ಸರ್ಕಾರಿ ಉದ್ಯೋಗ ಪಡೆಯುವುದು ಬಹುಮಾನದಂತಹ ಕನಸು. ಹಲವರು ವರ್ಷಗಟ್ಟಲೆ ಪರೀಕ್ಷೆಗಳಿಗೆ ತಯಾರಿ ಮಾಡುತ್ತಾ ತಮ್ಮ ಕನಸನ್ನು ನನಸುಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ವಿಶೇಷವೆಂದರೆ, ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗದೆ ಉಳಿದವರು – ಮುಖ್ಯವಾಗಿ ಎಸ್‌ಎಸ್‌ಎಲ್ಸಿ ಪಾಸಾದವರು – ಈಗ ಭಾರತೀಯ ರೈಲ್ವೆ ಇಲಾಖೆಯಲ್ಲೊಂದು ಉತ್ತಮ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.
ಈ ಬಾರಿ ಎಷ್ಟು ಹುದ್ದೆಗಳು?
ಭಾರತೀಯ ರೈಲ್ವೆ ಇಲಾಖೆ ಒಟ್ಟು 6,238 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಟೆಕ್ನಿಷಿಯನ್ ಗ್ರೇಡ್-1 ಹಾಗೂ ಟೆಕ್ನಿಷಿಯನ್ ಗ್ರೇಡ್-3 ವಿಭಾಗಗಳಡಿಯಲ್ಲಿ ಬಂದುಬರುತ್ತವೆ.
ಹುದ್ದೆಗಳ ವಿವರ ಮತ್ತು ಅರ್ಹತೆ:
🔹 ಟೆಕ್ನಿಷಿಯನ್ ಗ್ರೇಡ್–1
ಒಟ್ಟು ಹುದ್ದೆಗಳು: 183
ಅರ್ಹತೆ: B.Sc., B.Tech, ಡಿಪ್ಲೊಮಾ ಅಥವಾ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ಪೂರೈಸಿರಬೇಕು
ವೇತನ: ₹29,200/-
ವಯೋಮಿತಿ: 18 ರಿಂದ 33 ವರ್ಷ
🔹 ಟೆಕ್ನಿಷಿಯನ್ ಗ್ರೇಡ್–3
ಒಟ್ಟು ಹುದ್ದೆಗಳು: 6,055
ಅರ್ಹತೆ: ಕನಿಷ್ಟ ಎಸ್‌ಎಸ್‌ಎಲ್ಸಿ ಪಾಸಾಗಿದ್ದು, ಸಂಬಂಧಿತ ಕ್ಷೇತ್ರದಲ್ಲಿ ಐಟಿಐ ಮಾಡಿರಬೇಕು
ವೇತನ: ₹19,900/-
ವಯೋಮಿತಿ: 18 ರಿಂದ 30 ವರ್ಷ
ಅರ್ಜಿ ಸಲ್ಲಿಕೆಗೆ ಪ್ರಮುಖ ಮಾಹಿತಿ:
ಅರ್ಜಿ ಸಲ್ಲಿಕೆಗೆ ಆನ್‌ಲೈನ್ ವಿಧಾನವನ್ನು ಅನುಸರಿಸಬೇಕು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಅಧಿಕೃತ ಲಿಂಕ್ – ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ
ಅಧಿಕೃತ ಅಧಿಸೂಚನೆಯು ಹೊರಬೀಳುತ್ತಿದ್ದಂತೆ, ಅರ್ಹ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿ ಓದಿ ಅರ್ಜಿ ಸಲ್ಲಿಸಬೇಕು.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲ ದಿನಗಳಿಂದ ಸದ್ದು ಮಾಡುತ್ತಿದ್ದ ವದಂತಿ ಹಾಗೂ ಊಹಾಪೋಹಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ…
ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಟ್ಟಿಕಾ ಗೋಲ್ಡ್ ಕಂಪನಿಗೆ ಸೇರಿದ ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ…
ಬೆಂಗಳೂರು: ಮದುವೆಯ ಭರವಸೆ ನೀಡಿ ವಂಚನೆ, ಖಾಸಗಿ ಫೋಟೋಗಳನ್ನು ಮುಂದಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ₹9 ಲಕ್ಷ ಹಣ ಪಡೆದ ಆರೋಪದ…
ಬೆಂಗಳೂರು: ಜಿಬಿಎ ನೋಟಿಸ್ ಬೆನ್ನಲ್ಲೇ ಬಯಲಾಯ್ತು ಕೊಲೆ ರಹಸ್ಯ; ಪತ್ನಿಯನ್ನೇ ಕೊಂದು ಶವ ಎಸೆದಿದ್ದ ಪತಿ ಬಂಧನ ಖಾಲಿ ಸೈಟ್‌ಗಳಲ್ಲಿ…
ಮಧುಗಿರಿ: ಪೌತಿ ಖಾತೆ ಮಾಡಿಕೊಡಲು ₹1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, ಎರಡನೇ ಕಂತಿನ ₹30 ಸಾವಿರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತಾತ್ಕಾಲಿಕ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರ…