ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ 3 ರೂ ಹೆಚ್ಚಳವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸ್ಪಷ್ಟನೆ ನೀಡಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ನಂದಿನಿ ಹಾಲಿನ ದರ 3 ರೂ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ಬೆಲೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆಗಸ್ಟ್ 1 ರಿಂದ ನೂತನ ದರ ಜಾರಿಗೆ ಬರಲಿದೆ ಎಂದರು. ರೈತರು ಪಶುಸಂಗೋಪನೆ ಮಾಡಲು ಬಹಳ ತೊಂದರೆಯಾಗುತ್ತಿದೆ, ಸಾಕಷ್ಟು ರೈತರು ಹಸು ಮಾರಾಟಕ್ಕೆ ಮುಂದಾಗಿದ್ದಾರೆ , ಆದ್ದರಿಂದ ನಂದಿನಿ ಹಾಲಿಗೆ ಹೆಚ್ಚುವರಿಯಾಗಿ ಬರುವ ಹಣವನ್ನು ನೇರವಾಗಿ ರೈತರಿಗೆ ನೀಡಲಾಗುತ್ತದೆ ಎಂದರು.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ ಹೆಚ್ಚಳ ಜಾರಿಗೆ ಬರಲಿದೆ. ಯಾವುದಕ್ಕೆ ಎಷ್ಟು ದರ ಎಂಬ ಮಾಹಿತಿಯನ್ನು ನೋಡುವುದಾದರೆ, ಹೋಮೋಜಿನೈಸ್ಟ್ ಟೋನ್ಡ್ ಹಾಲು 40 ರೂ ದಿಂದ 43 ರೂ. ಶುಭಂ ಹಾಲು 45 ರೂ ದಿಂದ 48 ರೂ. ಮೊಸರು- 47- 50 ರೂ. ಟೋನ್ಡ್ ಹಾಲು- 39 ರೂದಿಂದ 42 ರೂ. ಶುಭಂ ಹಾಲು (ಹಸಿರು)- 45 ರೂದಿಂದ 48 ರೂ. ಸ್ಪೆಷಲ್ ಹಾಲು (ಆರೆಂಜ್) 45 ರೂ ದಿಂದ 48 ರೂ. ಸಮೃದ್ದಿ ಹಾಲು 50 ರೂ ದಿಂದ 53 ರೂ. ಸಂತೃಪ್ತಿ ಹಾಲು 52 ರೂ ದಿಂದ 55 ರೂ. ಆಗಿದೆ.
ಪ್ರತಿ ಲೀಟರ್ ಹಾಲಿನ ದರ 5 ರೂಪಾಯಿ ಹೆಚ್ಚಳ ಮಾಡುವಂತೆ ಕೆಎಂಎಫ್ ಪ್ರಸ್ತಾವನೆ ಸಲ್ಲಿಸಿದ್ದು, ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಿ 5 ರೂಪಾಯಿ ಬದಲಿಗೆ 3 ರೂ. ಹೆಚ್ಚಳಕ್ಕೆ ಸರ್ಕಾರ ಸಮ್ಮತಿ ನೀಡಿದೆ. ಹಾಲು ಒಕ್ಕೂಟದ ನಷ್ಟ ಸರಿದೂಗಿಸಲು ದರ ಹೆಚ್ಚಳಕ್ಕೆ ಸಮ್ಮತಿ ನೀಡಲಾಗಿದೆ ಎಂದು ಹೇಳಲಾಗಿದೆ. ಸಭೆಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶು ಸಂಗೋಪನಾ ಇಲಾಖೆ ಸಚಿವ ಕೆ. ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್, ಕೆಎಂಎಫ್ ವ್ಯವಸ್ಥಾಪಕ ಜಗದೀಶ್, ನಿರ್ದೇಶಕರಾದ ಹೆಚ್.ಡಿ. ರೇವಣ್ಣ, ಮಾಲೂರು ಶಾಸಕ ನಂಜೇಗೌಡ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಪಶು ಸಂಗೋಪನ ಇಲಾಖೆ ಕಾರ್ಯದರ್ಶಿ ಸಲ್ಮಾ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಮೊದಲಾದವರು ಭಾಗವಹಿಸಿದ್ದರು.

1 thought on “ಆಗಸ್ಟ್ 1 ರಿಂದ ನಂದಿನಿ ಹಾಲಿನ ದರ 3 ರೂ. ಹೆಚ್ಚಳ : ‘ಕೆಎಂಎಫ್’ ಅಧ್ಯಕ್ಷ ಭೀಮಾನಾಯ್ಕ್ ಸ್ಪಷ್ಟನೆ

Comments are closed.

Related News

error: Content is protected !!