Latest

ಮಾಟಮಂತ್ರದ ನೆಪದಲ್ಲಿ ಕಿರುಕುಳ: ಮಹಿಳೆಯ ಬೆತ್ತಲೆ ವೀಡಿಯೋ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಅರ್ಚಕ.!

ಬೆಂಗಳೂರು: ಮಾಟಮಂತ್ರ ಪರಿಹಾರದ ಹೆಸರಿನಲ್ಲಿ ಮಹಿಳೆಗೆ ಬೆತ್ತಲೆ ವೀಡಿಯೋ ಮಾಡಿ ಬ್ಲಾಕ್‌ಮೇಲ್‌ ಮಾಡುತ್ತಿದ್ದ ಅರ್ಚಕನೋರ್ವನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ಕೇರಳ ಮೂಲದ ಅರ್ಚಕ ಅರುಣ್. ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ದೇವಾಲಯದ ಮುಖ್ಯ ಅರ್ಚಕ ಉನ್ನಿ ದಾಮೋದರನ್‌ ಇನ್ನೂ ಪರಾರಿಯಾಗಿದ್ದಾನೆ.

ಮಾಟಮಂತ್ರದ ಶಾಪದಿಂದ ಪರಿಹಾರ ಬೇಕೆಂಬ ಆಶಯದಲ್ಲಿ ಮಹಿಳೆಯೊಬ್ಬರು ಕೇರಳದ ಪೆರಿಂಗೊಟ್ಟುಕರ ದೇವಾಲಯವನ್ನು ಸಂಪರ್ಕಿಸಿದ್ದರು. ಅರ್ಚಕರು 24 ಸಾವಿರ ರೂಪಾಯಿ ವಸೂಲಿಸಿಕೊಂಡು ವಿಶೇಷ ಪೂಜೆ ಮಾಡುವುದಾಗಿ ಭರವಸೆ ನೀಡಿದ್ದರು. ನಂತರ ಅರ್ಚಕ ಅರುಣ್, ಮಹಿಳೆಯ ವಾಟ್ಸಾಪ್ ಸಂಖ್ಯೆಯನ್ನು ಪಡೆದು, ಕೆಲವು ದಿನಗಳಲ್ಲಿ ಪುನಃ ಸಂಪರ್ಕಿಸಲು ಸೂಚಿಸಿದ್ದರು.

ಆದರೆ, ರಾತ್ರಿ ಸಮಯದಲ್ಲಿ ಅರ್ಚಕ ಅರುಣ್ ಮಹಿಳೆಗೆ ವಾಟ್ಸಾಪ್ ವೀಡಿಯೋ ಕರೆ ಮಾಡಿದ್ದು, ತಾನು ಬೆತ್ತಲೆಯಲ್ಲೇ ವಿಡಿಯೋ ಕಾಲ್‌ನಲ್ಲಿ ಕಾಣಿಸಿಕೊಂಡಿದ್ದ. ಬಳಿಕ ಮಹಿಳೆಗೆ “ಮಾಟಮಂತ್ರ ಹೋಗಬೇಕಾದರೆ ನೀವೂ ಬೆತ್ತಲಾಗಬೇಕು” ಎಂದು ಒತ್ತಾಯಿಸಿದ್ದು, ಮಹಿಳೆ ವಿರೋಧ ವ್ಯಕ್ತಪಡಿಸಿದರೂ, ಮಕ್ಕಳಿಗೆ ಹಾನಿ ಮಾಡುವಂತೆ ಶಾಪದ ಪೂಜೆ ಮಾಡುತ್ತೇನೆ ಎಂದು ಬೆದರಿಸಿದ್ದ.

ಭಯದಿಂದ ಮಹಿಳೆ ಬೇಸರದಿಂದ ಅರ್ಚಕನ ಮಾತಿಗೆ ಒಳಪಟ್ಟಿದ್ದು, ವೀಡಿಯೊ ಕರೆ ನಲ್ಲಿ ಅರ್ಚಕನ ಸೂಚನೆಯಂತೆ ನಡೆದಿದ್ದರು. ಆ ವಿಡಿಯೋವನ್ನು ನಂತರ ಅರುಣ್ ಬಳಿಸಿಕೊಂಡು ಮಹಿಳೆಯನ್ನು ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ. ಕೆಲವೇ ದಿನಗಳಲ್ಲಿ ಕೇರಳಕ್ಕೆ ಬರಲು ಪ್ರೇಷರ್ ಹಾಕಿದ ಅರ್ಚಕ, ಮಹಿಳೆ ತೆರಳಿದಾಗ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪವೂ ದೂರುಗಳಲ್ಲಿ ಉಲ್ಲೇಖವಾಗಿದೆ.

ಇಲ್ಲಿಂದ ಮಾನಸಿಕವಾಗಿ ಕುಗ್ಗಿದ ಮಹಿಳೆ ಕೊನೆಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಅರ್ಚಕ ಅರುಣ್‌ನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮುಖ್ಯಅರ್ಚಕ ಉನ್ನಿ ದಾಮೋದರನ್ ಬಂಧನಕ್ಕೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.

nazeer ahamad

Recent Posts

ಸಿದ್ದರಾಮಯ್ಯ ನಮ್ಮ ನಾಯಕ, 2028ಕ್ಕೆ ಡಿಕೆಶಿ ಸಿಎಂ ಆಗಲಿ: ಸತೀಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…

1 day ago

ಅಟ್ಟಿಕಾ ಗೋಲ್ಡ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ: 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಶೋಧ; ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ, ₹7.52 ಲಕ್ಷ ನಗದು ಜಪ್ತಿ

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…

2 days ago

ಇಬ್ಬರು ಮಕ್ಕಳ ತಾಯಿಗೆ ವಂಚನೆ ಆರೋಪ: ಖಾಸಗಿ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್; ₹9 ಲಕ್ಷ ಪಡೆದ ಟ್ಯಾಟೂ ಆರ್ಟಿಸ್ಟ್ ಅರ್ಜುನ್? ಎಂದು ಮಹಿಳೆ ಆರೋಪ.

ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…

2 days ago

ಖಾಲಿ ಸೈಟ್ ಸ್ವಚ್ಛಗೊಳಿಸಲು ಹೋದಾಗ ಬಯಲಾಯ್ತು ಕೊಲೆ ರಹಸ್ಯ: ಪತ್ನಿಯನ್ನು ಕೊಂದು ಶವ ಎಸೆದಿದ್ದ ಪತಿ ಬಂಧನ

ಬೆಂಗಳೂರು: ಜಿಬಿಎ ನೋಟಿಸ್‌ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…

2 days ago

₹30 ಸಾವಿರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಂದಾಯ ನಿರೀಕ್ಷಕ

ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…

2 days ago

ಬರದ ಸಂಕಷ್ಟಕ್ಕೆ ರೈತರಿಗೆ ₹2,500 ನೆರವು?; ಕೃಷಿ ಪಂಪ್‌ಸೆಟ್‌ ವಿದ್ಯುತ್‌ ಪೂರೈಕೆಯಲ್ಲೂ ಕಡಿತ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…

3 days ago