ್ಟಿಗೆ ಇದ್ದರು. ಇದನ್ನು ಕಂಡ ಗಂಡನಿಗೆ ಶಾಕ್​ ಆಗಿತ್ತು. ಬಳಿಕ ಇಬ್ಬರು ಇರುವುದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಮಾಡಿದ ಹಿನ್ನೆಲೆಯಲ್ಲಿ ಪತಿಯನ್ನ ಹತ್ಯೆ ಮಾಡುವುದಾಗಿ ಪತ್ನಿ ಮತ್ತು ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್​ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಏಕಾಂತದಲ್ಲಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು ಜಿಲ್ಲೆಯ ISD ವಿಭಾಗದಲ್ಲಿ ಕಳೆದ 3 ವರ್ಷಗಳಿಂದ ಈ ಇಬ್ಬರು ಕೆಲಸ ಮಾಡುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಮಹಿಳಾ ಎಎಸ್​ಐ ಜೊತೆ ಐಪಿಎಸ್​ ಅರುಣ್​ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿಂದೆಯು ಇಬ್ಬರು ಏಕಾಂತದಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಪತಿಗೆ ಸಿಕ್ಕಿ ಹಾಕಿಕೊಂಡಿದ್ದರು. ಹೀಗಾಗಿ ಎರಡ್ಮೂರು ಬಾರಿ ಪತ್ನಿಗೆ ಹಾಗೂ ಐಪಿಎಸ್ ಅಧಿಕಾರಿಗೆ ಪತಿ ತಿಳಿ ಹೇಳಿದ್ದರು. ಐಪಿಎಸ್​ ಅರುಣ್​ ಮನೆಯಲ್ಲೂ ಒಮ್ಮೆ ಪತಿ ಕೈಗೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಹಾಕಿಕೊಡಿದ್ದರು. ಈ ವೇಳೆ ಮನೆಯೊಳಗೆ ಹೋಗಲು ಪ್ರಯತ್ನಿಸಿದ್ದ ಪತಿಗೆ ಕೊಲೆ ಮಾಡುವುದಾಗಿ ಇಬ್ಬರು ಬೆದರಿಕೆ ಹಾಕಿದ್ದರು. ಹೀಗಾಗಿ ಮನೆ ಸುತ್ತಾ ಓಡಾಡಿ ಪತಿ ವಿಡಿಯೋ ಮಾಡಿದ್ದರು. ಸದ್ಯ ತನ್ನ ಪತ್ನಿ ಹಾಗೂ ಐಪಿಎಸ್ ಅರುಣ್ ರಂಗರಾಜನ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 323 , 324 , 498 , 376(2) (b) , 342, 504, 506 (2) 507, 420, 406, 500, 201, 109, 457 ಅಡಿ ಎಫ್​ಐಆರ್ ದಾಖಲಿಸಲಾಗಿದೆ.

ಐಪಿಎಸ್​ ಅರುಣ್ ರಂಗರಾಜನ್ ಹೇಳೋದೇನು..? ಮಹಿಳಾ ಎಎಸ್​ಐ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಅರುಣ್​ ರಂಗರಾಜನ್​ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರ ಹೆಂಡತಿಯನ್ನ ಯಾರು ಕೂಡಿ ಹಾಕೋಕೆ ಆಗಲ್ಲ. ತನ್ನ ಪತ್ನಿಯನ್ನ ಮನೆಯಲ್ಲಿಟ್ಟುಕೊಳ್ಳುವುದು ಒಬ್ಬ ಪತಿಯ ಜವಾಬ್ದಾರಿ. ಅದನ್ನ ಅವನು ಇಟ್ಟುಕೊಳ್ಳಲಿಲ್ಲ ಅಂದ್ರೆ ಅವಳು ಎಲ್ಲಿ ಬೇಕೊ ಅಲ್ಲಿ ಹೋಗಿ ಸೇರುತ್ತಾಳೆ. ನನ್ನ ಮನೆಯಲ್ಲಿ 100 ಜನ ಇರುತ್ತಾರೆ ಅದನ್ನೆಲ್ಲ ಹೇಳೊಕೆ ಆಗುತ್ತಾ? ಮನೆ ಬಾಡಿಗೆ ಕಟ್ಟುವವನು ನಾನು. ಯಾರು ಬೇಕಾದ್ರು ಇರುತ್ತಾರೆ. ಅವನ ಪತ್ನಿ ಅವನ ಮನೆಯಲ್ಲಿಲ್ಲ ಅಂದ್ರೆ ಅವನು ಎಲ್ಲಿ ಹೋಗಿ ಹುಡುಕಬೇಕು ಅಲ್ಲಿ ಹುಡುಕಬೇಕು ಎಂದು ಅರುಣ್ ರಂಗರಾಜನ್ ಹೇಳಿದ್ದಾರೆ.

ಭ್ರಷ್ಟರ ಬೇಟೆ

Recent Posts

ಯುವತಿ ಅತ್ಯಾಚಾರ, ಕೊಲೆ ಪ್ರಕರಣ: ಕರ್ತವ್ಯಲೋಪ ಆರೋಪದಲ್ಲಿ 4 ಪೊಲೀಸ್ ಪೇದೆಗಳು ಅಮಾನತು

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 21 ವರ್ಷದ ಯುವತಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ…

1 day ago

KSRTC ಬಸ್‌ನಲ್ಲಿ ಯುವತಿಗೆ ಕಿರುಕುಳ ಆರೋಪ: ಚಪ್ಪಲಿಯಿಂದ ಯುವಕನಿಗೆ ಧರ್ಮದೇಟು, ಕ್ಷಮೆಯಾಚನೆ

ಹಾಸನ: ಹಾಸನದಿಂದ ಬೆಂಗಳೂರಿನತ್ತ ತೆರಳುತ್ತಿದ್ದ KSRTC ಬಸ್‌ನಲ್ಲಿ ಯುವತಿಯೊಬ್ಬರಿಗೆ ಸಹ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಇದರಿಂದ ಬಸ್‌ನಲ್ಲಿ…

1 day ago

MBBS ಓದಲು ರಷ್ಯಾಗೆ ಹೋದ ಯುವಕನಿಗೆ ಪ್ರೊಫೆಸರ್ ಜೊತೆ ಪ್ರೀತಿ; ಮದುವೆ ಬಳಿಕ ಕ್ಲಿನಿಕ್ ಆರಂಭಿಸಿ ಲಕ್ಷಾಂತರ ಸಂಪಾದನೆ!

ಉನ್ನತ ವ್ಯಾಸಂಗದ ಕನಸು ಹೊತ್ತು ವಿದೇಶಕ್ಕೆ ತೆರಳಿದ್ದ ಉತ್ತರ ಪ್ರದೇಶದ ಯುವಕನ ಜೀವನ ಇದೀಗ ಸಂಪೂರ್ಣ ಬದಲಾಗಿದೆ. ಎಂಬಿಬಿಎಸ್ ಓದಲು…

1 day ago

ಶಾಲಾ ಬಾಲಕಿಯರನ್ನು ಪ್ರೇಮದ ಬಲೆಗೆ ಬೀಳಿಸಿ ಹಣ ಸಂಪಾದನೆ ಆರೋಪ: ದೆಹಲಿಯಲ್ಲಿ 24 ವರ್ಷದ ಯುವಕ ಬಂಧನ

ದೆಹಲಿಯ ಉತ್ತಮ್ ನಗರದಲ್ಲಿ 24 ವರ್ಷದ ಯುವಕನೊಬ್ಬನನ್ನು ಸ್ಥಳೀಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಳಿಕ, ಆತನ ಮೊಬೈಲ್‌ನಲ್ಲಿ ಪತ್ತೆಯಾದ…

1 day ago

ಕಿತ್ತೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಆಭರಣ ಕಳ್ಳತನ ಪ್ರಕರಣ ಭೇದಿಸಿ 5 ಅಂತರರಾಜ್ಯ ಕಳ್ಳರ ಬಂಧನ

ಕಿತ್ತೂರು: ಚನ್ನಮ್ಮನ ಕಿತ್ತೂರಿನಲ್ಲಿ ನಡೆದ ಆಭರಣ ಅಂಗಡಿ ಕಳ್ಳತನ ಪ್ರಕರಣವನ್ನು ಕಿತ್ತೂರು ಪೊಲೀಸರು ಭೇದಿಸಿದ್ದು, ರಾಜಸ್ಥಾನ ಮೂಲದ ನಾಲ್ವರು ಹಾಗೂ…

1 day ago

ಬೆಳಗಾವಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ ಅನುಷ್ಠಾನದ ಮೌಲ್ಯಮಾಪನ: ಸಂತ್ರಸ್ತರೊಂದಿಗೆ ಗುಂಪು ಚರ್ಚೆ

ಬೆಳಗಾವಿ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅನುಷ್ಠಾನದ ಕುರಿತು ನೈರುತ್ಯ ಆರ್ಟ ಮೀಡಿಯಾ ಸಂಸ್ಥೆ (ಬೆಂಗಳೂರು)…

1 day ago