Categories: CrimeLatest

ಅಕ್ರಮ ಗಾಂಜಾ ಮಾರಾಟಗಾರನ ಬಂಧನ

ಮುಂಡಗೋಡ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ಶಿರಸಿ ಹುಬ್ಬಳ್ಳಿ ರಸ್ತೆಯ KSRTC ಡೀಪೋ ಬಳಿ ದಾಳಿ ಮಾಡಿ ಇ‌ಂದೂರಿನ ಅಕ್ಬರ್ ಮೌಲಾಸಾಬ್ ಸೈಯದ್ ಅಲಿ (32) ಎನ್ನುವ ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

ಮುಂಡಗೋಡ ಪಟ್ಟಣದ ಶಿರಸಿ-ಹುಬ್ಬಳ್ಳಿ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿತನಾದ ಅಕ್ಬರ್ ಮೌಲಾಸಾಬ ಸೈಯದ್‌ಅಲಿ ಈತನು ಬಿಳಿ ಬಣ್ಣದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗನಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿ ಆರೋಪಿತನನ್ನು ಬಂದಿಸಲಾಗಿದೆ.
ದಾಳಿಯ ವೇಳೆ ಸುಮಾರು 12 ಸಾವಿರ ಮೌಲ್ಯದ 184 ಗ್ರಾಂ ತೂಕದ ಗಾಂಜಾ ಹಾಗೂ ಅಂಗ ಶೋಧನೆ ವೇಳೆ ಸಿಕ್ಕ ನಗದು 360 ರೂ. ವಶಪಡಿಸಿಕೊಳ್ಳಲಾಗಿದೆ.

ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್,
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ರವರ ಮಾರ್ಗದರ್ಶನದಲ್ಲಿ ಅಕ್ರಮ ಗಾಂಜಾವನ್ನು ಮಾರಾಟ ಮಾಡುವ ಆರೋಪಿತನನ್ನು ಬಂಧಿಸುವಲ್ಲಿ ಮುಂಡಗೋಡ ಪಿಐ ರಂಗನಾಥ ನೀಲಮ್ಮನವರ, ಪಿಎಸ್ಐ ಮಂಜುನಾಥ ಗೌಡರ ಸಿಬ್ಬಂದಿಗಳಾದ ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ಮಹಾಂತೇಶ ಮುಧೋಳ, ನಾಗಪ್ಪ ಮೊರಟಗಿ ಹಾಗೂ ಬಸವರಾಜ ಡೆಯರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರುಗಳಿಗೆ ಎಸ್ಪಿ ದೀಪನ್ ಎಂ.ಎನ್ ಪ್ರಶಂಸಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ‌.

ಭ್ರಷ್ಟರ ಬೇಟೆ

Recent Posts

ಸೊಸೆಯನ್ನು ಬಿಡದ ಕಾಮುಕ ತಂದೆಯ ಕೊಲೆಗೆ ಮಗನೇ ಕೊಟ್ಟ ಸುಪಾರಿ..!

ಯಾದಗಿರಿ ಜಿಲ್ಲೆಯ ಗೋನಾಳ ಗ್ರಾಮದಲ್ಲಿ ನಡೆದ ವೃದ್ಧನ ಹತ್ಯೆ ಪ್ರಕರಣಕ್ಕೆ ಈಗ ಅಚ್ಚರಿ ಮೂಡಿಸುವ ತಿರುವು ಸಿಕ್ಕಿದೆ. 74 ವರ್ಷದ…

4 hours ago

ಪ್ರೀತ್ಸೆ ಎಂದು ಮೂರು ಮಕ್ಕಳ ತಾಯಿಯ ಹಿಂದೆ ಬಿದ್ದ: ಒಪ್ಪದಕ್ಕೆ ಅವಳನ್ನೇ ಕೊಂದ..!

ಬೆಂಗಳೂರು ನಗರದ ಚಂದ್ರಾ ಲೇಔಟ್ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಮಧ್ಯಾಹ್ನ ನಡೆದ ಭೀಕರ ಘಟನೆಯಲ್ಲಿ ವಿವಾಹಿತ ಮಹಿಳೆ ಫಿರ್ದೋಸ್ ಭಾನು ಹತ್ಯೆಯಾಗಿದ್ದಾಳೆ.…

4 hours ago

ಸೆಲೆಬ್ರಿಟಿ ಜ್ಯೋತಿಷಿಯ ಭಯಾನಕ ಮುಖ ಬಯಲು: ಅತ್ಯಾಚಾರ ಆರೋಪದಲ್ಲಿ ಬಂಧನ, 58 ಮಹಿಳೆಯರ ರಹಸ್ಯ ವಿಡಿಯೋ ಪತ್ತೆ

ಮಹಾರಾಷ್ಟ್ರದಲ್ಲಿ ರಾಜಕೀಯ ಮುಖಂಡರ ಜ್ಯೋತಿಷ್ಯ ಹೇಳಿ ಖ್ಯಾತಿ ಪಡೆದಿದ್ದ ಸ್ವಯಂ ಘೋಷಿತ ಜ್ಯೋತಿಷಿ ‘ಕ್ಯಾಪ್ಟನ್’ ಅಶೋಕ್ ಖರತ್ ಇದೀಗ ಗಂಭೀರ…

4 hours ago

NHPC ನಲ್ಲಿ 81 ಟ್ರೈನಿ ಎಂಜಿನಿಯರ್ ಹುದ್ದೆಗಳು: ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ

ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಉತ್ತಮ ಸಂಬಳದ ಉದ್ಯೋಗ ಪಡೆಯಲು ಬಯಸುವವರಿಗೆ ಮಹತ್ವದ ಅವಕಾಶ ಬಂದಿದೆ. ರಾಷ್ಟ್ರೀಯ ಜಲ ವಿದ್ಯುಚ್ಛಕ್ತಿ ನಿಗಮ…

4 hours ago

ಕರ್ನಾಟಕ ಹೈಕೋರ್ಟ್‌ನಲ್ಲಿ 70 ಅಸಿಸ್ಟಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳು: ಕಾನೂನು ಪದವೀಧರರಿಗೆ ಸುವರ್ಣಾವಕಾಶ

ಕಾನೂನು ಪದವಿ ಪಡೆದ ನಂತರ ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಕರ್ನಾಟಕ ಹೈಕೋರ್ಟ್‌ವು 2026ರ ನೇಮಕಾತಿಗಾಗಿ ಅಧಿಸೂಚನೆ…

4 hours ago

ರಾಜ್ಯದಲ್ಲಿ 5,000 ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಘೋಷಣೆ

ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷದಲ್ಲೇ ಸುಮಾರು 5,000 ಅಂಗನವಾಡಿ ಕೇಂದ್ರಗಳಲ್ಲಿ…

4 hours ago