Latest

ಅಕ್ರಮ ಮದ್ಯ ಮಾರಾಟ – ಒಬ್ಬರು ಬಂಧನ, ಲಕ್ಷಾಂತರ ಮೌಲ್ಯದ ಮದ್ಯ ಜಪ್ತಿ

ಬೆಂಗಳೂರು: ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿ, ಲಕ್ಷಾಂತರ ಮೌಲ್ಯದ ಮದ್ಯ ಮತ್ತು ಎರಡು ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಬಂಧಿತನನ್ನು ಜಗನ್ನಾಥ್ ಕೆ.ವಿ. ಎಂದು ಗುರುತಿಸಲಾಗಿದ್ದು, ಅವನಿಂದ ರೂ. 39,08,907 ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ, ಎರಡು ದ್ವಿಚಕ್ರವಾಹನಗಳೊಂದಿಗೆ ಒಟ್ಟು ವಶಪಡಿಸಿಕೊಳ್ಳಲಾದ ಆಸ್ತಿಯ ಮೌಲ್ಯ ರೂ. 47,70,000 ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ನಡೆಸಿದ ಸ್ಥಳಗಳು:
ಜ.29 ಮತ್ತು ಜ.30 ರಂದು, ಅಧಿಕಾರಿಗಳು ನಗರದಲ್ಲಿ ಹಲವೆಡೆ ದಾಳಿ ನಡೆಸಿದ್ದು, ಅಕ್ರಮ ಮದ್ಯ ಭಂಡಾರ ಪತ್ತೆಯಾಗಿದೆ. ನಾಗರಭಾವಿಯ ಮುನೇಶ್ವರ ದೇವಸ್ಥಾನದ ಸಮೀಪ, ದಾಸರಹಳ್ಳಿಯ ಹೌಸಿಂಗ್ ಬೋರ್ಡ್ ರಸ್ತೆ ಬಳಿಯ ರಹೇಜಾ ಅಪಾರ್ಟ್ಮೆಂಟ್ ಎದುರು, ಕಾಮಾಕ್ಷಿ ಪಾಳ್ಯದ ಶಾರದಾಂಬ ಪಿಜಿ ಕಟ್ಟಡದ ನೆಲಮಹಡಿಯಲ್ಲಿ ಇರುವ ಗೋದಾಮು ಹಾಗೂ ಮೀನಾಕ್ಷಿ ನಗರದ ಮನೆಯೊಂದರಲ್ಲಿ ಭಾರಿ ಪ್ರಮಾಣದ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ.

ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯಚರಣೆ ಯಶಸ್ವಿಯಾಗಿದ್ದು, ಅಕ್ರಮ ಮದ್ಯ ಮಾರಾಟ ಜಾಲವನ್ನೂ ಭೇದಿಸಲು ತನಿಖೆ ಮುಂದುವರೆದಿದೆ.

nazeer ahamad

Recent Posts

ಬಾಗಲಕೋಟೆಯಲ್ಲಿ ರಾತ್ರಿ 11 ಗಂಟೆಯ ಬಳಿಕ ನಿಯಮ ಉಲ್ಲಂಘಿಸಿ ಮರಳು ಸಾಗಾಟ: ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್‌ಗಳ ಸಂಚಾರ, ಅಧಿಕಾರಿಗಳು ಮೌನ!?

ಬಾಗಲಕೋಟೆ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ…

2 days ago

ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮಕ್ಕಳ ಮಾನ್ಯತಾ ಅವಧಿಯಲ್ಲೂ ಬದಲಾವಣೆ, ಹೊಸ ನಿಯಮ ಜಾರಿ

ನವದೆಹಲಿ: ಪಾಸ್‌ಪೋರ್ಟ್ ಅರ್ಜಿ ಶುಲ್ಕವನ್ನು ಹೆಚ್ಚಿಸುವುದರ ಜೊತೆಗೆ ಮಕ್ಕಳ ಪಾಸ್‌ಪೋರ್ಟ್‌ನ ಮಾನ್ಯತಾ ಅವಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು…

2 days ago

ಗೌರಿಬಿದನೂರಿನಲ್ಲಿ ಅಪಘಾತಕ್ಕೆ ನಾಲ್ಕು ವರ್ಷದ ಬಾಲಕಿ ಬಲಿ

ತಾಯಿ-ತಂದೆಯಿಲ್ಲದ ವೇದಳನ್ನು ಕಳೆದುಕೊಂಡ ಅಜ್ಜಿ-ತಾತನ ಆಕ್ರಂದನ ಗೌರಿಬಿದನೂರು: ನಗರದಲ್ಲಿ ಅಪಘಾತಗಳ ಸರಣಿ ಮುಂದುವರಿದಿರುವ ನಡುವೆಯೇ ಮತ್ತೊಂದು ಮನಕಲಕುವ ರಸ್ತೆ ದುರಂತ…

5 days ago

ಸರ್ಕಾರಿ ಶಾಲಾ ಮಕ್ಕಳಿಗೆ ಅನ್ಯಾಯ: ನೂರು ರೂಪಾಯಿಗೂ ಬೆಲೆಬಾಳದ ಶೂಗಳನ್ನು ವಿತರಿಸಿರುವ ಸರ್ಕಾರ, ಒಂದೇ ತಿಂಗಳಿಗೆ ಹಾಳದ ಶೂಗಳು..!

ಕಳೆದ ವರ್ಷದ 265 ರೂ. ಬೆಲೆಯ ಶೂಗಳು ಇನ್ನೂ ಬಾಳಿಕೆ; ಪ್ರಸಕ್ತ ಸಾಲಿನಲ್ಲಿ ವಿತರಿಸಿದ ಶೂಗಳ ಗುಣಮಟ್ಟದ ಬಗ್ಗೆ ಅಸಮಾಧಾನ…

6 days ago

50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ: ಖರಾಬು ಜಮೀನು ದಾಖಲೆ ತಿದ್ದುಪಡಿಗೆ ಬೇಡಿಕೆ..!

ಧಾರವಾಡ: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ…

6 days ago

ಪಂಚಾಯಿತಿ ಕಚೇರಿಯಲ್ಲೇ ಆಸ್ತಿ ವಿವಾದಕ್ಕೆ ರಕ್ತದೊಕುಳಿ: ಅಣ್ಣ–ತಮ್ಮಂದಿರ ಜಗಳದಲ್ಲಿ ತಂದೆ–ಮಗಳು ಕೊಲೆ, ಮತ್ತೊಬ್ಬನಿಗೆ ಗಂಭೀರ ಗಾಯ

ಕಿತ್ತೂರು: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣ–ತಮ್ಮಂದಿರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ತಂದೆ–ಮಗಳನ್ನು ಕೊಚ್ಚಿ…

6 days ago