Latest

ಮನೆಯಲ್ಲಿ ಅಕ್ರಮ ಶ್ರೀಗಂಧ ಸಂಗ್ರಹ: ಒಬ್ಬನ ಬಂಧನ, 25 ಕೆ.ಜಿ. ಸರಕು ವಶ

ಹುಣಸೂರು ತಾಲೂಕಿನ ಮಂಗಳೂರು ಮಾಳ ಗ್ರಾಮದಲ್ಲಿ ಅಕ್ರಮ ಶ್ರೀಗಂಧ ಸಂಗ್ರಹಿಸಿರುವ ಮಾಹಿತಿಯ ಮೇರೆಗೆ ನಡೆದ ದಾಳಿಯಲ್ಲಿ ಪೊಲೀಸರು ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಶಿವನಂಜು ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬಂಧಿತ ಶಿವನಂಜು ತನ್ನ ಮನೆದಲ್ಲಿ ನಿಯಮವಿರುದ್ಧವಾಗಿ ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಇಟ್ಟಿದ್ದ ಎನ್ನಲಾಗಿದೆ. ಈ ಕುರಿತು ಖಚಿತ ಮಾಹಿತಿ ಪಡೆದ ಅಪರಾಧ ವಿಭಾಗದ ಉಪನಿರೀಕ್ಷಕ ರಾಮು ಅವರ ನೇತೃತ್ವದಲ್ಲಿ ತಂಡವೊಂದು ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿತು.

ದಾಳಿ ವೇಳೆ ಪ್ಲಾಸ್ಟಿಕ್ ಚೀಲದಲ್ಲಿ ಭದ್ರವಾಗಿ ಇಡಲಾಗಿದ್ದ ಸುಮಾರು 25 ಕೆ.ಜಿ. ತೂಕದ ಶ್ರೀಗಂಧದ ತುಂಡುಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ಎಎಸ್‌ಐಗಳಾದ ಅಂತೋಣಿ ಕ್ರೂಸ್, ಚಿನ್ನಸ್ವಾಮಿ ಹಾಗೂ ಸಿಬ್ಬಂದಿಗಳಾದ ವಿಜಯರಘು, ಮಂಜುನಾಥ್, ಆರ್.ರಘು ಪಾಲ್ಗೊಂಡಿದ್ದರು ಎಂದು ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಮುನಿಸ್ವಾಮಿ ತಿಳಿಸಿದ್ದಾರೆ.

ಶ್ರೀಗಂಧ ಅಕ್ರಮ ಸಂಗ್ರಹ ಹಾಗೂ ಸಾಗಣೆಯ ವಿರುದ್ಧ ಪೊಲೀಸರು ತೀವ್ರ ಕಾರ್ಯಾಚರಣೆ ಮುಂದುವರೆಸಿದ್ದು, ಇನ್ನು ಹಲವು ಮಾಹಿತಿಗಳ ಹೊರಬರಲಿವೆ ಎಂಬ ನಿರೀಕ್ಷೆಯಿದೆ.

nazeer ahamad

Recent Posts

ಗಂಡನ ಬೆಂಬಲದಿಂದ ಸರ್ಕಾರಿ ಉದ್ಯೋಗ ಪಡೆದ ಪತ್ನಿ: ದೂರವಾಗಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ

ಶಿಕ್ಷಣಕ್ಕೆ ಬೆಂಬಲ ನೀಡಿ ಪತ್ನಿಗೆ ಸರ್ಕಾರಿ ಉದ್ಯೋಗ ಸಿಗುವಂತೆ ಮಾಡಿದ ಗಂಡನೊಬ್ಬ, ನಂತರ ಪತ್ನಿಯ ನಿರ್ಲಕ್ಷ್ಯ ಮತ್ತು ಕಿರುಕುಳದಿಂದ ಮನನೊಂದು…

5 hours ago

ಮಲೆನಾಡಿನಲ್ಲಿ ನಿಗೂಢವಾಗಿ ಹಾರಾಡಿದ್ದ ವಿಮಾನದ ರಹಸ್ಯ ಬಯಲು..!

ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಬಾಳೆಹೊನ್ನೂರುವರೆಗೆ ಭದ್ರಾ ನದಿ ಪ್ರದೇಶದಲ್ಲಿ ಇತ್ತೀಚೆಗೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ನಿಗೂಢ ವಿಮಾನ ಸಾರ್ವಜನಿಕರಲ್ಲಿ ಭೀತಿ…

5 hours ago

ಧಾರವಾಡ ಅರಣ್ಯದಲ್ಲಿ ದಾರುಣ ಘಟನೆ: ಕಾರಿನಲ್ಲೇ ಸುಟ್ಟ ಸ್ಥಿತಿಯಲ್ಲಿ ಮಾಜಿ ಶಾಸಕನ ಪುತ್ರ

ಧಾರವಾಡ ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ…

16 hours ago

ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ: ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲೇ ಹೆಚ್ಚಿನ ಕೊರತೆ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಹತ್ವದ ಮಾಹಿತಿ ಬಹಿರಂಗವಾಗಿದೆ. ವಿಧಾನಸಭೆಯಲ್ಲಿ ಸಂಡೂರು ಕ್ಷೇತ್ರದ ಶಾಸಕ…

21 hours ago

ಸರ್ಕಾರಿ ನೌಕರರಿಗೆ ಹೊಸ ನಿಯಮ: ಮುಂಬಡ್ತಿಗೆ ತರಬೇತಿ ಕಡ್ಡಾಯ

ಕರ್ನಾಟಕ ಸರ್ಕಾರವು ನಾಗರಿಕ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮಹತ್ವದ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಸರ್ಕಾರಿ ನೌಕರರು ಮುಂಬಡ್ತಿ…

22 hours ago

‘ಧುರಂಧರ್’ ಸಿನಿಮಾ ಪ್ರಭಾವವೇ? ಪಾಕಿಸ್ತಾನದಲ್ಲಿ ಗುಪ್ತಚರ ಶೋಧದ ವಿಡಿಯೋ ವೈರಲ್

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರದ ಸದ್ದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಕೇಳಿಬರುತ್ತಿರುವಂತೆಯೇ, ಅದರ ಪ್ರಭಾವ…

1 day ago