Latest

ಮನೆ ಕಳ್ಳತನ ಪ್ರಕರಣ:ಕಳ್ಳನಿಗೆ ಹೆಡೆಮುರಿ ಕಟ್ಟಿದ ತಾವರಗೇರಾ ಪೊಲೀಸರು.

ತಾವರಗೇರಾ:- ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಕಳ್ಳನನ್ನು ಹಿಡಿಯುವಲ್ಲಿ ತಾವರಗೇರಾ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿತನು 47 ಗ್ರಾಂ ತೂಕದ ಬಂಗಾರದ ಒಡವೆಗಳು ಹಾಗೂ 260 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ತಾವರಗೇರಾ ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿರುವ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳತನ ಪ್ರಕರಣವನ್ನು ಭೇದಿಸಿ,ಕಳ್ಳನನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಆರೋಪಿತನ ಪತ್ತೆಗಾಗಿ ಶ್ರೀ ಡಾ.ರಾಮ್ ಎಲ್ ಅರಸಿದ್ಧಿ,ಐಪಿಎಸ್ ಪೊಲೀಸ್ ಅಧೀಕ್ಷಕರು ಕೊಪ್ಪಳ,ಶ್ರೀ ಆರ್.ಹೇಮಂತಕುಮಾರ,ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೊಪ್ಪಳ,ಶ್ರೀ ಸಿದ್ಧಲಿಂಗಪ್ಪಗೌಡ ಪಾಟೀಲ್ ಪೊಲೀಸ್ ಉಪಾಧಿಕ್ಷಕರು ಗಂಗಾವತಿ ಉಪ ವಿಭಾಗ ಹಾಗೂ ಶ್ರೀ ಯಶವಂತ ಬಿಸನಳ್ಳಿ ಸಿಪಿಐ ಕುಷ್ಟಗಿ ವೃತ್ತ ರವರ ಮಾರ್ಗದರ್ಶನದಲ್ಲಿ ಶ್ರೀ ನಾಗರಾಜ ಕೊಟಗಿ ಪಿಎಸ್ಐ ತಾವರಗೇರಾ ಪೊಲೀಸ್ ಠಾಣೆ,ಶ್ರೀ ಈರಪ್ಪ ಎಎಸ್ಐ,ಶ್ರೀ ಬಸವರಾಜ್ ಹೆಚ್. ಸಿ,ಶ್ರೀ ಮಹಮ್ಮದ್ ರಫಿ ಹೆಚ್. ಸಿ,ಶ್ರೀ ಶರಣಪ್ಪ ಸಿಪಿಸಿ,ಶ್ರೀ ಯಮನಪ್ಪ ಸಿಪಿಸಿ,ಶ್ರೀ ಹನುಮಂತ ಸಿಪಿಸಿ,ಶ್ರೀ ಹನಮಗೌಡ ಸಿಪಿಸಿ,ವಾಹನ ಚಾಲಕರಾದ ಶ್ರೀ ತಿಪ್ಪಣ್ಣ ಎಪಿಸಿ,ತಾಂತ್ರಿಕ ವಿಭಾಗದ ಶ್ರೀ ಪ್ರಸಾದ್ ಎಪಿಸಿ ಹಾಗೂ ಶ್ರೀ ಮಂಜುನಾಥ್ ಎಪಿಸಿ ಇವರನ್ನೊಳಗೊಂಡು ತಂಡವನ್ನು ರಚಿಸಿ ಕಳ್ಳತನ ಮಾಡಿದ ಕಳ್ಳನ ಪತ್ತೆಗೆ ಬಲೆ ಬೀಸಿದ್ದರು.

ಪ್ರಕರಣ ಪತ್ತೆ ಕಾರ್ಯಕ್ಕೆ ನೇಮಕ ಮಾಡಿದ ತನಿಖಾ ತಂಡವು ಆರೋಪಿತನ ಸುಳಿವು ಕುರಿತು ಮಾಹಿತಿ ಸಂಗ್ರಹಿಸಿ ದಿನಾಂಕ 22-03-2025 ರಂದು ಆರೋಪಿ ತಾಹೀರ್ ಅಲಿ ಇರಾನಿ ತಂದೆ ಅಸದ ಅಲಿ ಎಸ್.ಎಂ.ವಯಸ್ಸು 52 ವರ್ಷ,ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು,ಗದಗ ನಗರದ ವಾರ್ಡ್ ನಂ -1 ಎಸ್.ಎಂ.ಕೃಷ್ಣ ನಗರದಲ್ಲಿ ವಾಸವಾಗಿದ್ದು,ಈತನನ್ನು ಪತ್ತೆ ಮಾಡಿ ಸದರಿಯವನಿಗೆ ವಿಚಾರಣೆಗೆ ಒಳಪಡಿಸಿ ಆರೋಪಿತನು ಕಳ್ಳತನ ಮಾಡಿರುವ ತಾವರಗೇರಾ ಪೊಲೀಸ್ ಠಾಣೆಯ ಎರಡು ಹಗಲು ಮನೆಗಳ್ಳತನ ಪತ್ತೆ ಮಾಡಿ ಆರೋಪಿತನ ತಾಬಾದಿಂದ ಒಟ್ಟು 47 ಗ್ರಾಂ ತೂಕದ ಬಂಗಾರದ ಒಡವೆಗಳು ಒಟ್ಟು ಅಂದಾಜು 3,80,000/- ಹಾಗೂ 260 ಗ್ರಾಂ ತೂಕದ ಬೆಳ್ಳಿ ಒಡವೆಗಳು ಅಂದಾಜು 23,400/- ಹೀಗೆ ಒಟ್ಟು 4,03,400/- ರೂಪಾಯಿ ಬೆಲೆ ಬಾಳುವ ಬಂಗಾರ ಹಾಗೂ ಬೆಳ್ಳಿ ಒಡವೆಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಿಸಿರುತ್ತಾರೆ.

ತನಿಖಾ ತಂಡದ ಕಾರ್ಯವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ಜಿಲ್ಲೆ ರವರು ಪ್ರಶಂಶಿಸಿ ಬಹುಮಾನ ಘೋಷಿಸಿರುತ್ತಾರೆ.

ವರದಿ:- ಮಣಿಕಂಠ. ಬಿ.

ಭ್ರಷ್ಟರ ಬೇಟೆ

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

23 hours ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

1 day ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

2 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

2 days ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

3 days ago