ಯಾದಗಿರಿ ಜಿಲ್ಲೆಯ ಚಾಮನಹಳ್ಳಿ ತಾಂಡದಲ್ಲಿ ನಡೆದ ಆಟೋ ಚಾಲಕನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಸಾಗರ್ ರಾಠೋಡ್ (35) ಎಂದು ಗುರುತಿಸಲಾಗಿದೆ.
ಬಂಧಿತರಲ್ಲಿ ಮೃತನ ಪತ್ನಿ ಪೂಜಾ, ಆಕೆಯ ಪ್ರಿಯತಮ ರೆಡ್ಡಿ ರಾಠೋಡ್ ಹಾಗೂ ಸುಪಾರಿ ಪಡೆದ ಮಹೇಶ್ ಸೇರಿದ್ದಾರೆ.
ಘಟನೆಯ ಹಿನ್ನೆಲೆ:
ಪೂಜಾ ಮತ್ತು ರೆಡ್ಡಿ ರಾಠೋಡ್ ನಡುವೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿದ್ದು, ಇದಕ್ಕೆ ಪತಿ ಸಾಗರ್ ಅಡ್ಡಿಯಾಗಿದ್ದನು. ಇದರಿಂದ ಕೋಪಗೊಂಡ ಇಬ್ಬರೂ ಸೇರಿ ಸಾಗರ್ ಅನ್ನು ಕೊಲ್ಲಲು ಸಂಚು ರೂಪಿಸಿದ್ದರು.
ಈ ಯೋಜನೆಯಂತೆ, ರೆಡ್ಡಿ ರಾಠೋಡ್ ಮಹೇಶ್‌ಗೆ ₹1 ಲಕ್ಷ ನೀಡಿ ಸುಪಾರಿ ನೀಡಿದ್ದನು. ಮಾರ್ಚ್ 22ರಂದು ಬಾಡಿಗೆಯ ನೆಪದಲ್ಲಿ ಸಾಗರ್ ಅನ್ನು ಕರೆಸಿಕೊಂಡ ಮಹೇಶ್, ಲಿಂಗೇರಿ ಬಳಿ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಅಪಘಾತದ ರೂಪದಲ್ಲಿ ಮುಚ್ಚಿಹಾಕಲು ಯತ್ನ:
ಕೊಲೆ ಬಳಿಕ ಪ್ರಕರಣವನ್ನು ಅಪಘಾತದಂತೆ ತೋರಿಸಲು ಮೃತದೇಹವನ್ನು ಆಟೋದಲ್ಲಿ ಇಟ್ಟು, ಕಾರಿನಿಂದ ಡಿಕ್ಕಿ ಹೊಡೆಸಲಾಗಿತ್ತು.
ಆದರೆ ಪೊಲೀಸರಿಗೆ ಅನುಮಾನ ಬಂದು ಸಾಗರ್‌ನ ಮೊಬೈಲ್ ಕಾಲ್ ದಾಖಲೆಗಳನ್ನು ಪರಿಶೀಲಿಸಿದಾಗ ಮಹೇಶ್ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ವೇಳೆ ಮಹೇಶ್ ಸತ್ಯ ಒಪ್ಪಿಕೊಂಡಿದ್ದು, ಅದರ ಆಧಾರದ ಮೇಲೆ ಪೂಜಾ ಮತ್ತು ರೆಡ್ಡಿ ರಾಠೋಡ್‌ರನ್ನು ಕೂಡ ಬಂಧಿಸಲಾಗಿದೆ.
ಸದ್ಯ ಮೂವರನ್ನೂ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.
ಯಲ್ಲಾಪುರ: 2001ರಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 25 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು…
ಬೆಂಗಳೂರು–ಮೈಸೂರು ಸಂಪರ್ಕವನ್ನು ಸುಧಾರಿಸುವುದು ಹಾಗೂ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ರೂಪುಗೊಂಡಿದ್ದ ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMICP)…
ಬೆಂಗಳೂರು: ಹುಳಿಮಾವು ಸಮೀಪದ ಬಸವನಪುರದಲ್ಲಿ ಲೀಲಾ-ಮಂಜ-ಸಂತು ನಡುವಿನ ತ್ರಿಕೋನ ಪ್ರೇಮಕಥೆ ಮತ್ತೆ ಸದ್ದು ಮಾಡಿದೆ. ಪತ್ನಿ ಲೀಲಾ ದೂರವಾಗಿದ್ದಾಳೆ ಎಂಬ…
ಮೀರತ್: ರಕ್ಷಣೆ ನೀಡಬೇಕಾದ ಪೊಲೀಸನೇ ಯುವತಿಯೊಬ್ಬಳಿಗೆ ವಂಚನೆ ಎಸಗಿದ ಆರೋಪ ಉತ್ತರ ಪ್ರದೇಶದ ಮೀರತ್‌ನಲ್ಲಿ ಕೇಳಿಬಂದಿದೆ. ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ…
ಬೆಂಗಳೂರು: ಪ್ರೀತಿಯ ಹೆಸರಿನಲ್ಲಿ ಯುವತಿಗೆ ನಿರಂತರ ಕಿರುಕುಳ ನೀಡಿ, ಖಾಸಗಿ ಫೋಟೋ-ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪ…
ಸೀತಾಪುರ: ಪೊಲೀಸ್ ಠಾಣೆಗಳಿಗೆ ಪ್ರತಿದಿನ ಹಲವು ರೀತಿಯ ದೂರುಗಳು ಬರುತ್ತವೆ. ಆದರೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮಹಮೂದಾಬಾದ್ ಕೊತ್ವಾಲಿ…