Latest

ಇನ್‌ಸ್ಟಾಗ್ರಾಮ್‌ ಆರ್ಡರ್‌ ನೆಪದಲ್ಲಿ ವಂಚನೆ: ಯುವತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ

ಉಡುಪಿ: ಇನ್‌ಸ್ಟಾಗ್ರಾಮ್ ಮೂಲಕ ಬಟ್ಟೆ ಆರ್ಡರ್ ಮಾಡುವ ನೆಪದಲ್ಲಿ ಯುವತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಸ್ಕಾನ್ ಅಫ್ಸಾರಿ (24) ಎಂಬವರು ಮಾರ್ಚ್ 18 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಬಟ್ಟೆಗಳಿಗೆ ಸಂಬಂಧಿಸಿದಂತೆ ಒಂದು ಖಾತೆಯಲ್ಲಿ ಆರ್ಡರ್ ಮಾಡಿದ್ದರು. ಹೀಗೆ ಆರ್ಡರ್ ನೀಡಿದ ಕೆಲವೇ ದಿನಗಳ ನಂತರ, ಮಾರ್ಚ್ 25ರಂದು ‘ರಾಹುಲ್ ಶರ್ಮ’ ಎಂಬ ಹೆಸರಿನಿಂದ ವಾಟ್ಸಾಪ್ ಮೂಲಕ ಸಂಪರ್ಕಿಸಿ ಮಸ್ಕಾನ್‌ರೊಂದಿಗೆ ವ್ಯವಹಾರ ಆರಂಭಿಸಲಾಗಿದೆ.

ವಿಶ್ವಾಸ ಮೂಡಿಸಿದ ಆರೋಪಿಗಳು ಹಂತ ಹಂತವಾಗಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ಹೇಳಿದ್ದು, ಮಸ್ಕಾನ್ ಕೂಡ ಅದಕ್ಕೆ ಒಪ್ಪಿಕೊಂಡು ಮೊತ್ತದಷ್ಟು ಹಣ ಪಾವತಿಸಿದ್ದಾರೆ. ಒಟ್ಟು 1,06,273 ರೂಪಾಯಿ ಹಣವನ್ನು ಮಸ್ಕಾನ್ ಆರೋಪಿಗೆ ವರ್ಗಾಯಿಸಿದ್ದಾರೆ.

ಆದರೆ ಬಟ್ಟೆ ರವಾನೆಯಾಗದಿರುವುದರ ಜೊತೆಗೆ, ಎರಡು ದಿನಗಳ ನಂತರ ಮಸ್ಕಾನ್ ಆರೋಪಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ತಮ್ಮನ್ನು ವಂಚನೆ ಮಾಡಲಾಗಿದೆ ಎಂದು ತಿಳಿದ ಮಸ್ಕಾನ್, ಕೋಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆದಿದೆ. ಜನರು ಇಂತಹ ಆನ್‌ಲೈನ್ ವಂಚನೆಗಳಿಂದ ಎಚ್ಚರದಿಂದಿರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

nazeer ahamad

Recent Posts

ಜೈಲಿನಲ್ಲೇ ಮಹಿಳಾ ಕೈದಿ ಗರ್ಭಿಣಿ! ಹೋಟ್‌ವಾರ್ ಜೈಲಿನಲ್ಲಿ ಭಾರೀ ಸಂಚಲನ; ಭದ್ರತಾ ಲೋಪದ ಬಗ್ಗೆ ತನಿಖೆ

ರಾಂಚಿ: ಜೈಲಿನೊಳಗೆ ಮಹಿಳಾ ಕೈದಿಯೊಬ್ಬರು ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಜಾರ್ಖಂಡ್‌ನ ಹೋಟ್‌ವಾರ್ ಕೇಂದ್ರ ಕಾರಾಗೃಹದಲ್ಲಿ ಬೆಳಕಿಗೆ ಬಂದಿದೆ. ಶಿಕ್ಷೆ ಅನುಭವಿಸುತ್ತಿದ್ದ…

6 hours ago

ಪ್ರೀತಿಯ ಬಲೆಗೆ ಬಿದ್ದ ಹೋಟೆಲ್ ಉದ್ಯಮಿ! ಮದುವೆಯ ಆಮಿಷವೊಡ್ಡಿ ₹5 ಕೋಟಿ ಲೂಟಿ ಆರೋಪ; ಮಹಿಳಾ ಡಿಎಸ್‌ಪಿ ಅಮಾನತು!

ಛತ್ತೀಸ್‌ಗಢ: ಮೋಹಕ ರೂಪದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಪ್ರೀತಿಯ ಬಲೆಗೆ ಬಿದ್ದ ಹೋಟೆಲ್ ಉದ್ಯಮಿಯೊಬ್ಬರು ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಆರೋಪ…

6 hours ago

ಮೂವರು ಮಕ್ಕಳ ತಾಯಿಯ ಕೊಲೆ! ಹಣಕಾಸಿನ ವಿಚಾರಕ್ಕೆ ಪ್ರಿಯಕರನಿಂದಲೇ ಭೀಕರ ಕೃತ್ಯ; 28 ವರ್ಷದ ಆರೋಪಿ ಅರೆಸ್ಟ್!

ತಮಿಳುನಾಡು: ಮೂವರು ಮಕ್ಕಳ ತಾಯಿಯಾಗಿದ್ದ 24 ವರ್ಷದ ಮಹಿಳೆಯೊಬ್ಬರನ್ನು ಪ್ರಿಯಕರನೇ ಹ*ತ್ಯೆ ಮಾಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ…

6 hours ago

ಚಕ್ರದ ನಟ್ ಕಳಚಿ ಹೊಲಕ್ಕೆ ನುಗ್ಗಿದ ಸಾರಿಗೆ ಬಸ್: 40ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು!

ಕೊಪ್ಪಳ: ಸಾರಿಗೆ ಬಸ್‌ನ ಮುಂಭಾಗದ ಚಕ್ರದ ಕಮಾನ್ ಸ್ಪ್ರಿಂಗ್ ಪಟ್ಟಿಯ ನಟ್ ಕಳಚಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್…

6 hours ago

ಸಾಗುವಾನಿ ಮರದ ಅಕ್ರಮ ಸಾಗಾಟ ಪತ್ತೆ: ಮೂರು ಬೊಲೆರೋ ವಾಹನಗಳ ಸಹಿತ ಲಕ್ಷಾಂತರ ಮೌಲ್ಯದ ಮರ ಜಪ್ತಿ

ಲಿಂಗಸುಗೂರು: ಅರಣ್ಯ ಸಂಪತ್ತಾದ ಸಾಗುವಾನಿ ಮರವನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಮೂರು ಬೊಲೆರೋ ಗೂಡ್ಸ್ ವಾಹನಗಳ…

1 day ago

12 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ನಾಳೆ ಮುಂಡಗೋಡ ಬಂದ್‌ಗೆ ಕರೆ!

ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ಮುಂಡಗೋಡ: 12 ವರ್ಷದ ಬಾಲಕಿಯ ಮೇಲೆ ನಡೆದಿರುವ ಅಮಾನವೀಯ…

2 days ago