Crime

ಲೈಂಗಿಕ ಕಿರುಕುಳ, ಜಾತಿ ನಿಂದನೆ ಆರೋಪ: ಸಿರಿಗೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷನ ಬಂಧನ

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಜಿ. ದೇವರಾಜ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆ ಆರೋಪ ಕೇಳಿಬಂದಿದ್ದು, ಭರಮಸಾಗರ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನ್ಯಾಯಾಂಗ ಬಂಧನಕ್ಕೆ ಆದೇಶ
ಶನಿವಾರ ತಡರಾತ್ರಿ ದೇವರಾಜ್‌ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತ್ತಾದರೂ, ಚಿತ್ರದುರ್ಗದ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಂಗಾಧರ ಬಡಿಗೇರ ಅವರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿದರು.

ಆರೋಪಗಳ ವಿವರ
ಸಂತ್ರಸ್ತ ಮಹಿಳೆಯರ ದೂರಿನ ಪ್ರಕಾರ, ದೇವರಾಜ್‌ ಅವರು ಪದೇಪದೇ ಲೆಕ್ಕಪತ್ರ ನೀಡುವಂತೆ ಒತ್ತಾಯಿಸುತ್ತಾ, ಮೈಮುಟ್ಟಲು ಹಾಗೂ ಪಕ್ಕದಲ್ಲಿ ಕುಳಿತುಕೊಳ್ಳಲು ಯತ್ನಿಸುತ್ತಿದ್ದರು. ಅಲ್ಲದೆ, ಸಾರ್ವಜನಿಕ ಸಮ್ಮುಖದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿದೆ.

ಇದೇ ವೇಳೆ, ದ್ವಿತೀಯ ದರ್ಜೆ ಸಹಾಯಕ (SDA) ಜಯರಾಮ ಅವರ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪವೂ ದೇವರಾಜ್‌ ಮೇಲೆ ಕೇಳಿಬಂದಿದ್ದು, ಈ ಸಂಬಂಧ ಭರಮಸಾಗರ ವೃತ್ತ ನಿರೀಕ್ಷಕ ಪಿ. ಪ್ರಸಾದ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ನಡೆಯುತ್ತಿದೆ.

ಭ್ರಷ್ಟರ ಬೇಟೆ

Recent Posts

ಗಂಡನ ಬೆಂಬಲದಿಂದ ಸರ್ಕಾರಿ ಉದ್ಯೋಗ ಪಡೆದ ಪತ್ನಿ: ದೂರವಾಗಿದ್ದರಿಂದ ಮನನೊಂದ ಪತಿ ಆತ್ಮಹತ್ಯೆ

ಶಿಕ್ಷಣಕ್ಕೆ ಬೆಂಬಲ ನೀಡಿ ಪತ್ನಿಗೆ ಸರ್ಕಾರಿ ಉದ್ಯೋಗ ಸಿಗುವಂತೆ ಮಾಡಿದ ಗಂಡನೊಬ್ಬ, ನಂತರ ಪತ್ನಿಯ ನಿರ್ಲಕ್ಷ್ಯ ಮತ್ತು ಕಿರುಕುಳದಿಂದ ಮನನೊಂದು…

5 hours ago

ಮಲೆನಾಡಿನಲ್ಲಿ ನಿಗೂಢವಾಗಿ ಹಾರಾಡಿದ್ದ ವಿಮಾನದ ರಹಸ್ಯ ಬಯಲು..!

ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಬಾಳೆಹೊನ್ನೂರುವರೆಗೆ ಭದ್ರಾ ನದಿ ಪ್ರದೇಶದಲ್ಲಿ ಇತ್ತೀಚೆಗೆ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದ ನಿಗೂಢ ವಿಮಾನ ಸಾರ್ವಜನಿಕರಲ್ಲಿ ಭೀತಿ…

5 hours ago

ಧಾರವಾಡ ಅರಣ್ಯದಲ್ಲಿ ದಾರುಣ ಘಟನೆ: ಕಾರಿನಲ್ಲೇ ಸುಟ್ಟ ಸ್ಥಿತಿಯಲ್ಲಿ ಮಾಜಿ ಶಾಸಕನ ಪುತ್ರ

ಧಾರವಾಡ ಜಿಲ್ಲೆಯ ರಾಮಾಪುರ ಅರಣ್ಯ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ…

16 hours ago

ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ: ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆಗಳಲ್ಲೇ ಹೆಚ್ಚಿನ ಕೊರತೆ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಹತ್ವದ ಮಾಹಿತಿ ಬಹಿರಂಗವಾಗಿದೆ. ವಿಧಾನಸಭೆಯಲ್ಲಿ ಸಂಡೂರು ಕ್ಷೇತ್ರದ ಶಾಸಕ…

21 hours ago

ಸರ್ಕಾರಿ ನೌಕರರಿಗೆ ಹೊಸ ನಿಯಮ: ಮುಂಬಡ್ತಿಗೆ ತರಬೇತಿ ಕಡ್ಡಾಯ

ಕರ್ನಾಟಕ ಸರ್ಕಾರವು ನಾಗರಿಕ ಸೇವೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಮಹತ್ವದ ಹೊಸ ನಿಯಮ ಜಾರಿಗೆ ತಂದಿದೆ. ಇನ್ಮುಂದೆ ಸರ್ಕಾರಿ ನೌಕರರು ಮುಂಬಡ್ತಿ…

22 hours ago

‘ಧುರಂಧರ್’ ಸಿನಿಮಾ ಪ್ರಭಾವವೇ? ಪಾಕಿಸ್ತಾನದಲ್ಲಿ ಗುಪ್ತಚರ ಶೋಧದ ವಿಡಿಯೋ ವೈರಲ್

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಚಿತ್ರದ ಸದ್ದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಕೇಳಿಬರುತ್ತಿರುವಂತೆಯೇ, ಅದರ ಪ್ರಭಾವ…

1 day ago