Categories: CrimeLatest

ಊಟ ಮಾಡುತ್ತಿದ್ದವನ ಬೆನ್ನ ಹಿಂದೆ ಬಂದು ಮಚ್ಚಿನೇಟು; 5-6 ಏಟಿಗೆ ಊಟದ ತಟ್ಟೆಯಲ್ಲೇ ಹೆಣವಾದ ಹನುಮೇಶ್!

ರಾಯಚೂರು: ಅನೈತಿಕ ಸಂಬಂಧದ ಅನುಮಾನಕ್ಕೆ ಯುವಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನಡೆದಿದೆ. ಊಟ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಆರೋಪಿ ಮಚ್ಚಿನಿಂದ ಏಕಾಏಕಿ ದಾಳಿ ನಡೆಸಿದ್ದು, ಐದಾರು ಏಟಿಗೆ ಹನುಮೇಶ್ (32) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಹನುಮೇಶ್ ಅವರ ಕುಟುಂಬಸ್ಥರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಹನುಮೇಶ್ ಒಬ್ಬರೇ ಊಟ ಮಾಡುತ್ತಿದ್ದರು. ಇದೇ ವೇಳೆ ಆರೋಪಿ ಶಂಕರ (23) ಮನೆಗೆ ಪ್ರವೇಶಿಸಿದ್ದಾನೆ. ಯಾವುದೇ ಮುನ್ಸೂಚನೆ ನೀಡದೆ ಹಿಂಬದಿಯಿಂದ ಮಚ್ಚಿನಿಂದ ಹನುಮೇಶ್ ಮೇಲೆ ದಾಳಿ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡ ಹನುಮೇಶ್ ಊಟದ ತಟ್ಟೆಯಲ್ಲೇ ಕುಸಿದು ಮೃತಪಟ್ಟಿದ್ದಾರೆ.

ಅನೈತಿಕ ಸಂಬಂಧದ ಅನುಮಾನವೇ ಕೊಲೆಗೆ ಕಾರಣ?
ಆರೋಪಿಯ ಸಹೋದರಿ ಜೊತೆ ಹನುಮೇಶ್ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಶಂಕರನಲ್ಲಿತ್ತು ಎನ್ನಲಾಗಿದೆ. ಇದೇ ಅನುಮಾನದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆಗೂ ಮುನ್ನ ಆರೋಪಿ ಶಂಕರ ಮಚ್ಚು ಹಿಡಿದುಕೊಂಡಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಎನ್ನಲಾಗಿದ್ದು, ಈ ಅಂಶವೂ ಪ್ರಕರಣದಲ್ಲಿ ಕುತೂಹಲ ಮೂಡಿಸಿದೆ.

ಹತ್ಯೆ ಮಾಡಿದ ಬಳಿಕ ಆರೋಪಿ ಶಂಕರ ಖುದ್ದಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸದ್ಯ ಮಾನ್ವಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಯ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆಯ ಬಗ್ಗೆ ತನಿಖೆ ಮುಂದುವರಿದಿದೆ.

ಇತ್ತ ಹನುಮೇಶ್ ಕುಟುಂಬಸ್ಥರು ಕಣ್ಣೀರಾಗಿದ್ದು, “ನನ್ನ ಮಗ ಅಂಥವನಲ್ಲ. ತಪ್ಪು ಮಾಡಿದ್ದರೆ ಕಾನೂನು ಇತ್ತು, ಹೀಗೆ ಕೊಲೆ ಮಾಡುವ ಅಗತ್ಯವೇನಿತ್ತು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭ್ರಷ್ಟರ ಬೇಟೆ

Recent Posts

ಇನ್‌ಸ್ಟಾಗ್ರಾಂ ಪರಿಚಯ, ಪ್ರೀತಿಯ ನಾಟಕ; 16ರ ಬಾಲಕಿಗೆ ಲೈಂಗಿಕ ದೌರ್ಜನ್ಯ: 8 ಮಂದಿ ಬಂಧನ

ಹೈದರಾಬಾದ್: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ, ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲವು ಬಾರಿ…

7 hours ago

ಮೊಬೈಲ್ EMI ಕಟ್ಟಲಿಲ್ಲವೆಂದು ಅಪಹರಣ; ಆಸ್ಪತ್ರೆಗೆ ಕರೆದೊಯ್ದು ರಕ್ತ ತೆಗೆಸಿ, 4 ದಿನ ಕೂಡಿ ಹಾಕಿ ಹಲ್ಲೆ

ಲಕ್ನೋ: ಸಮಯಕ್ಕೆ ಸರಿಯಾಗಿ EMI ಪಾವತಿಸದಿದ್ದರೆ ಸಾಮಾನ್ಯವಾಗಿ ಸಾಲ ನೀಡಿದ ಸಂಸ್ಥೆಗಳು ವಸ್ತುವನ್ನು ವಾಪಸ್ ಪಡೆಯುತ್ತವೆ ಅಥವಾ ಬಾಕಿ ಹಣ…

7 hours ago

ಮಾವನ ರೂಲ್ಸ್‌ಗೆ ಬೇಸತ್ತು ಸೊಸೆಯಿಂದಲೇ ಕೊಲೆಗೆ ಸುಪಾರಿ; 26 ಬಾರಿ ಇರಿದು ಉದ್ಯಮಿ ಹತ್ಯೆ!

ಕಾನ್ಪುರ: ಮನೆಯಲ್ಲಿ ಹೆಜ್ಜೆ ಹೆಜ್ಜೆಗೂ ನಿಗಾ, ಪಾರ್ಟಿ ಮಾಡಲು ನಿರ್ಬಂಧ, ಖರ್ಚು ಮಾಡಲು ಹಣದ ಮೇಲೂ ನಿಯಂತ್ರಣ… ಉದ್ಯಮಿ ಮಾವನ…

1 day ago

ಪತ್ನಿಯ ಶಿರಚ್ಛೇದನ ಪ್ರಕರಣ: ಪೊಲೀಸರ ವಾಹನದಿಂದ ಜಿಗಿದು ಆರೋಪಿ ಸಾವು

ಗುವಾಹಟಿ: ಸ್ವಂತ ಪತ್ನಿಯನ್ನು ಶಿರಚ್ಛೇದನ ಮಾಡಿ, ಕತ್ತರಿಸಿದ ತಲೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದ ಭೀಕರ ಪ್ರಕರಣದ ಆರೋಪಿ ರಾಮಾನುಜ್ ಗೋಸ್ವಾಮಿ ಪೊಲೀಸರ…

1 day ago

ಮಗನಿಗೆ ‘ಎರೆಯ’ ಎಂದು ಹೆಸರಿಟ್ಟ ಡಾಲಿ ಧನಂಜಯ–ಧನ್ಯತಾ ದಂಪತಿ: ಹಬ್ಬದ ದಿನವೇ ಮಗನ ಫೋಟೋ ರಿವೀಲ್!

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಹಾಗೂ ಧನ್ಯತಾ ದಂಪತಿ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ತಮ್ಮ ಪುತ್ರನನ್ನು ಅಭಿಮಾನಿಗಳಿಗೆ…

2 days ago

ಪ್ರೀತಿಸಿ ಮದುವೆಯಾದ ಯುವತಿ ದೂರವಾದ ನೋವು: 24ರ ಹರೆಯದ ಯುವಕ ಆತ್ಮಹತ್ಯೆಗೆ ಶರಣು

ಹಾವೇರಿ: ಪ್ರೀತಿಸಿ ಮದುವೆಯಾದ ಯುವತಿ ದೂರವಾದ ನೋವಿನಿಂದ ಮನನೊಂದಿದ್ದ 24 ವರ್ಷದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಹಾವೇರಿ…

2 days ago