Crime

ಪತ್ನಿ ಹಾಗೂ ತಮ್ಮನಿಂದ ಗಂಡನ ಹತ್ಯೆ!: ಶವವನ್ನು ಮನೆಗೆ ‘ಡೋರ್ ಡೆಲಿವರಿ’ ಮಾಡಿದ ಭೀಕರ ಘಟನೆ

ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಮಂಗಳವಾರ ತೀವ್ರ ಸದ್ದು ಮೂಡಿಸಿರುವ ಗೃಹ ಕಲಹ ಹತ್ಯೆ ಪ್ರಕರಣ ನಡೆದಿದೆ. ಪತ್ನಿ ತನ್ನ ಸಹೋದರನ ಸಹಾಯದಿಂದ ಗಂಡನನ್ನು ಹತ್ಯೆಗೈದು, ಶವವನ್ನು ನೇರವಾಗಿ ಮನೆಯ ಮುಂದೆ ಬಿಟ್ಟಿರುವ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.

ಮೃತ ವ್ಯಕ್ತಿ ನಂದ್ಯಾಲದ ನೂನೆಪಲ್ಲೆ ಗ್ರಾಮದ ನಿವಾಸಿ ರಾಮಣಯ್ಯ (ವಯಸ್ಸು 50). ಈತನ ಪತ್ನಿ ರಮಣಮ್ಮ ಮತ್ತು ಆಕೆಯ ಸಹೋದರ ರಾಮಯ್ಯ ಈ ದಾರುಣ ಕೃತ್ಯದಲ್ಲಿ ಪ್ರಮುಖ ಆರೋಪಿಗಳು. ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಿದ ನಂತರ, ಕೊಲೆ ಮಾಡಿರುವುದನ್ನು ಆರೋಪಿಗಳು ಒಪ್ಪಿ ಕೊಂಡಿದ್ದಾರೆ.

ಹತ್ಯೆಗೆ ಹಿನ್ನಲೆ

ರಾಮಣಯ್ಯ ಹಾಗೂ ಪಿಡುಗುರಲ್ಲ ಗ್ರಾಮದ ರಮಣಮ್ಮ 20 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಜ್ಯೋತಿ, ಚಂದನ ಹಾಗೂ ಸಾಯಿ ಎಂಬ ಮಕ್ಕಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ದಂಪತಿಗಳ ನಡುವೆ ಮನಸ್ತಾಪದಿಂದಾಗಿ, ರಮಣಮ್ಮ ತವರು ಮನೆ ಪಿಡುಗುರಲ್ಲಲ್ಲಿ ವಾಸವಾಗಿದ್ದಳು.

ಈ ನಡುವೆ ಮಂಗಳವಾರ ತನ್ನ ಪತ್ನಿಯನ್ನ ಕರೆತರುವ ಉದ್ದೇಶದಿಂದ ರಾಮಣಯ್ಯ ಪಿಡುಗುರಲ್ಲಕ್ಕೆ ತೆರಳಿದ್ದನು. ಅಲ್ಲಿಗೆ ತಲುಪಿದ ನಂತರ ರಮಣಮ್ಮ ಕುಟುಂಬದೊಂದಿಗೆ ಗಲಾಟೆ ಉಂಟಾಗಿದೆ. ಜಗಳ ತೀವ್ರಗೊಂಡಾಗ ರಮಣಮ್ಮ ಹಾಗೂ ಆಕೆಯ ತಮ್ಮ ರಾಮಯ್ಯ – ಅವರು ರಾಮಣಯ್ಯನ ಕಣ್ಣಿಗೆ ಕಾರದ ಪುಡಿ ಎರಚಿ, ಗಲಾಟೆಯ ನಡುವೆಯೇ ಆತನ ಕತ್ತು ಹಿಸುಕಿದರೆಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ನಡೆದ ಬಳಿಕ, ಮೃತದೇಹವನ್ನು ನಂದ್ಯಾಲದ ನೂನೆಪಲ್ಲೆಯಲ್ಲಿರುವ ರಾಮಣಯ್ಯನ ಮನೆಯ ಮುಂದೆ ಬಿಟ್ಟು ಪರಾರಿಯಾಗಿದ್ದಾರೆ. ಪತ್ನಿಯನ್ನು ಮನೆ ಮುಂದೆ ನೋಡಿದ ಮಕ್ಕಳಿಗೆ ಶಂಕೆ ಮೂಡಿದ್ದು, ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದು, ಕೆಲವೇ ಗಂಟೆಗಳಲ್ಲಿ ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆ ವೇಳೆ, ಕೊಲೆ ಮಾಡುವುದಾಗಿ ಮೊದಲು ನಿಗದಿಪಡಿಸಲಾಗಿತ್ತೆಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

nazeer ahamad

Recent Posts

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

3 hours ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

18 hours ago

ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ 24 ಕಬ್ಬಿಣದ ಗೇಟು ಕಳವು; ₹2.40 ಲಕ್ಷ ನಷ್ಟ

ಶಿರಸಿ: ತಾಲೂಕಿನ ಬನವಾಸಿ ಹೋಬಳಿಯ ಉಂಚಳ್ಳಿ ಗ್ರಾಮದ ಅರ್ಲಹೊಂಡ ಸೇತುವೆ ಕಮ್ ಬಾಂದಾರದಲ್ಲಿ ದಾಸ್ತಾನು ಮಾಡಲಾಗಿದ್ದ ಸಣ್ಣ ನೀರಾವರಿ ಇಲಾಖೆಗೆ…

22 hours ago

ಮದ್ದೂರಿನಲ್ಲಿ ನಿವೃತ್ತ BCM ಹಾಸ್ಟೆಲ್ ವಾರ್ಡನ್ ಮನೆ ಮೇಲೆ ಲೋಕಾಯುಕ್ತ ದಾಳಿ: ಮಿನಿ ಬಾರ್, ಚಿನ್ನಾಭರಣ ಹಾಗೂ ಹಾಸ್ಟೆಲ್ ಸಾಮಗ್ರಿಗಳ ರಾಶಿ ಪತ್ತೆ

ಮಂಡ್ಯ: ಮದ್ದೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (BCM) ನಿವೃತ್ತ ಹಾಸ್ಟೆಲ್ ಸೂಪರಿಂಟೆಂಡೆಂಟ್ ಶಿವರಾಜು ಅವರ ಮನೆ ಮತ್ತು ಫಾರ್ಮ್‌ಹೌಸ್…

2 days ago

ಸಿಂಧನೂರಿನಲ್ಲಿ ಮಗುವಿನ ಎದುರೇ ತಾಯಿ ಬರ್ಬರ ಹತ್ಯೆ ಪ್ರಕರಣ: ಪ್ರಿಯಕರ ಶುಭಮ್ ಬಂಧನ, ಪತಿಯ ವಿಚಾರಣೆ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಹೊರವಲಯದಲ್ಲಿ ಒಂದೂವರೆ ವರ್ಷದ ಕಂದಮ್ಮನ ಎದುರೇ 26 ವರ್ಷದ ಗೃಹಿಣಿ ಸ್ನೇಹಾ ಎಂಬಾಕೆಯ ಬರ್ಬರ…

2 days ago

ಬಿಹಾರದಲ್ಲಿ ಬೆಚ್ಚಿಬೀಳಿಸುವ ಕೃತ್ಯ: ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನ ಬಂಧನ, ಪೋಕ್ಸೊ ಕೇಸ್ ದಾಖಲು

ಬಿಹಾರದ ನವಾಡಾ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕನೊಬ್ಬ 8ನೇ ತರಗತಿಯ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ…

2 days ago