Categories: CrimeLatest

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಪಾತ ಮಾಡಿಸಿದ ಆರೋಪ; ವೈದ್ಯ, ನರ್ಸ್ ಸೇರಿ 7 ಮಂದಿ ಬಂಧನ

ಗದಗ: ಎಸ್.ಎಂ. ಕೃಷ್ಣಾ ನಗರದ 26 ವರ್ಷದ ಯುವತಿ ಮೇಲೆ ಪ್ರತ್ಯೇಕವಾಗಿ ಲೈಂಗಿಕ ದೌರ್ಜನ್ಯ ಎಸಗಿ, ಆಕೆ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿದ ಆರೋಪದ ಪ್ರಕರಣದಲ್ಲಿ ಆರ್‌ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಟಗೇರಿ ನಿವಾಸಿಗಳಾದ ಸಿಕಂದರ್ ಗುಲಾಬಸಾಬ ಬೇಪಾರಿ, ಶಬೀರ ಅಹ್ಮದ್ ಅಲಿಯಾಸ್ ಜೂನಸಾಬ ಮಹ್ಮದ್ ರಫೀಕ್ ಲಂಗೋಟಿ, ಪ್ರದೀಪ್ ಸಾಗರ ನವಲೇಕರ, ಭರತ್ ಮಹಾದೇವಪ್ಪ ಕೊರವರ, ಸಂದೀಪ್ ಸಾಗರ ನವಲೇಕರ, ಬೆಳ್ಳಟ್ಟಿ ಗ್ರಾಮದ ಆರ್‌ಎಂಪಿ ವೈದ್ಯ ನಾಗರಾಜ್ ಚಿದಾನಂದ ಕಮತರ ಹಾಗೂ ಶಿಗ್ಲಿಯ ಸ್ಟಾಫ್ ನರ್ಸ್ ರೇಖಾ ಫಕೀರಪ್ಪ ಶಿರಹಟ್ಟಿ ಎಂದು ಗುರುತಿಸಲಾಗಿದೆ.

ಸಂತ್ರಸ್ತೆ ಜುಲೈ 26ರಂದು ಗದಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಅತ್ಯಾಚಾರ ಹಾಗೂ ಗರ್ಭಪಾತ ಮಾಡಿಸಿದ ಕುರಿತು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಂತೆ ಸಿಕಂದರ್, ಶಬೀರ ಅಹ್ಮದ್, ಪ್ರದೀಪ್ ಹಾಗೂ ಭರತ್ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಯುವತಿ ಗರ್ಭಿಣಿಯಾದ ಬಳಿಕ ಆರೋಪಿ ಸಂದೀಪ್ ನವಲೇಕರ, ಆರ್‌ಎಂಪಿ ವೈದ್ಯ ನಾಗರಾಜ್ ಕಮತರ ಹಾಗೂ ಸ್ಟಾಫ್ ನರ್ಸ್ ರೇಖಾ ಶಿರಹಟ್ಟಿ ಅವರ ಸಹಕಾರದೊಂದಿಗೆ ಗರ್ಭಪಾತ ಮಾಡಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರು ವಿಶೇಷ ತನಿಖಾ ತಂಡ ರಚಿಸಿದ್ದರು. ಡಿವೈಎಸ್ಪಿ ಮುರ್ತುಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಲ್.ಕೆ. ಜೂಲಕಟ್ಟಿ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು.

ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ನಡೆಸಿದ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಭ್ರಷ್ಟರ ಬೇಟೆ

Recent Posts

ದೇವಾಲಯದಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯ ವರ್ತನೆ: ಪೂಜಾರಿ ವಿರುದ್ಧ ಪೋಕ್ಸೋ ಪ್ರಕರಣ

ಹೈದರಾಬಾದ್: ದೇವಾಲಯಕ್ಕೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕೃತ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಪೂಜಾರಿಯೊಬ್ಬನ ವಿರುದ್ಧ ಪೋಕ್ಸೋ…

20 hours ago

ಮೊಹಮ್ಮದ್ ನಲಪಾಡ್ ದಾಂಪತ್ಯ ಜೀವನಕ್ಕೆ ಎರಡನೇ ಹೆಜ್ಜೆ: ಮಲಿಹಾ ಫಾತಿಮಾ ಜೊತೆ ಅದ್ಧೂರಿ ವಿವಾಹ, ಡಿ.ಕೆ. ಶಿವಕುಮಾರ್, ಸುದೀಪ್, ಯಶ್ ಭಾಗಿ

ಮಡಿಕೇರಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್…

20 hours ago

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣ: ಮಾಜಿ ಎಇಇಗೆ 4 ವರ್ಷ ಜೈಲು, ₹50 ಸಾವಿರ ದಂಡ

ಕಲಬುರಗಿ: ಆದಾಯದ ಮೂಲಕ್ಕೆ ಹೋಲಿಸಿದರೆ ಅಧಿಕ ಪ್ರಮಾಣದ ಆಸ್ತಿ ಹೊಂದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಸಹಾಯಕ…

20 hours ago

ಪ್ರೀತಿಸಿ ಮದುವೆಯಾದ ದಂಪತಿ ದುರಂತ ಅಂತ್ಯ: ಪತ್ನಿಯನ್ನು ಕೊಂದು ಸಿವಿಲ್ ಇಂಜಿನಿಯರ್ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಿ ಮನೆಯವರ ಒಪ್ಪಿಗೆಯೊಂದಿಗೆ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ರಾಜಗೋಪಾಲನಗರ ಪೊಲೀಸ್…

2 days ago

ಪತಿ ಕೆಲಸಕ್ಕೆ ಹೋದ ಬಳಿಕ ಮಧ್ಯರಾತ್ರಿ ಆಹಾರ ಮಳಿಗೆಯಲ್ಲಿ ಪ್ರಿಯಕರನೊಂದಿಗೆ ಪತ್ನಿ: ನೇರವಾಗಿ ಸಿಕ್ಕಿಬಿದ ನಂತರ ಹೈಡ್ರಾಮ..!

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ದಾಂಪತ್ಯ ಸಂಬಂಧಕ್ಕೆ ಸಂಬಂಧಿಸಿದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪತಿ ರಾತ್ರಿ ಪಾಳಿಯ…

2 days ago

ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛತೆ: ಹೊಸೂರು ಕೆಪಿಎಸ್ ಶಾಲೆಯ ವಿಡಿಯೋ ವೈರಲ್; ಪೋಷಕರ ಆಕ್ರೋಶ

ಗೌರಿಬಿದನೂರು: ತಾಲ್ಲೂಕಿನ ಹೊಸೂರು ಗ್ರಾಮದ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛಗೊಳಿಸುತ್ತಿರುವ ಆರೋಪ ಕೇಳಿಬಂದಿದ್ದು, ಈ…

3 days ago