ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದಲ್ಲಿ ಅಕ್ರಮ ಮರಳು ತೆಗೆಯುವ ಕಾರ್ಯ ಬೆಳಕಿಗೆ ಬಂದಿದ್ದು, ಪೊಲೀಸರು ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಪಂಚಗಂಗಾವಳಿ ನದಿಯಲ್ಲಿ ಪರವಾನಿಗೆ ಇಲ್ಲದೆ ಮರಳು ತೆಗೆಯಲಾಗುತ್ತಿತ್ತು ಎಂಬ ಮಾಹಿತಿ ಮೇರೆಗೆ, ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜಾ ನಾಯ್ಕ್ ನೇತೃತ್ವದ ತಂಡ ಭಾನುವಾರ ದಾಳಿ ನಡೆಸಿತು. ನಾನಾ ಸಾಹೇಬ್ ರಸ್ತೆ ಕೊನೆ ಮತ್ತು ರಿಂಗ್ ರೋಡ್ ಸಮೀಪದ ನದಿತಟದಲ್ಲಿ ಈ ದಂಧೆ ನಡೆಯುತ್ತಿತ್ತು.
ದಾಳಿಯಲ್ಲಿ ಆರೋಪಿತ ಉದಯ ಮೆಂಡನ್ ಎಂಬಾತನು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಇನ್ನುಳಿದ ಮತ್ತೊಬ್ಬ ಆರೋಪಿ ಸುನಿಲ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಗಳು ಮರಳನ್ನು ದೋಣಿಯಲ್ಲಿ ತುಂಬಿ ಟಿಪ್ಪರ್ ವಾಹನದ ಮೂಲಕ ಸಾಗಾಟ ಮಾಡಲು ಯೋಜಿಸುತ್ತಿದ್ದರು.
ಪೊಲೀಸರು ಘಟನೆಯ ಸ್ಥಳದಿಂದ ಹಲವಾರು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ₹15,000 ಮೌಲ್ಯದ ಫೈಬರ್ ದೋಣಿ, ₹5,000 ಮೌಲ್ಯದ 1½ ಯುನಿಟ್ ಮರಳು, ಹಾಗೂ ₹5 ಲಕ್ಷ ಮೌಲ್ಯದ KA20 C6070 ಸಂಖ್ಯೆಯ ಟಿಪ್ಪರ್ ವಾಹನ ಸೇರಿವೆ. ಜೊತೆಗೆ ಕಬ್ಬಿಣದ ಹಾರೆ ಮತ್ತು ಫೈಬರ್ ಬುಟ್ಟಿಗಳು ಎರಡು ಸಹ ಜಪ್ತಿ ಮಾಡಲಾಗಿದೆ.
ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಸಿಕ್ಕಿಲ್ಲದ ಆರೋಪಿ ಸುನಿಲ್ ಬಗ್ಗೆ ಹುಡುಕಾಟ ಮುಂದುವರೆದಿದೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…