Categories: CrimeLatest

ಪ್ರೀತ್ಸೆ ಎಂದು ಮೂರು ಮಕ್ಕಳ ತಾಯಿಯ ಹಿಂದೆ ಬಿದ್ದ: ಒಪ್ಪದಕ್ಕೆ ಅವಳನ್ನೇ ಕೊಂದ..!

ಬೆಂಗಳೂರು ನಗರದ ಚಂದ್ರಾ ಲೇಔಟ್ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಮಧ್ಯಾಹ್ನ ನಡೆದ ಭೀಕರ ಘಟನೆಯಲ್ಲಿ ವಿವಾಹಿತ ಮಹಿಳೆ ಫಿರ್ದೋಸ್ ಭಾನು ಹತ್ಯೆಯಾಗಿದ್ದಾಳೆ. ಪರಿಚಿತ ವ್ಯಕ್ತಿಯೊಬ್ಬನಿಂದಲೇ ಚಾಕುವಿನಿಂದ ಹಲ್ಲೆ ನಡೆಸಲ್ಪಟ್ಟಿದ್ದು, ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಮಾಹಿತಿಯ ಪ್ರಕಾರ, ಫಿರ್ದೋಸ್ ಭಾನು ಅವರ ಹೊಟ್ಟೆ, ತೊಡೆ ಮತ್ತು ಕೈ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಕೃತ್ಯ ಎಸಗಿದ ಆರೋಪಿಯನ್ನು ‘ಅಫೀಸ್’ ಎಂದು ಗುರುತಿಸಲಾಗಿದೆ. ಆತ ಸ್ಥಳೀಯ ಆಟೋ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಕಳೆದ ಕೆಲವು ತಿಂಗಳಿನಿಂದ ಆರೋಪಿ ಫಿರ್ದೋಸ್ ಅವರ ಹಿಂದೆ ಬಿದ್ದು, ಪ್ರೀತಿಸಲು ಒತ್ತಾಯಿಸುತ್ತಿದ್ದನು. ಆದರೆ ಫಿರ್ದೋಸ್ ಈ ಪ್ರಸ್ತಾವವನ್ನು ಸ್ಪಷ್ಟವಾಗಿ ನಿರಾಕರಿಸಿ, ಆತನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. ಈ ವಿಚಾರ ಮೊದಲು ಚಂದ್ರಾ ಲೇಔಟ್ ಪೊಲೀಸ್ ಠಾಣೆಗೂ ತಲುಪಿದ್ದು, ಫಿರ್ದೋಸ್ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಇನ್ನು ಮುಂದೆ ಕಿರುಕುಳ ನೀಡುವುದಿಲ್ಲವೆಂದು ಆತ ಬರವಸೆ ಪತ್ರ ನೀಡಿದ್ದನು.

ಆದರೂ, ಆರೋಪಿ ತನ್ನ ವರ್ತನೆ ಬದಲಿಸದೆ ಮತ್ತೆ ಮತ್ತೆ ಫಿರ್ದೋಸ್ ಅವರ ಹಿಂದೆ ಬೀಳುತ್ತಿದ್ದನು. ಅವರು ಎಲ್ಲಿಗೆ ಹೋಗುತ್ತಾರೆ ಎಂಬುದನ್ನೂ ಗಮನಿಸುತ್ತಿದ್ದನೆಂದು ತಿಳಿದುಬಂದಿದೆ.

ಘಟನೆ ನಡೆದ ದಿನ ಮಧ್ಯಾಹ್ನ ಸುಮಾರು 2 ಗಂಟೆಗೆ, ಗಂಗೊಂಡನಹಳ್ಳಿ ಮಸೀದಿ ಸಮೀಪ ಫಿರ್ದೋಸ್ ಮನೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಗ ಆರೋಪಿ ಹಿಂಬಾಲಿಸಿಕೊಂಡು ಬಂದಿದ್ದನು. ಈ ವೇಳೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಕೋಪಗೊಂಡ ಆರೋಪಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮವಾಗಿ ಫಿರ್ದೋಸ್ ಭಾನು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಮೃತ ಫಿರ್ದೋಸ್ ಭಾನು ಮೂವರು ಮಕ್ಕಳ ತಾಯಿ. ಕುಟುಂಬಸ್ಥರ ಹೇಳಿಕೆ ಪ್ರಕಾರ, ಆರೋಪಿ ನಿರಂತರವಾಗಿ ಕಿರುಕುಳ ನೀಡುತ್ತಾ ‘ಮಾತನಾಡು’ ಎಂದು ಒತ್ತಾಯಿಸುತ್ತಿದ್ದನು. ಮಾತಾಡದಿದ್ದರೆ ಮನೆಗೆ ಹೇಳುವುದಾಗಿ ಬೆದರಿಸುತ್ತಿದ್ದನೆಂದು ಮೃತಳ ಅಕ್ಕ ಸಲ್ಮಾ ತಿಳಿಸಿದ್ದಾರೆ. ಈ ಘಟನೆಯು ಏಕಪಕ್ಷೀಯ ಪ್ರೀತಿ ಮತ್ತು ಕಿರುಕುಳ ಹೇಗೆ ಭೀಕರ ಅಂತ್ಯಕ್ಕೇ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ.

ಭ್ರಷ್ಟರ ಬೇಟೆ

Recent Posts

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

48 minutes ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

16 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

20 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago